Kanyadan Policy: ಮಗಳ ಮದುವೆಯ ಚಿಂತೆ ಬಿಟ್ಟುಬಿಡಿ, LIC ಯಿಂದ ಸಿಗಲಿದೆ 22 ಲಕ್ಷ ರೂ.

ಮಗಳ ಮದುವೆಗೆ LIC ಯಿಂದ ಸಿಗಲಿದೆ 22 ಲಕ್ಷ ರೂ.

LIC Kanyadan Policy Investment Details: ಜನಸಾಮಾನ್ಯರಿಗೆ ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ವಿವಿಧ ಯೋಜನೆಯನ್ನು LIC ಪರಿಚಯಿಸಿದೆ. ಪಿಂಚಣಿ ಪಡೆಯಲು, ಜೀವ ವಿಮ ಪಾಲಿಸಿ ಸೇರಿದಂತೆ ಇನ್ನಿತರ ಸಣ್ಣ ಉಳಿತಾಯದ ಯೋಜನೆಗಳನ್ನು LIC ಪರಿಚಯಿಸುತ್ತಿದೆ.

ಇನ್ನು LIC ಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ವಿಶೇಷ ಯೋಜನೆಯನ್ನು ಪರಿಚಯಿಸಲಾಗಿದೆ. ಈ ವಿಶೇಷ ಯೋಜನೆಯಡಿ ಹೂಡಿಕೆ ಮಾಡಿದರೆ ಹೆಣ್ಣು ಮಕ್ಕಳ ಪೋಷಕರು ತಮ್ಮ ಮಗಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯ ಇರುವುದಿಲ್ಲ. LIC ಪರಿಚಯಿಸಿರುವ ಈ ವಿಶೇಷ ಯೋಜನೆಯ ಬಗ್ಗೆ ನಾವೀಗ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಯೋಣ.

LIC Kanyadan Policy Investment Details
Image Credit: Vakilsearch

ಮಗಳ ಮದುವೆಯ ಚಿಂತೆ ಬಿಟ್ಟುಬಿಡು
ಭಾರತೀಯ ಜೀವ ವಿಮಾ ನಿಗಮವು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಹೆಸರು ಎಲ್ ಐ ಸಿಯ ಕನ್ಯಾದಾನ ಪಾಲಿಸಿ ಆಗಿದೆ. LIC Kanyadan Policy ಯು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗೆ ಹಣಕಾಸಿನ ಉಳಿತಾಯ ಮಾಡಲು ಸಹಾಯ ಮಾಡುವ ಯೋಜನೆಯಾಗಿದೆ.

ಎಲ್ ಐ ಸಿ ಕನ್ಯಾದಾನ ಉಳಿತಾಯ ಯೋಜನೆಯನ್ನು ಹೆಣ್ಣು ಮಗುವಿನ ಪೋಷಕರು ನಿರ್ವಹಣೆ ಮಾಡಬಹುದಾದ ಯೋಜನೆಯಾಗಿದೆ. ಇದು ಕುಟುಂಬಕ್ಕೆ ಮತ್ತು ವಿಶೇಷವಾಗಿ ಹೆಣ್ಣು ಮಗುವಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತದೆ. ಇದು 25 ವರ್ಷಗಳ ಅವಧಿಯನ್ನು ಹೊಂದಿದೆ. ವಿಮೆಯ ಕನಿಷ್ಠ ಅವಧಿ 13 ವರ್ಷ ಆಗಿದೆ ಮತ್ತು ಗರಿಷ್ಠ 25 ವರ್ಷಗಳು ಆಗಿದೆ. ಈ ಯೋಜನೆಗೆ ಸೇರಲು ಹೆಣ್ಣು ಮಗುವಿನ ತಂದೆಯ ವಯಸ್ಸು 18 ರಿಂದ 50 ರ ನಡುವೆ ಇರಬೇಕು.

LIC Kanyadan Policy Investment
Image Credit: Goodreturns

LIC ಯಿಂದ ಸಿಗಲಿದೆ 22 ಲಕ್ಷ ರೂ.
ನೀವು 25 ವರ್ಷಗಳ ಕಾಲ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ನೀವು ವರ್ಷಕ್ಕೆ 41,367 ರೂ. ಅಂದರೆ ಪ್ರತಿ ತಿಂಗಳು 3,447 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಹೂಡಿಕೆಯಲ್ಲಿ 25 ವರ್ಷಗಳ ಮೆಚುರಿಟಿಗೆ, ನೀವು 22 ವರ್ಷಗಳವರೆಗೆ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ.

Join Nadunudi News WhatsApp Group

ಮುಕ್ತಾಯದ ನಂತರ, ನೀವು ಸುಲಭವಾಗಿ ಸುಮಾರು 22.5 ಲಕ್ಷ ರೂ.ಗಳ ಲಾಭವನ್ನು ಪಡೆಯಬಹುದು. ಕೆಲವು ಕಾರಣಗಳಿಂದ ಪಾಲಿಸಿಯ ಸಮಯದಲ್ಲಿ ತಂದೆಯು ಹಠಾತ್ ಮರಣಹೊಂದಿದರೆ, ಯಾವುದೇ ಪಾವತಿ ಅಗತ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪ್ರೀಮಿಯಂ ಅನ್ನು ಮನ್ನಾ ಮಾಡಲಾಗುತ್ತದೆ. ವಿಮಾದಾರನ ತಂದೆ ಆಕಸ್ಮಿಕವಾಗಿ ಸಾವನ್ನಪ್ಪಿದರೆ 10 ಲಕ್ಷ ರೂ. ನೀಡಲಾಗುತ್ತದೆ.

LIC Kanyadan Policy
Image Credit: Krishijagran

Join Nadunudi News WhatsApp Group