LIC: ಮಗಳ ಮದುವೆಗೆ ಸಿಗಲಿದೆ 14 ಲಕ್ಷ, ಇಂದೇ LIC ಅಲ್ಲಿ 75 ರೂಪಾಯಿ ಹೂಡಿಕೆ ಮಾಡಿ ಯೋಜನೆ ಆರಂಭಿಸಿ.

ಎಲ್ ಐ ಸಿ ಕನ್ಯಾದಾನ ಉಳಿತಾಯ ಯೋಜನೆಯಲ್ಲಿ 75 ರೂ ಹೂಡಿಕೆ ಮಾಡುವ ಮೂಲಕ ಪಡೆಯಿರಿ 14 ಲಕ್ಷ.

LIC Kanyadan Policy: ಭಾರತೀಯ ಜೀವ ವಿಮಾ ನಿಗಮ (LIC) ಹಲವಾರು ಪಾಲಿಸಿಗಳನ್ನು ಹೊಂದಿದೆ. ಈ ಪಾಲಿಸಿಯಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಅಧೀಕ ಲಾಭ ಪಡೆಯಬಹುದು. ನಿವೃತ್ತಿಗಾಗಿ, ಶಿಕ್ಷಣಕ್ಕಾಗಿ, ವಿವಾಹಕ್ಕಾಗಿ ಎಲ್ ಐ ಸಿಯಲ್ಲಿ ವಿಶೇಷ ಪಾಲಿಸಿಗಳು ಇದೆ. ಇನ್ನು ಎಲ್ ಐ ಸಿ ಪಾಲಿಸಿಯಲ್ಲಿ ಉಳಿತಾಯ ಮಾಡುವುದು ಮಾತ್ರವಲ್ಲದೆ ಪಾಲಿಸಿಯ ಮೂಲಕ ಜೀವ ವಿಮೆಯನ್ನು ಕೂಡ ಪಡೆಯಬಹುದು.

Invest 75 rupees in LIC Kanyadaan policy and get profit up to 14 lakhs.
Image Credit: Loaninfo

ಎಲ್ ಐ ಸಿ ಕನ್ಯಾದಾನ ಪಾಲಿಸಿ
ಭಾರತೀಯ ಜೀವ ವಿಮಾ ನಿಗಮವು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಹೆಸರು ಎಲ್ ಐ ಸಿಯ ಕನ್ಯಾದಾನ ಪಾಲಿಸಿ ಆಗಿದೆ. ಎಲ್ ಐ ಸಿ ಕನ್ಯಾದಾನ ಪಾಲಿಸಿಯು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗೆ ಹಣಕಾಸಿನ ಉಳಿತಾಯ ಮಾಡಲು ಸಹಾಯ ಮಾಡುವ ಯೋಜನೆಯಾಗಿದೆ. ಎಲ್ ಐ ಸಿ ಕನ್ಯಾದಾನ ಉಳಿತಾಯ ಯೋಜನೆಯನ್ನು ಹೆಣ್ಣು ಮಗುವಿನ ಪೋಷಕರು ನಿರ್ವಹಣೆ ಮಾಡಬಹುದಾದ ಯೋಜನೆಯಾಗಿದೆ.

ಈ ಯೋಜನೆಯಲ್ಲಿ ತಂದೆಯ ಮರಣದ ನಂತರ ಪ್ರಯೋಜನವನ್ನು ಮಗಳಿಗೆ ನೀಡಲಾಗುತ್ತದೆ. ಇದು ಕುಟುಂಬಕ್ಕೆ ಮತ್ತು ವಿಶೇಷವಾಗಿ ಹೆಣ್ಣು ಮಗುವಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತದೆ. ಇದು 25 ವರ್ಷಗಳ ಅವಧಿಯನ್ನು ಹೊಂದಿದೆ. ವಿಮೆಯ ಕನಿಷ್ಠ ಅವಧಿ 13 ವರ್ಷ ಆಗಿದೆ. ಅದರ ಗರಿಷ್ಠ 25 ವರ್ಷಗಳು ಆಗಿದೆ. ಈ ಯೋಜನೆಗೆ ಸೇರಲು ಹೆಣ್ಣು ಮಗುವಿನ ತಂದೆಯ ವಯಸ್ಸು 18 ರಿಂದ 50 ರ ನಡುವೆ ಇರಬೇಕು.

Invest 75 rupees in LIC Kanyadaan policy and get profit up to 14 lakhs.
Image Credit: Zeenews

ಎಲ್ ಐ ಸಿ ಕನ್ಯಾದಾನ ಪಾಲಿಸಿಯ ಪ್ರಯೋಜನ
ಇನ್ನು ಈ ಯೋಜನೆಗೆ 250 ರೂಪಾಯಿ ಹೂಡಿಕೆ ಮಾಡುವುದರ ಮೂಲಕ ಖಾತೆ ತೆರೆಯಬಹುದು. ಈ ಯೋಜನೆಯಲ್ಲಿ 75 ರೂಪಾಯಿ ಹೂಡಿಕೆ ಮಾಡಿ ಮಾಸಿಕ ಪ್ರೀಮಿಯಂ ಪಾವತಿಸಿದ 25 ವರ್ಷಗಳ ನಂತರ ನಿಮ್ಮ ಮಗಳ ಮದುವೆಗೆ 14 ಲಕ್ಷ ರೂಪಾಯಿ ಲಭ್ಯವಾಗುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ LIC ಕೇಂದ್ರ ಅಥವಾ LIC ಏಜೆಂಟ್ ಅನ್ನು ಸಂಪರ್ಕ ಮಾಡಬಹುದು.

Join Nadunudi News WhatsApp Group

Join Nadunudi News WhatsApp Group