New Pension: ದೇಶದಲ್ಲಿ ಜಾರಿಗೆ ಬಂತು ಇನ್ನೊಂದು ಪಿಂಚಣಿ ಯೋಜನೆ, ಪ್ರತಿ ತಿಂಗಳು ಸಿಗಲಿದೆ 12,000 ರೂ ಪಿಂಚಣಿ.

ಈ ಯೋಜನೆಯ ಹೂಡಿಕೆಯ ಲಾಭದ ಬಗ್ಗೆ ವಿವರ ತಿಳಿದುಕೊಂಡು ಯೋಜನೆಗೆ ಅರ್ಜಿ ಸಲ್ಲಿಸಿ ಲಾಭ ಪಡೆಯರಿ.

LIC Saral Pension Scheme: ದೇಶದ ಅತಿ ದೊಡ್ಡ ಸರ್ಕಾರೀ ವಿಮಾ ಕಂಪನಿಯಾಗಿರುವ ಎಲ್ ಐಸಿ (LIC) ಜನಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಯನ್ನು ಪರಿಚಯಿಸುತ್ತದೆ. ಜನರ ಜೀವ ಭದ್ರತೆಗಾಗಿ ಜೀವ ವಿಮಾ ಯೋಜನೆಯನ್ನು ನೀಡುವುದರ ಜೊತೆಗೆ ನಿವೃತ್ತಿಯ ನಂತರವು ಆದಾಯವನ್ನು ಪಡೆಯಲು ವಿವಿಧ ಪಿಂಚಣಿ ಯೋಜನೆನ್ನು ಪರಿಚಯಿಸುತ್ತದೆ. ಸಾಮನ್ಯವಾಗಿ 60 ವರ್ಷ ಮೇಲ್ಪಟ್ಟವರು ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ನಿವೃತ್ತಿಯ ನಂತರದ ಜೀವನ ಸ್ವಲ್ಪ ಮಟ್ಟಿಗೆ ಕಷ್ಟವಾಗಿರುತ್ತದೆ. ಏಕೆಂದರೆ ನಿವೃತ್ತಿ ಹೊಂದುವುದು 60 ವರ್ಷದ ನಂತರ . ಈ ವೇಳೆ ದುಡಿಯುವ ಸಾಮರ್ಥ್ಯ ಕಡಿಮೆಯಿರುತ್ತದೆ. ಹೀಗಾಗಿ ಹಣಕ್ಕಾಗಿ ಬೇರೆ ಅವರ ಮೇಲೆ ಅವಲಂಬಿತವಾಗಿರಬೇಕಾಗುತ್ತದೆ. ಆದರೆ ನೀವು ಪಿಂಚಣಿಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿಯ ನಂತರ ನಿಮ್ಮ ಖರ್ಚಿಗೆ ಬೇಕಾಗುವ ಹಣವನ್ನು ಮಾಸಿಕವಾಗಿ ಪಡೆಯಬಹದು.

If you invest once, you will get a pension of Rs 12,000 every month
Image Credit: Navbharattimes

ಎಲ್ ಐಸಿ ಸರಳ್ ಪಿಂಚಣಿ ಯೋಜನೆ
ಎಲ್ ಐಸಿಯಲ್ಲಿ ವಿವಿಧ ಪಿಂಚಣಿ ಯೋಜನೆಗಳು ಲಭ್ಯವಿದ್ದು ಅದರಲ್ಲಿ ಎಲ್ ಐಸಿ(LIC) ಸರಳ್ ಪಿಂಚಣಿ ಯೋಜನೆಯು ಪ್ರಮುಖವಾಗಿದೆ. ನೀವು ಈ ಯೋಜನೆಯಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡುವ ಆಯ್ಕೆಯನ್ನು ಪಡೆಯಬಹುದು. ನಿಮ್ಮ ಹೂಡಿಕೆಯ ಮೊತ್ತದ ಆಧಾರದ ಮೇಲೆ ನಿವೃತ್ತಿಯ ನಂತರ ನೀವು ಮಾಸಿಕ ಪಿಂಚಣಿಯನ್ನು ಪಡೆದು ಆರಾಮದಾಯಕ ನಿವೃತ್ತಿಯ ಬದುಕನ್ನು ಸಾಗಿಸಬಹುದು.

ಈ ಯೋಜನೆಯ ಹೂಡಿಕೆಯ ಲಾಭದ ಬಗ್ಗೆ ವಿವಿರ ತಿಳಿದುಕೊಂಡು ಯೋಜನೆಗೆ ಅರ್ಜಿ ಸಲ್ಲಿಸಿ ಲಾಭ ಪಡೆಯರಿ. ಎಲ್ ಐಸಿ ಸರಳ ಪಿಂಚಣಿ ಯೋಜನೆಯ ಮೂಲಕ 40 ವರ್ಷದಿಂದ 80 ವರ್ಷದ ವಯಸ್ಸಿನವರು ಈ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿ ಯೋಜನೆಯ ಲಾಭವನ್ನು ಪಡೆಯಬಹುದು. ಈ ಪಾಲಿಸಿಯಲ್ಲಿ ಪ್ರೀಮಿಯಂ ಅನ್ನು ಕೇವಲ ಒಂದು ಬಾರಿ ಮಾತ್ರ ಠೇವಣಿ ಮಾಡಲಾಗುತ್ತದೆ. ಇನ್ನು ಪಿಂಚಣಿದಾರರು ಮರಣ ಹೊಂದಿದರೆ, ವ್ಯಕ್ತಿಯ ನಾಮಿನಿ ಠೇವಣಿ ಮಾಡಿದ ಮೊತ್ತದ ಹಣವನ್ನು ಮರಳಿ ಪಡೆಯಬಹುದಾಗಿದೆ.

LIC Saral Pension Scheme
Image Credit: Navbharattimes

ಒಮ್ಮೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಸಿಗಲೇ 12,000 ರೂ ಪಿಂಚಣಿ
LIC ಸರಳ ಪಿಂಚಣಿ ಯೋಜನೆಯ ಪಾಲಿಸಿದಾರರು 6 ತಿಂಗಳ ನಂತರ ಪಾಲಿಸಿಯನ್ನು ಯಾವುದೇ ಸಮಯದಲ್ಲಿ ಬೇಕಾದರೂ ಸರೆಂಡರ್ ಮಾಡಬಹುದಾಗಿದೆ. ಪಾಲಿಸಿ ಪಡೆದ ನಂತರ ಪಾಲಿಸಿದಾರರ ಜೀವತಾವದಿಯವರೆಗೂ ಪಿಂಚಣಿಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಇನ್ನು ಪಾಲಿಸಿದಾರರ ಮರಣದ ನಂತರ ಹಣವನ್ನು ನಾಮಿನಿಗೆ ನೀಡಲಾಗುತ್ತದೆ.

Join Nadunudi News WhatsApp Group

ಇನ್ನು 42 ವರ್ಷ ವಯಸ್ಸಿನ ವ್ಯಕ್ತಿಯು 30 ಲಕ್ಷ ರೂ. ವರ್ಷಾಶನವನ್ನು ತೆಗೆದುಕೊಂಡರೆ ಅವರು ಮಾಸಿಕ ಸುಮಾರು 12,388 ರೂ.ಗಳ ಪಿಂಚಣಿ ಪಡೆಯಬಹುದು. ಈ ಯೋಜನೆಯಡಿ ಮಾಸಿಕವಾಗಿ ಕನಿಷ್ಠ 1000 ರೂ. ಹೂಡಿಕೆ ಮಾಡಬಹುದು ಹೂಡಿಕೆಗೆ ಗರಿಷ್ಟ ಮಿತಿಯಿಲ್ಲ. LIC ಸರಳ ಪಿಂಚಣಿ ಯೋಜನೆಯ ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಪ್ರೀಮಿಯಂ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ.

Join Nadunudi News WhatsApp Group