Liquor Price Update: ಎಣ್ಣೆ ಪ್ರಿಯರಿಗೆ ಕೊನೆಗೂ ಗುಡ್ ನ್ಯೂಸ್, ಈ ಮದ್ಯಗಳ ಬೆಲೆ ಇಳಿಕೆಗೆ ಮುಂದಾದ ಸರ್ಕಾರ.

ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್, ಈ ಮದ್ಯಗಳ ಬೆಲೆ ಇಳಿಕೆ

Liquor Price Down: ಸದ್ಯ ರಾಜ್ಯದಲ್ಲಿ ಬೆಲೆ ಏರಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದ ಜನತೆ ಬೆಲೆ ಏರಿಕೆಗೆ ರೋಸಿಹೋಗಿದ್ದಾರೆ ಎನ್ನಬಹುದು. ಸದ್ಯ ಯಾವುದೇ ವಸ್ತುವನ್ನು ಖರೀದಿಸಬೇಕಿದ್ದರು ಕೂಡ ಜನರು ದುಪ್ಪಟ್ಟು ಹಣವನ್ನು ನೀಡುವ ಪರಿಸ್ಥಿತಿ ಬಂದೊದಗಿದೆ.

ಇನ್ನು ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಯಾಗುತ್ತಿರುವ ಬಗೆ ಎಲ್ಲರಿಗು ತಿಳಿದಿರಬಹುದು. ಲೋಕಸಭಾ ಚುನಾವಣೆಯ ಮೊದಲು ಹಾಗೂ ಚುನಾವಣೆಯ ನಂತರ ಮದ್ಯದ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ಇದರಿಂದಾಗಿ ಮದ್ಯಪ್ರಿಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು. ಸದ್ಯ ಮದ್ಯ ಪ್ರಿಯರಿಗೆ ಸರ್ಕಾರದಿಂದ ಸಿಹಿ ಸುದ್ದಿ ಹೊರಬಿದ್ದಿದೆ.

alcohol price down in india
Image Credit: Original Source

ಎಣ್ಣೆ ಪ್ರಿಯರಿಗೆ ಕೊನೆಗೂ ಗುಡ್ ನ್ಯೂಸ್
ಜುಲೈ 1ರಿಂದ ರಾಜ್ಯದಲ್ಲಿ ದುಬಾರಿ ಬೆಲೆಯ ಮದ್ಯದ ಬೆಲೆ ಇಳಿಕೆಯಾಗಲಿದ್ದು, ನಷ್ಟ ತಗ್ಗಿಸಲು 16 ಸ್ಲ್ಯಾಬ್ ದರ ಇಳಿಕೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ನಿಟ್ಟಿನಲ್ಲಿ ಸರಕಾರ ಅಬಕಾರಿ ಸುಂಕ ಕಡಿತದ ಹಿನ್ನೆಲೆಯಲ್ಲಿ ನಷ್ಟ ತಗ್ಗಿಸಲು ಕರಡು ಅಧಿಸೂಚನೆ ಹೊರಡಿಸಿದ್ದು, 16 ಸ್ಲ್ಯಾಬ್ ಗಳ ಬೆಲೆ ಇಳಿಕೆಯಾಗಿದ್ದು, ಹೊರ ರಾಜ್ಯಗಳ ಮದ್ಯದ ಬೆಲೆ ಆಧರಿಸಿ ಹೊಸ ದರ ನಿಗದಿ ಮಾಡಲಾಗಿದೆ. ಆದರೆ ಇಲ್ಲೂ ಕೂಡ ಬಡವರ ಬ್ರಾಂಡ್ ಗಳ ಬೆಲೆ ಹೆಚ್ಚಿಸಿ ಶ್ರೀಮಂತರ ಬ್ರಾಂಡ್ ಗಳ ಬೆಲೆ ಇಳಿಸುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಸರ್ಕಾರ ಮಾಡಿದೆ.

ಈ ಮದ್ಯಗಳ ಬೆಲೆ ಇಳಿಕೆಗೆ ಮುಂದಾದ ಸರ್ಕಾರ
ಇನ್ನು 180 ml ಶಿವಾಸ್ ಈ ಹಿಂದೆ 1009 ರೂ.ಗೆ ಇತ್ತು ಆದರೆ ಈಗ ಈ ಬ್ರ್ಯಾಂಡ್ 872 ರೂ.ಗೆ ಇಳಿಕೆಯಾಗಿದೆ. ಬೆಲೆ 137 ರೂ. ಇಳಿಕೆಯಾಗಿದೆ. ಹಾಗೆಯೆ 905 ರೂ.ಗೆ ಲಭ್ಯವಿದ್ದ ಜಾನಿ ವಾಕರ್ ಈಗ 775 ರೂ.ಗೆ ಲಭ್ಯವಾಗಲಿದೆ. ಇನ್ನು ರೂ. 678 ಇದ್ದ ಬ್ಲಾಕ್ ಅಂಡ್ ವೈಟ್ ರೂ. 592ಕ್ಕೆ ದೊರೆಯಲಿದೆ. 100 ಪೈಪರ್‌ ಗಳು ಮೊದಲು 678 ರೂ.ಗೆ ಲಭ್ಯವಿತ್ತು, ಈಗ ಬೆಲೆ 592 ರೂ.ಗೆ ಇಳಿಕೆಯಾಗಿದೆ.

some of alcohol price down in india
Image Credit: Original Source

ಹಾಗೆಯೆ 383 ರೂ.ಗೆ ಲಭ್ಯವಿದ್ದ ರಾಯಲ್ ಚಾಲೆಂಜರ್ಸ್ ವಿಸ್ಕಿ ಈಗ 290 ರೂ.ಗೆ ಲಭ್ಯವಿರುತ್ತದೆ. ಇನ್ನೂ ಮೊದಲು ಓಲ್ಡ್ ಮಾಂಕ್ 180 ಎಂಎಲ್‌ಗೆ 159 ರೂ. ಇತ್ತು, ಈಗ 9 ರೂಪಾಯಿ ಬೆಲೆ ಇಳಿಕೆಯಾಗಿದೆ. 123 ಇದ್ದ 8PM ಬ್ರಾಂಡ್ ಈಗ 128 ರೂ.ಗೆ ಇಳಿದಿದೆ. 100 ರೂ. ಇದ್ದ OT ಈಗ 104 ರೂ. ಆಗಿದೆ. 100 ರೂ ಇದ್ದ BPR ಈಗ 104 ರೂ. ತಲುಪಿದೆ. ಅತಿ ಹೆಚ್ಚು ಮಾರಾಟವಾಗುವ ರಾಜಾ ವಿಸ್ಕಿ ಮೊದಲು 80 ರೂಪಾಯಿಗೆ ಲಭ್ಯವಿತ್ತು, ಈಗ ಅದರ ಬೆಲೆ 4 ರೂಪಾಯಿಗಳಷ್ಟು ಹೆಚ್ಚಾಗಿದೆ.

Join Nadunudi News WhatsApp Group

Join Nadunudi News WhatsApp Group