Loan EMI: ಈಗ 50 ಲಕ್ಷ ಗೃಹ ಸಾಲವನ್ನ 10 ವರ್ಷದಲ್ಲಿ ತೀರಿಸಬಹುದು, ಈ ವಿಧಾನದ ಮೂಲಕ ಸಾಲದ EMI ಪಾವತಿಸಿ.

RBI ಈ ನಿಯಮಗಳನ್ನು ಪಾಲಿಸುವುದರ ಮೂಲಕ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.

Loan EMI Update: ಇತ್ತೀಚಿಗೆ RBI ಸಾಲಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ. ಬ್ಯಾಂಕ್ ನಲ್ಲಿ ಸಾಲಪಡೆದವರಿಗೆ RBI ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ.

ಬ್ಯಾಂಕ್ ನಲ್ಲಿ ಸಾಲ ಪಡೆದವರು RBI ನ ನೀವುಯಾಮದ ಬಗ್ಗೆ ತಿಳಿಯುವುದು ಉತ್ತಮ. ಇನ್ನು ನೀವು ಬ್ಯಾಂಕ್ ನಲ್ಲಿ ಸಾಲ ಪಡೆಯುವ ಮುನ್ನ ಕೆಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. RBI ನ ಎಲ್ಲಾ ನಿಯಮಗಳನ್ನು ಪಾಲಿಸುವುದರ ಮೂಲಕ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.

Important information for bank loan takers
Image Credit: Financialexpress

ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡವರಿಗೆ ಮಹತ್ವದ ಮಾಹಿತಿ
ಅನೇಕ ಬ್ಯಾಂಕುಗಳು ತನ್ನ EMI ಹೆಚ್ಚಿಸುವ ಬದಲಾಗಿ ಸಾಲದ ಅವಧಿಯನ್ನು ವಿಸ್ತರಿಸುತ್ತದೆ. ಸಾಲದ ಅವಧಿ ಹೆಚ್ಚಾದಂತೆ ಮಾಸಿಕ ಪಾವತಿ ಹೆಚ್ಚಾಗುತ್ತಾ ಸಾಲಗಾರರಿಗೆ ಹೆಚ್ಚಿನ ಹೊರೆ ಬೀಳುತ್ತದೆ. ಹೀಗಾಗಿ ಕಡಿಮೆ ಸಾಲದ ಅವಧಿಯ ಆಯ್ಕೆ ಮಾಡುಕೊಳ್ಳುವುದು ಮುಖ್ಯ.

ನೀವು 25 ವರ್ಷಕ್ಕೆ ತೆಗೆದುಕೊಂಡ 50 ಲಕ್ಷ ಗೃಹ ಸಾಲವನ್ನೂ ಕೂಡ ಕೇವಲ 10 ವರ್ಷಗಳಲ್ಲಿ ಮರುಪಾವತಿ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಕೆಲ ವಿಧಾನದ ಮೂಲಕ ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು. 50 ಲಕ್ಷ ಸಾಲವನ್ನು 10 ವರ್ಷಗಳಲ್ಲಿ ಮರುಪಾವತಿ ಮಾಡುವ ವಿಧಾನ ಇಲ್ಲಿದೆ.

Loan EMI Update
Image Credit: Fisdom

50 ಲಕ್ಷ ಸಾಲದ ಮರುಪಾವತಿ 10 ವರ್ಷಗಳಲ್ಲಿ ಹೇಗೆ ಸಾಧ್ಯ..?
ಸಾಲದ ಬಡ್ಡಿ ಪಾವತಿಯಲ್ಲಿ ಹೆಚ್ಚಳ ಹಾಗೂ ಹೆಚ್ಚುವರಿ EMI ಪಾವತಿಯ ಮೂಲಕ ನೀವು ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು. ನೀವು ಸಾಮಾನ್ಯವಾಗಿ ಸಾಲವನ್ನು ಮರುಪಾವತಿಸಿದರೆ 50 ಲಕ್ಷ ರೂಪಾಯಿ ಸಾಲಕ್ಕೆ ನೀವು ಅದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗಬಹುದು.

Join Nadunudi News WhatsApp Group

8.5 ರಷ್ಟು ದರದಲ್ಲಿ, ನೀವು 50 ಲಕ್ಷ ರೂಪಾಯಿಗಳ ಸಾಲದ ಮೇಲೆ ಪ್ರತಿ ತಿಂಗಳು 40,261 ರೂಪಾಯಿಗಳ EMI ಅನ್ನು ಪಾವತಿಸಬೇಕಾಗುತ್ತದೆ. ನೀವು 25 ವರ್ಷಗಳಲ್ಲಿ 70 ರಿಂದ 71 ಲಕ್ಷ ರೂಪಾಯಿಗಳನ್ನು ಬಡ್ಡಿಗೆ ಪಾವತಿಸುತ್ತಿದ್ದೀರಿ. 50 ಲಕ್ಷ ಸಾಲಕ್ಕಾಗಿ ಬ್ಯಾಂಕ್‌ ಗೆ ಒಟ್ಟು 1.20 ಕೋಟಿ ರೂ. ಪಾವತಿಸಬೇಕಾಗುತ್ತದೆ.

Loan EMI Latest update
Image Credit: News18

ಈ ಎರಡು ವಿಧಾನ ನಿಮ್ಮ ಸಾಲದ ಹೊರೆ ಕಡಿಮೆ ಮಾಡಲಿದೆ
*ನೀವು ಪ್ರತಿ ವರ್ಷ EMI ಅನ್ನು 7.5 ಪ್ರತಿಶತದಷ್ಟು ಹೆಚ್ಚಿಸುವ ಮೂಲಕ ಸಾಲವನ್ನು ಬೇಗನೆ ಮುಗಿಸಬಹುದು. ಉದಾಹರಣೆಗೆ, ನೀವು ಪ್ರತಿ ವರ್ಷ EMI ಅನ್ನು 3019 ರೂಪಾಯಿಗಳಷ್ಟು ಹೆಚ್ಚಿಸಿದರೆ, ನಿಮ್ಮ ಸಾಲವು 12 ವರ್ಷಗಳಲ್ಲಿ ಕೊನೆಗೊಳ್ಳುತ್ತದೆ. ಈ ಮೂಲಕ ನೀವು 30 ಲಕ್ಷ ಕಡಿಮೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

*ನೀವು ಪ್ರತಿ ವರ್ಷ ಹೆಚ್ಚುವರಿ EMI ಪಾವತಿಸುವ ಮೂಲಕ ಇದನ್ನು ಮಾಡಬಹುದು. ನೀವು ಪ್ರತಿ ವರ್ಷ ಒಂದು ಹೆಚ್ಚುವರಿ EMI ಅನ್ನು ಪಾವತಿಸುವ ಮೂಲಕ 19 ರಿಂದ 20 ವರ್ಷಗಳಲ್ಲಿ ಸಾಲವನ್ನು ಪೂರ್ಣಗೊಳಿಸಿದರೆ. ನೀವು ಪ್ರತಿ ತಿಂಗಳು ಸ್ವಲ್ಪ ಮೊತ್ತವನ್ನು ಉಳಿಸುವ ಮೂಲಕ ವರ್ಷದ ಕೊನೆಯಲ್ಲಿ ಹೆಚ್ಚುವರಿ EMI ಗೆ ವ್ಯವಸ್ಥೆ ಮಾಡಬಹುದು.

Join Nadunudi News WhatsApp Group