Lower Berth Reservation: ಹಿರಿಯ ನಾಗರಿಕರಿಗೆ ರೈಲ್ವೆಯಿಂದ ಗುಡ್ ನ್ಯೂಸ್, ಇನ್ನುಮುಂದೆ ಹಿರಿಯ ನಾಗರಿಕರು ಈ ಸೌಲಭ್ಯಕ್ಕೆ ಅರ್ಹರು.

ಇನ್ನುಮುಂದೆ ಹಿರಿಯ ನಾಗರಿಕರು ಈ ಸೌಲಭ್ಯಕ್ಕೆ ಅರ್ಹರು

Lower Berth Reservation For Senior Citizens: ಜನರು ಹೆಚ್ಚಾಗಿ ದೂರದ ಪ್ರಯಾಣಕ್ಕೆ ರೈಲು ಪ್ರಯಾಣವನ್ನು ಆರಿಸುತ್ತಾರೆ. ಪ್ರತಿನಿತ್ಯ ರೈಲುಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಿರುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಇಲಾಖೆಯು ಸಾಕಷ್ಟು ಸೌಕರ್ಯವನ್ನು ನೀಡುತ್ತಿದೆ.

ರೈಲು ಪ್ರಯಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಬಾರದವು ಎನ್ನುವ ಉದ್ದೇಶದಿಂದ ಈಗಾಗಲೇ ಸಾಕಷ್ಟು ಸೌಲಭ್ಯವನ್ನು ವಿಧಿಸಿದೆ. ಸದ್ಯ ರೈಲ್ವೆ ಇಲಾಖೆಯು ಹಿರಿಯನಾಗರೀಕರಿಗಾಗಿ ವಿಶೇಷ ಆಸನಗಳ್ನು ಕೂಡ ನಿಗದಿಪಡಿಸಿದೆ. ಇನ್ನುಮುಂದೆ ರೈಲಿನಲ್ಲಿ ಪ್ರಯಾಣಿಸಲು ಹಿರಿಯ ನಾಗರಿಕರು ಸೀಟಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

Lower Berth Reservation For Senior Citizens
Image Credit: Live Mint

ಹಿರಿಯ ನಾಗರಿಕರಿಗೆ ರೈಲ್ವೆಯಿಂದ ಗುಡ್ ನ್ಯೂಸ್
ಪ್ರಯಾಣಿಕರಿಗಾಗಿ ರೈಲುಗಳಲ್ಲಿ ಊಟ, ತಿಂಡಿ, ನಿದ್ದೆ ಯಾವುದಕ್ಕೂ ತೊಂದರೆ ಆಗಬಾರದು ಎಂದು ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಇನ್ನು ರೈಲುಪ್ರಯಾಣದಲ್ಲಿ ಹಿರಿಯ ನಾಗರಿಕರು ಹೆಚ್ಚು ಪ್ರಯಾಣ ಮಾಡಲು ಬಯಸುತ್ತಾರೆ. ಏಕೆಂದರೆ ರೈಲುಗಳಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸೌಲಭ್ಯವನ್ನು ನೀಡಲಾಗುತ್ತದೆ. ಇದೀಗ ಹಿರಿಯ ನಾಗರಿಕರು ರೈಲ್ವೆ ಪ್ರಯಾಣವನ್ನು ಇನ್ನಷ್ಟು ಅನುಕೂಲ ಮಾಡಿಕೊಡಲು ರೈಲ್ವೆ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಸಾಮಾನ್ಯವಾಗಿ ರೈಲು ಪ್ರಯಾಣಿಕರು ತಮ್ಮ ಅನುಕೂಲಕ್ಕಾಗಿ ಪ್ರಯಾಣದ ಮುಂಚಿತವಾಗಿಯೇ ಸೀಟ್ ಗಳನ್ನೂ ಕಾಯ್ದಿರಿಸುತ್ತಾರೆ. ಇನ್ನು ಪ್ರಯಾಣಿಕರು ಆರಾಮದಾಯಕ ಆಸನಗಳನ್ನು ಬುಕ್ ಮಾಡಲು ಇಷ್ಟಪಡುತ್ತಾರೆ. ಆರಾಮದಾಯ ಆಸನಗಳಲ್ಲಿ Lower Berth ಅಥವಾ Side lower berth ಹೆಚ್ಚಿನ ಜನರ ಆಯ್ಕೆಯಾಗಿರುತ್ತದೆ. ವಯಸ್ಸಾದ ಪ್ರಯಾಣಿಕರಿಗೆ ಸಹಾಯ ಮಾಡಲು ಭಾರತೀಯ ರೈಲ್ವೆ ಹಲವಾರು ನಿಯಮಗಳನ್ನು ಮಾಡಿದೆ. ಲೋವರ್ ಬರ್ತ್‌ಗಳಿಗೆ ಸಂಬಂಧಿಸಿದ ನಿಯಮವೂ ಇದೆ. ಇದರ ಅಡಿಯಲ್ಲಿ, ಹಿರಿಯ ನಾಗರಿಕರಿಗೆ ಲೋವರ್ ಬರ್ತ್‌ಗಳನ್ನು ಕಾಯ್ದಿರಿಸಬಹುದು.

Lower Berth Reservation
Image Credit: tv9telugu

ಇನ್ನುಮುಂದೆ ಹಿರಿಯ ನಾಗರಿಕರು ಈ ಸೌಲಭ್ಯಕ್ಕೆ ಅರ್ಹರು
ಸಾಮಾನ್ಯ ಕೋಟಾದಲ್ಲಿ ಸೀಟುಗಳ ಹಂಚಿಕೆಯನ್ನು ಮೊದಲು ಬಂದವರಿಗೆ ಮೊದಲ ಸೇವೆ ಆಧಾರದ ಮೇಲೆ ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಯಾರ ಇಷ್ಟಗಳು ಅಥವಾ ಇಷ್ಟಪಡದಿರುವುದು ಮಾನ್ಯವಾಗಿರುವುದಿಲ್ಲ. ಆದಾಗ್ಯೂ, ಪ್ರಯಾಣಿಕರಿಗೆ ಲೋವರ್ ಬರ್ತ್ ಅಗತ್ಯವಿದ್ದರೆ ಮತ್ತು ಬುಕಿಂಗ್ ಸಮಯದಲ್ಲಿ ಅದನ್ನು ಸ್ವೀಕರಿಸದಿದ್ದರೆ, ಅದಕ್ಕಾಗಿ TTE ಯನ್ನು ಸಂಪರ್ಕಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಲೋವರ್ ಬರ್ತ್ ಪಡೆಯಲು ಅವಕಾಶವಿದ್ದರೆ, ಅದನ್ನು ನಿಗದಿಪಡಿಸಬಹುದು. ರೈಲ್ವೆಯು ಹಿರಿಯ ನಾಗರಿಕರು ಆರಾಮದಾಯಕ ಪ್ರಯಾಣಕ್ಕಾಗಿ ಅನೇಕ ನಿಬಂಧನೆಯನ್ನು ಮಾಡಿದ್ದೂ, ಅದರಲ್ಲಿ ಲೋವರ್ ಬರ್ತ್ ಮೀಸಲು ಸಹ ಒಂದಾಗಿದೆ.

Join Nadunudi News WhatsApp Group

Indian Railway New Update
Image Credit: Goodreturns

Join Nadunudi News WhatsApp Group