Ration Scheme: ರೇಷನ್ ಕಾರ್ಡ್ ಇದ್ದವರರಿಗೆ ಅಡುಗೆ ಎಣ್ಣೆ ಮತ್ತು ಸಕ್ಕರೆ ಜೊತೆಗೆ 450 ರೂ ಗಳಿಗೆ ಗ್ಯಾಸ್, ಕೇಂದ್ರದ ಘೋಷಣೆ.

ಚುನಾವಣೆಯ ಕಾರಣ BJP ಸರ್ಕಾರ ಸಾರ್ವಜನಿಕರಿಗೆ ಇನ್ನೊಂದು ಘೋಷಣೆ ಮಾಡಿದೆ.

BJP Government Scheme: ಜನಸಾಮಾನ್ಯರಿಗಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಸೌಲಭ್ಯವನ್ನು ನೀಡಿದೆ. ದೇಶದ ಬಡವರಿಗಾಗಿ ಹಲವಾರು ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಸರ್ಕಾರದ ಅನೇಕ ಯೋಜನೆಗಳು ಬಡ ನಾಗರಿಕರಿಗೆ ಉಪಯೋಗವಾಗಿದೆ. ಇದೀಗ ಪಡಿತರ ಚೀಟಿ (Ration Card) ದಾರರಿಗೆ ಮತ್ತೊಂದು ಗುಡ್ ನ್ಯೂಸ್ ಲಭಿಸಿದೆ.

Madhya Pradesh BJP Government Scheme
Image Credit: The Hindu

ಪಡಿತರ ಚೀಟಿದಾರರಿಗೆ ಮಹತ್ವದ ಘೋಷಣೆ
ಇದೀಗ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಿದ್ಧತೆ ನೆಡೆಯುತ್ತಿದೆ. ಈ ನಡವೆ BJP ಅಧ್ಯಕ್ಷರಾದ JP Nadda ಅವರು ಮಧ್ಯಪ್ರದೇಶದಲ್ಲಿ ಪ್ರಣಾಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ 15 ಕೋಟಿ ಕುಟುಂಬಗಳ 80 ಕೋಟಿ ಫಲಾನುಭವಿಗಳಿಗೆ ಐದು ವರ್ಷಗಳವರೆಗೆ ಉಚಿತ ಆಹಾರ ಯೋಜನೆಯನ್ನು ವಿತರಿಸುದಾಗಿ ಘೋಷಣೆ ಹೊರಡಿಸಿದ್ದಾರೆ.

ಅಂದರೆ ಈ ಯೋಜನೆಯನ್ನು 31 ಡಿಸೆಂಬರ್ 2028 ರ ವರೆಗೆ ವಿಸ್ತರಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಇದೀಗ ಮಧ್ಯಪ್ರದೇಶದ BJP ಅಧ್ಯಕ್ಷರು ಪಡಿತರ ಚೀಟಿದಾರರಿಗೆ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.

BJP Government Scheme
Image Credit: Newsonair

Madhya Pradesh BJP Government Schemes
*ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಈಗಾಗಲೇ ನೀಡುತಿದ್ದ ಗೋಧಿ, ಅಕ್ಕಿ, ಬೇಳೆಕಾಳು ಗಳ ಜೊತೆಗೆ ಸಾಸಿವೆ ಎಣ್ಣೆ ಹಾಗೂ ಸಕ್ಕರೆಯನ್ನು ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.

*450 ರೂಪಾಯಿಗೆ ಗ್ರಹೋಪಯೋಗಿ ಸಿಲಿಂಡರ್

Join Nadunudi News WhatsApp Group

*ಒಂದು ಲಕ್ಷ ಮಹಿಳೆಯರಿಗೆ ಶಾಶ್ವತ ಮನೆ ಸೌಲಭ್ಯ

*ಲಾಡ್ಲಿ ಲಕ್ಷ್ಮಿ ಮತ್ತು ಬಹನ್ ಯೋಜನೆ ಮೂಲಕ ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸಲಾಗುತ್ತದೆ.

*ಆದಿವಾಸಿಗಳ ಕಲ್ಯಾಣಕ್ಕೆ 3 ಸಾವಿರ ಕೋಟಿ

*ಇದರ ಜೊತೆಗೆ ವೈದ್ಯಕೀಯ ಶಿಕ್ಷಣವನ್ನು ಒದಗಿಸಿದ ಮೊದಲ ರಾಜ್ಯ ಮಧ್ಯಪ್ರದೇಶವಾಗಿದೆ ಎಂದು ಹೇಳಿದ್ದಾರೆ.

Join Nadunudi News WhatsApp Group