Mahindra Thar: ಈ ಒಂದು ಕಾರಣಕ್ಕೆ ಮಹಿಂದ್ರಾ ಥಾರ್ ಕಾರನ್ನ ಹೆಚ್ಚು ಖರೀದಿಸುತ್ತಿದ್ದಾರೆ ಜನರು, ದಾಖಲೆಯ ಬುಕಿಂಗ್

ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿದೆ ಮಹಿಂದ್ರಾ ಥಾರ್, ದಾಖಲೆಯ ಮಾರಾಟ

Mahindra Thar Booking 2024: ದೇಶಿಯ ಮಾರುಕಟ್ಟೆಯಲ್ಲಿ ಆಫ್ ರೋಡರ್ ವಿಭಾಗದಲ್ಲಿ ಮಹಿಂದ್ರಾ ಥಾರ್ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಆ ರೋಡರ್ ವಿಭಾಗದಲ್ಲಿ ಕಿಂಗ್ ಆಗಿರುವ ಮಹಿಂದ್ರಾ ಥಾರ್ ಸದ್ಯ ಮಾರುತಿ ಜಿಮ್ನಿಗೆ ಬಾರಿ ಪೈಪೋಟಿ ನೀಡುತ್ತಿದೆ. ಇನ್ನು ಮಹಿಂದ್ರಾ ಥಾರ್ 2024 ರ ಜನವರಿಯಲ್ಲಿ ಬಾರಿ ಬುಕಿಂಗ್ ಕಂಡುಕೊಳ್ಳುವ ಮೂಲಕ ಮಾರಾಟದಲ್ಲಿ ದಾಖಲೆ ಸೃಷ್ಟಿಸಲು ಮುಂದಾಗಿದೆ. ಅತ್ಯಾಧುನಿಕ ಫೀಚರ್ ಇರುವ ಮಹಿಂದ್ರಾ ಥಾರ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ ಎನ್ನಬಹುದು.

Mahindra Thar Price In India
Image Credit: Live Mint

ಮಹಿಂದ್ರಾ ಥಾರ್ SUV ಖರೀದಿಸಲು ಜನರ ಕ್ಯೂ
ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ನಿತರ SUV ಗಳಿಗೆ ಹೋಲಿಸಿದರೆ ಮಹಿಂದ್ರಾ ಥಾರ್ ಮೇಲಿನ ಬೇಡಿಕೆ ಹೆಚ್ಚಿದೆ. ಮಹೀಂದ್ರಾ ಕಂಪನಿಯು ಜನವರಿ 2024 ರಲ್ಲಿ ಥಾರ್‌ ನ ಒಟ್ಟು 6,059 ಯುನಿಟ್‌ ಗಳನ್ನು ಮಾರಾಟ ಮಾಡಿದೆ. ಅದರಲ್ಲಿ ಡೀಸೆಲ್ ರೂಪಾಂತರಗಳು 5,402 ಯುನಿಟ್‌ ಗಳಷ್ಟು ಮಾರಾಟ ಮಾಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ ಘಟಕಗಳಿಗೆ ಹೋಲಿಸಿದರೆ ಇದು ಸುಮಾರು 100 ಪ್ರತಿಶತದಷ್ಟು ಹೆಚ್ಚಳವಾಗಿದೆ. ಕಂಪನಿಯು ಕಳೆದ ವರ್ಷ ಡೀಸೆಲ್ ಮಾದರಿಯ 4,076 ಯುನಿಟ್‌ ಗಳನ್ನು ಮಾರಾಟ ಮಾಡಿದೆ. ಇದನ್ನು ಗಮನಿಸಿದರೆ ಜನವರಿಯಲ್ಲಿ Mahindra Thar Diesel ರೂಪಾಂತರ ಹೆಚ್ಚು ಮಾರಾಟವಾಗಿದೆ ಎನ್ನುವುದು ತಿಳಿಯುತ್ತದೆ. ಕಡಿಮೆ ಬಜೆಟ್ ನಲ್ಲಿ ಖರೀದಿಸಬಹುದಾದ UV ಇದಾಗಿದ್ದು, ಹೆಚ್ಚಿನ ಫೀಚರ್ ಇರುವುದರಿಂದ ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ.

Mahindra Thar Booking
Image Credit: Carwale

Mahindra Thar ಮಾದರಿಯ ಎಂಜಿನ್ ಸಾಮರ್ಥ್ಯದ ಬಗ್ಗೆ ತಿಳಿಯೋಣ
ನೀವು ಮಹಿಂದ್ರಾ ಥಾರ್ ನಲ್ಲಿ ವಿವಿಧ ಎಂಜಿನ್ ಆಯ್ಕೆಯನ್ನು ನೋಡಬಹುದು. ಇನ್ನು ಕಂಪನಿಯು ಇನ್ನು ಕಂಪನಿಯು 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದ್ದು, ಈ ಎಂಜಿನ್ 150 ಬಿಹೆಚ್‌ ಪಿ ಪವರ್ ಮತ್ತು 320 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೆ 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎರಡು ಎಂಜಿನ್ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಥಾರ್ ನಲ್ಲಿ ಅಳವಡಿಸಲಾದ ಫೀಚರ್ ಬಗ್ಗೆ ಹೇಳುವುದಾದರೆ, 7-ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್, ರೂಫ್ ಮೌಂಟೆಡ್ ಆಡಿಯೋ ಸ್ಪೀಕರ್‌ ಗಳು, ಮಲ್ಟಿ ಕಲರ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್ ಮತ್ತು ಸ್ಟೀರಿಂಗ್ ವೀಲ್ ಮ್ಯುಟೆಂಟ್ ಕಂಟ್ರೋಲ್ ನ ಫೀಚರ್ ಗಳನ್ನೂ ನೋಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group