Maruti Suzuki XL6: 26 Km ಮೈಲೇಜ್ ಕೊಡುವ ಈ ಮಾರುತಿ ಕಾರ್ ಖರೀದಿಸಲು ಮುಗಿಬಿದ್ದ ಜನರು, ದಾಖಲೆಯ ಬುಕಿಂಗ್

26km ಮೈಲೇಜ್ ನೀಡುವ ಈ ಮಾರುತಿ MPV ಬೆಲೆ ಇಷ್ಟು ಕಡಿಮೆ...!

Maruti Suzuki XL6 Sales Details: Maruti Suzuki ಹೊಸ ಹೊಸ ಕಾರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿರುತ್ತದೆ. ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ ಗುರುತಿಸಿಕೊಂಡಿದೆ.

ಇನ್ನು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು 2023 ರಲ್ಲಿ ತನ್ನ Maruti Suzuki XL6 ಮಾದರಿಯನ್ನು ಪರಿಚಯಿಸಿತ್ತು. ಈ ಮಾದರಿಯು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯ Maruti Suzuki XL6 ಮಾದರಿಯು ಮಾರಾಟದಲ್ಲಿ ಹೊಸ ದಾಖಲೆಯನ್ನು ಬರೆದಿದೆ.

Maruti Suzuki XL6 Sales Details
Image Credit: Autox

ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ XL6 MPV ಎಷ್ಟು ಮಾರಾಟವಾಗಿದೆ ಗೊತ್ತಾ…?
ಮಾರುತಿ ಕಂಪನಿಯು ಆಲ್ಟೊ, ಸೆಲೆರಿಯೊ, ಬಲೆನೊ, ಫ್ರಾಂಕ್ಸ್, ವ್ಯಾಗನ್ಆರ್, ಇಗ್ನಿಸ್, ಜಿಮ್ನಿ ಸೇರಿದಂತೆ ವಿವಿಧ ಕಾರುಗಳನ್ನು ನೆಕ್ಸಾ ಮತ್ತು ಅರೆನಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡುತ್ತದೆ. ಕೆಲವು ಹ್ಯಾಚ್‌ ಬ್ಯಾಕ್‌ ಗಳು ಮತ್ತು MPVಗಳು ಮೇ ತಿಂಗಳಲ್ಲಿ ಮಾರಾಟದಲ್ಲಿ ಸ್ವಲ್ಪ ನಷ್ಟವನ್ನು ಅನುಭವಿಸಿದವು.

ಇನ್ನು XL6 ನ ಮಾರಾಟದ ಅಂಕಿಅಂಶಗಳನ್ನು ಹೇಳುವುದಾದರೆ, 3,241 ಯುನಿಟ್‌ ಗಳು ಮಾರಾಟವಾಗಿವೆ,.ಮೇ 2023 ಗೆ ಹೋಲಿಸಿದರೆ 9.39% ನಷ್ಟು ಇಳಿಕೆಯಾಗಿದೆ. ಜನಪ್ರಿಯ MPV ಆಗಿದ್ದರೂ, ಮಾರುತಿ ಸುಜುಕಿ XL6 ಮಾರಾಟದಲ್ಲಿನ ಕುಸಿತದ ಹಿಂದಿನ ನಿಖರವಾದ ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲ. ಅದಾಗ್ಯೂ, ಮುಂಬರುವ ತಿಂಗಳುಗಳಲ್ಲಿ ಮಾರಾಟವು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

Maruti Suzuki XL6 Price In India
Image Credit: CarWale

26km ಮೈಲೇಜ್ ನೀಡುವ ಈ ಮಾರುತಿ MPV ಬೆಲೆ ಇಷ್ಟು ಕಡಿಮೆ…!
ಪ್ರಸ್ತುತ ದೇಶೀಯವಾಗಿ ಖರೀದಿಸಲು ಲಭ್ಯವಿರುವ ಮಾರುತಿ XL6 MPV ಬೆಲೆ 11.61 ಲಕ್ಷದಿಂದ 14.77 ಲಕ್ಷದವರೆಗೆ ಎಕ್ಸ್ ಶೋರೂಂ ಆಗಿದೆ. ಈ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಝಿಟಾ, ಆಲ್ಫಾ ಸೇರಿದಂತೆ ವಿವಿಧ ವೆರಿಯಂಟ್ ಗಳಲ್ಲಿ ಲಭ್ಯವಿದೆ. ಇದು Nexa Blue, Opulent Red, Brave Khaki, Grandeur Grey, Splendid Silver, Arctic White, Pearl Midnight Black ಸೇರಿದಂತೆ ಹಲವಾರು ಬಣ್ಣಗಳಲ್ಲಿ ಲಭ್ಯವಿದೆ. ಹೊಸ ಮಾರುತಿ ಸುಜುಕಿ XL6 MPV ಪೆಟ್ರೋಲ್ ಮತ್ತು CNG ಪವರ್‌ ಟ್ರೇನ್‌ ಗಳೊಂದಿಗೆ ಲಭ್ಯವಿದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್ 103 PS ಗರಿಷ್ಠ ಶಕ್ತಿ ಮತ್ತು 137 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಇದು 5-ಸ್ಪೀಡ್ ಮ್ಯಾನುವಲ್/6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. CNG ಚಾಲಿತ ಕಾರು ಅದೇ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ. ಆದರೆ ಇದು ಕೇವಲ 88 PS ಪವರ್ ಮತ್ತು 121.5 Nm ಪೀಕ್ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ. ಮಾರುತಿ ಸುಜುಕಿ XL6 MPV ನಿಮಗೆ ಪ್ರತಿ ಲೀಟರ್ ಗೆ 20.27 ರಿಂದ 26.32 km ಮೈಲೇಜ್ ನೀಡುತ್ತದೆ. ಮಾರುಕಟ್ಟೆಯಲ್ಲಿ 6 ಸೀಟರ್ ಕಾರ್ ಗಳಲ್ಲಿ ಮಾರುತಿ ಸುಜುಕಿ XL6 MPV ಹೆಚ್ಚು ಜನಪ್ರಿಯವಾಗಿದೆ.

Maruti Suzuki XL6 Mileage
Image Credit: CarWale

Join Nadunudi News WhatsApp Group