Meghana Raj: ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿತ್ ನಟಿ ಮೇಘನಾ ರಾಜ್, ಫೋಟೋಗಳು ವೈರಲ್.

ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡು ಅದರ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ನಟಿ ಮೇಘನಾ ರಾಜ್.

Meghana Raj New Hair Style: ಸ್ಯಾಂಡಲ್ ವುಡ್ ನ ಖ್ಯಾತ ನಟಿ ಮೇಘನಾ ರಾಜ್ (Meghana Raj) ಇದೀಗ ಮತ್ತೆ ಚಿತ್ರರಂಗದತ್ತ ಮುಖಮಾಡಿದ್ದಾರೆ. ತತ್ಸಮ ತದ್ಭವ ಚಿತ್ರದ (Tatsama Tadbhava) ಮೂಲಕ ಅನೇಕ ವರ್ಷಗಳ ಬಳಿಕ ಮತ್ತೆ ನಟಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಮೊದಲ ಬಾರಿ ನಟಿ ಮೇಘನಾ ರಾಜ್ ಮಹಿಳಾ ಪ್ರಧಾನ ಚಿತ್ರದಲ್ಲಿ ಮಿಂಚಲಿದ್ದಾರೆ. ಇದೀಗ ಮೇಘನಾ ರಾಜ್ ಡಿಫೆರೆಂಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Meghana Raj New Hair Style
Image Source: India Today

ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರೆ ನಟಿ ಮೇಘನಾ ರಾಜ್
ಈಗಾಗಲೇ ತತ್ಸಮ ತದ್ಭವ ಚಿತ್ರದ ವಿಚಾರವಾಗಿ ಸಾಕಷ್ಟು ಮಾಹಿತಿ ಲಭಿಸಿವೆ. ಇನ್ನು ಸಿನಿಮಾ ಶೂಟಿಂಗ್ ನ ಬೆನ್ನಲ್ಲೇ ನಟಿ ಮೇಘನಾ ರಾಜ್ ಕೂರ್ಗ್ ಗೆ ಭೇಟಿ ನೀಡಿದ್ದರು. ಇದೀಗ ನಟಿ ಮೇಘನಾ ರಾಜ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ರಾಜ್ ಡಿಫರೆಂಟ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

Meghana Raj New Hair Style
Image Source: Kannada News

 

View this post on Instagram

 

A post shared by Chittara (@chittaramedia)

ಹೊಸ ಹೇರ್ ಸ್ಟೈಲ್ ನಲ್ಲಿ ಮೇಘನಾ ರಾಜ್
ನಟಿ ತಮ್ಮ ಮಗ ರಾಯನ್ ಸರ್ಜಾ ಆರೈಕೆಯ ಜೊತೆ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಈಗಾಗಲೆ ತತ್ಸಮ ತದ್ಭವ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ಸಿನಿಪ್ರಿಯರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ. ಚಿತ್ರೀಕರಣ ಮುಗಿದ ಬೆನ್ನಲ್ಲೇ ನಟಿ ಫ್ಯಾಮಿಲಿ ಜೊತೆ ಕೂರ್ಗ್ ಟ್ರಿಪ್ ನಲ್ಲಿ ಕಾಲಕಳೆಯುತ್ತಿದ್ದಾರೆ.

Join Nadunudi News WhatsApp Group

ಇದೀಗ ನಟಿ ತಮ್ಮ ಕೂದಲನ್ನು ಕತ್ತರಿಸಿಕೊಂಡಿದ್ದು, ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ನಟಿ ಮೇಘನಾ ರಾಜ್ ಶಾರ್ಟ್ ಹೇರ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಟಿ ಮೇಘನಾ ರಾಜ್ ಅವರ ನ್ಯೂ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೊಸ ಸಿನಿಮಾದ ತಯಾರಿಯಲ್ಲಿದ್ದೀರಾ ಎಂದು ಅಭಿಮಾನಿಗಳು ನಟಿಗೆ ಪ್ರಶ್ನೆ ಮಾಡುತ್ತಿದ್ದಾರೆ.

Meghana Raj New Hair Style
Image Source:News18

Join Nadunudi News WhatsApp Group