Meghana Raj Instagram: ಮತ್ತೆ ಕಣ್ಣೀರು ಹಾಕಿದ ನಟಿ ಮೇಘನಾ ರಾಜ್, ಚಿರು ಇರಬೇಕಿತ್ತು ಅಂದ ಫ್ಯಾನ್ಸ್.

Meghana Raj shed tears after sharing Chiranjeevi Sarja’s photo: ನಟಿ ಮೇಘನಾ ರಾಜ್ (Meghana Raj) ಇನ್ನು ತಮ್ಮ ಪತಿ ಚಿರಂಜೀವಿ ಸರ್ಜಾ (Chiranjeevi Sarja) ಅವರ ಅಗಲಿಕೆಯ ನೀವಿಂದ ಹೊರಬಂದಿಲ್ಲ. ತಮ್ಮ ಪತಿಯನ್ನು ನಟಿ ಮೇಘನಾ ರಾಜ್ ಆಗಾಗ ನೆನೆದು ಕಣ್ಣೀರು ಹಾಕುತ್ತ ಇರುತ್ತಾರೆ.

ಇದೀಗ ಮೇಘನಾ ರಾಜ್ ತಮ್ಮ ಪತಿಯ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಪತಿಯನ್ನು ನೆನೆದು ಭಾವುಕರಾಗಿದ್ದಾರೆ. ಚಿರಂಜೀವಿ ಸರ್ಜಾ ಅಭಿಮಾನಿಗಳು ಭಾವುಕರಾಗಿ ನಟಿಯ ಫೋಟೋಗಳಿಗೆ ಕಮೆಂಟ್ ಮಾಡಿದ್ದಾರೆ.

Meghana Raj shed tears after sharing Chiranjeevi Sarja's photo
Image Credit: instagram

ಪತಿಯನ್ನು ನೆನೆದು ಭಾವುಕರಾದ ಮೇಘನ್ ರಾಜ್
ಚಿರಂಜೀವಿ ಸರ್ಜಾ ಅವರು ಮೇಘನಾ ರಾಜ್ ಅವರನ್ನು ಆಗಲಿ ಎರಡು ವರ್ಷಗಳು ಕಳೆದಿದೆ. ಆದರೆ ನಟಿ ಮೇಘನಾ ರಾಜ್ ತಮ್ಮ ಪತಿಯ ಅಗಲಿಕೆಯ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಲೇ ಇದ್ದಾರೆ. ಇದೀಗ ನಟಿ ಮೇಘನ್ ರಾಜ್ ಮತ್ತೆ ಚಿರು ಅವರನ್ನು ನೆನೆದು ಅವರ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಚಿರು ಇರಬೇಕಿತ್ತು ಎಂದ ಚಿರು ಫ್ಯಾನ್ಸ್
ತಮ್ಮ ಪತಿಯನ್ನು ನೆನೆದು ಮೇಘನಾ ರಾಜ್ ಪತಿಯ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Meghana Raj shared a photo with her husband on Instagram
Image Credit: instagram

ಮೇಘನಾ ರಾಜ್ ಅವರ ಪೋಸ್ಟ್ ನೋಡಿದ ಅಭಿಮಾನಿಗಳು ಭಾವುಕರಾಗಿ ‘ಚಿರು ಇರಬೇಕಿತ್ತು’ ಎಂದು ಕಮೆಂಟ್ ಮಾಡಿದ್ದಾರೆ. ಕನ್ನಡ ಚಿತ್ರರಂಗ ಇಂದಿಗೂ ಚಿರು ಅವರನ್ನು ಸದಾ ನೆನೆಯುತ್ತಲೇ ಇರುತ್ತದೆ.

Join Nadunudi News WhatsApp Group

ಎರಡನೆಯ ಮದುವೆಯ ಬಗ್ಗೆ ಮೇಘನಾ ರಾಜ್ ಹೇಳಿಕೆ
ಈ ಹಿಂದೆ ನಟಿ ಮೇಘನಾ ರಾಜ್ ಎರಡನೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿದ್ದವು. ಈಗಾಗಲೇ ನಟಿ ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದಾರೆ.

An emotional Meghana Raj shared photos with Chiru
Image Credit: instagram

“ಚಿರು ಹೇಳಿದ್ದಾರೆ ನೀನು ನಿನ್ನ ಮನಸ್ಸು ಹೇಳುವ ಕೆಲಸ ಮಾಡು ಎಂದು, ಇನ್ನು ನನ್ನ ಮನಸ್ಸು ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ಹೀಗಾಗಿ ನಾನು ಈ ಬಗ್ಗೆ ಚಿಂತಿಸಿಲ್ಲ” ಎಂದು ನಟಿ ಮೇಘನಾ ರಾಜ್ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದರು.

Join Nadunudi News WhatsApp Group