Meghana Raj New Movie: ಭಾವನೆಗಳನ್ನ ಹೇಳಲು ಇದು ಉತ್ತಮವಾದ ವೇದಿಕೆ, ಹೊಸ ಚಿತ್ರದ ಬಗ್ಗೆ ಮೇಘನಾ ಮಾತು.

Actress Meghana Raj About Tatsama Tadbhava Movie: ಸ್ಯಾಂಡಲ್ ವುಡ್ (Sandalwood)ನ ಖ್ಯಾತ ನಟಿ ಮೇಘನಾ ರಾಜ್ (Meghana Raj)ತಮ್ಮ ಮಗ ರಾಯನ್ ರಾಜ್ ಲಾಲನೆ ಪಾಲನೆಯಲ್ಲಿ ಸಮಯ ಕಳೆಯುತ್ತಾ ಇದ್ದಾರ

ಅಲ್ಲದೆ ಒಂದಷ್ಟು ಸಮಯವನ್ನು ಸಿನಿಮಾಗಳಲ್ಲಿಯೂ ಮೀಸಲಿಡುತ್ತಿದ್ದಾರೆ. ಇತ್ತೀಚಿಗಷ್ಟೇ ತತ್ಸಮ ತದ್ಬದ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದರು. ಇದೀಗ ಈ ಸಿನಿಮಾದ ಬಗ್ಗೆ ಅವರು ಮಾತನಾಡಿದ್ದಾರೆ.

Actress Meghana Raj broke her silence about Tatsama Tadbhava movie.
Image Credit: instagram

ತತ್ಸಮ ತದ್ಭವ ಸಿನಿಮಾದ ಬಗ್ಗೆ ಮಾತನಾಡಿದ ನಟಿ ಮೇಘನಾ ರಾಜ್
ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ತತ್ಸಮ ತದ್ಭವ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ನಟಿ ಮೇಘನಾ ರಾಜ್ ಅವರ ಹೊಸ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಈ ಚಿತ್ರದ ಮೂಲಕ ಅವರು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡಲು ಬರುತ್ತಿದ್ದಾರೆ.

ಹಾಗೆಯೇ ತಮ್ಮ ಎಮೋಷನಲ್ ಜರ್ನಿಯ ಬಗ್ಗೆ ನಟಿ ಮಾತನಾಡಿದ್ದಾರೆ. ಹೆಣ್ಣು ಮಕ್ಕಳಿರುವ ಸಮಾಜದ ಚೌಕಟ್ಟು ಅವರ ದೃಷ್ಟಿಕೋನದ ಬಗ್ಗೆ ಮೇಘನಾ ರಾಜ್ ಮೌನ ಮುರಿದಿದ್ದಾರೆ.

ಮಹಿಳೆಯರ ಬಗ್ಗೆ ಮಾತನಾಡಿದ ನಟಿ ಮೇಘನಾ ರಾಜ್
ಸಮಾಜದಲ್ಲಿ ಹೆಣ್ಣು ಹೀಗೆಯೇ ಇರಬೇಕು. ಇಂತಹ ಕೆಲಸಗಳನ್ನೇ ಮಾಡಬೇಕು ಎಂದೆಲ್ಲ ನಿರೀಕ್ಷೆ ಮಾಡುತ್ತಿದ್ದರು. ಆದರಿಂದ ನನಗೆ ತುಂಬಾ ಹಿಂಸೆ ಆಗುತ್ತಿತ್ತು. ನನ್ನ ಪ್ರಕಾರ ದೇಶದಲ್ಲಿ ಅತಿ ದೊಡ್ಡ ನಿಂದನೆ ಅಂದರೆ ಅದು ಭಾವನಾತ್ಮಕ ನಿಂದನೆ ಎನ್ನಬಹುದು.

Join Nadunudi News WhatsApp Group

Actress Meghana Raj spoke about Tatsama Tadbhava film.
Image Credit: instagram

ನನ್ನ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ತುಂಬಾ ಇಷ್ಟ ಪಡುವ ವ್ಯಕಿ ನಾನು ಅದು ಹೇಗೆ ಇರಲಿ ನಾನು ವ್ಯಕ್ತಪಡಿಸುವೆ. ಆದರೆ ತುಂಬಾ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು ಹಾಗೆ ಆಗಬಾರದು ಎಂದು ಮೇಘನಾ ರಾಜ್ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

ನಾವು ನಮ್ಮಂತೆಯೇ ಸಮಾಜದ ಮುಂದೆ ಇರುವುದಕ್ಕೆ ಅದೆಷ್ಟೋ ಹೆಣ್ಣು ಮಕ್ಕಳು ಹೆದರಿಕೊಳ್ಳುತ್ತಾರೆ. ಕಾರಣ ಜನರು ನಮ್ಮನ್ನು ಜಡ್ಜ್ ಮಾಡುತ್ತಾರೆ ಎಂದು. ನನ್ನ ನಿಜವಾದ ಭಾವನೆಗಳನ್ನು ತೋರಿಸಿಕೊಂಡರೆ ನಮ್ಮನ್ನು ತಪ್ಪಾಗಿ ನೋಡುತ್ತಾರೆ ಎನ್ನುವ ಭಾವನೆ ಮೂಡುತ್ತದೆ. ಪುರುಷರಿಗೆ ಹೋಲಿಸಿದರೆ ನಾವು ತುಂಬಾ ಕಂಟ್ರೋಲ್ ಮಾಡುತ್ತೇವೆ ಎಂದು ನಟಿ ಮೇಘನಾ ರಾಜ್ ಹೇಳಿದ್ದಾರೆ.

Actress Meghana Raj said that Tatsama Tadbhava is the best platform to express her feelings
Image Credit: instagram

ಕಳೆದ 30 ವರ್ಷಗಳಲ್ಲಿ ಪುರುಷ ಪ್ರದಾನ ಸಿನಿಮಾಗಳು ಹೆಚ್ಚಾಗಿವೆ. ಈಗ ಟ್ರೆಂಡ್ ಬದಲಾಗಿದೆ. ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿದೆ.

ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ 13 ವರ್ಷ ಹುಡುಗಿ. ನಾಯಕಿಯರಿಗೆ ಹೆಚ್ಚು ಸಮಯ ಇರುವುದಿಲ್ಲ ಎಂಡಿ ಈಗಲೂ ಹಾಗೆಯೇ ಯೋಚನೆ ಮಾಡಬಾರದು ಸಿನಿಮಾ ಅಂದರೆ ಬರಿ ಗ್ಲಾಮರ್ ಅಲ್ಲ ಅದಕ್ಕೂ ಮೀರಿದ ಕಲೆಯದು. ಬಾಲಿವುಡ್ ನಲ್ಲಿ 40 ವರ್ಷವಾದವರು ಇಂದಿಗೂ ನಾಯಕಿಯರ ನಟಿಸುತ್ತಾರೆ. ಅನರು ಯೋಚಿಸುವ ರೀತಿ ಬದಲಾಗಬೇಕು ಎಂದು ನಟಿ ಮೇಘನಾ ಮಾತನಾಡಿದ್ದಾರೆ.

Join Nadunudi News WhatsApp Group