Meghana Raj Valentine’s Day: ಮಗನ ಜೊತೆ ಪ್ರೇಮಿಗಳ ದಿನ ಆಚರಣೆ ಮಾಡಿದ ಮೇಘನಾ ರಾಜ್, ಮಗನ ಫೋಟೋ ಶೇರ್ ಮಾಡಿದ ಮೇಘನಾ ರಾಜ್.

Meghana Raj Valentine’s Day Wish: ಸ್ಯಾಂಡಲ್ ವುಡ್ ನಲ್ಲಿನ ಲವ್ ಬರ್ಡ್ಸ್ ಗಳಲ್ಲಿ ಚಿರಂಜೀವಿ ಸರ್ಜಾ (Chiranjeevi Sarja) ಹಾಗೂ ಮೇಘನಾ ರಾಜ್ (Meghana Raj) ಕೂಡ ಒಬ್ಬರು. ಆದರೆ ಚಿರು ಮೇಘನಾ ರಾಜ್ ಅವರನ್ನು ಅಗಲಿ ವರ್ಷಗಳೇ ಕಳೆದಿದೆ.

ಮೇಘನಾ ನೆನಪಿನಲ್ಲಿ ಚಿರು ಶಾಶ್ವತವಾಗಿ ಇದ್ದಾರೆ. ಚಿರು ಅವರ ಫೋಟೋಗಳನ್ನು ಮೇಘನಾ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ನಟಿ ಮೇಘನಾ ರಾಜ್ ಅಭಿಮಾನಿಗಳಿಗೆ ವ್ಯಾಲೆಂಟೈನ್ಸ್ ಡೇ ಶುಭಾಶಯ  (Valentine’s Day Wish) ತಿಳಿಸಿದ್ದಾರೆ.

Meghana Raj celebrated Valentine's Day with her son, Meghana Raj shared her son's photo on Instagram.
Image Credit: instagram

ಅಭಿಮಾನಿಗಳಿಗೆ ವ್ಯಾಲೆಂಟೈನ್ಸ್ ಡೇ ಶುಭಾಶಯ ತಿಳಿಸಿದ ಮೇಘನಾ ರಾಜ್
ಇದೀಗ ನಟಿ ಮೇಘನಾ ರಾಜ್ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ್ದಾರೆ. ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ತಮ್ಮ ಮಗ ರಾಯನ್ ಸರ್ಜ್ (Rayan Sarja) ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಈ ಪೋಸ್ಟ್ ಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಲಭಿಸಿದೆ.

 

View this post on Instagram

 

A post shared by Meghana Raj Sarja (@megsraj)

ಮೇಘನಾ ರಾಜ್ ಹಾಗೂ ದ್ರುವ ಸರ್ಜಾ ಅವರ ಮಗನ ಫೋಟೋವನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Join Nadunudi News WhatsApp Group

ದ್ರುವ ಸರ್ಜಾ ಮರಣ ಹೊಂದಿದ ಸಂದರ್ಭದಲ್ಲಿ ಮೇಘನಾ ರಾಜ್ ಗರ್ಭಿಣಿ ಆಗಿದ್ದರು. ಮೇಘ ರಾಜ್ ತಮ್ಮ ಪತಿ ದ್ರುವ ಸರ್ಜಾ ಅವರ ನಿಧನದ ನಂತರ ತಮ್ಮ ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದರು. ತಮ್ಮ ಮಗನ ಜೊತೆಗಿನ ಫೋಟೋಗಳನ್ನು ನಟಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

Meghana Raj shared a photo of her son on Valentine's Day
Image Credit: instagram

ಇದೀಗ ವ್ಯಾಲೆಂಟೈನ್ಸ್ ಡೇ ತಿಳಿಸುವ ಜೊತೆಗೆ ತಮ್ಮ ಮಗನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿರು ಅವರ ಅಗಲಿಕೆಯಿಂದ ನಟಿ ಇನ್ನು ಹೊರಗೆ ಬಂದಿಲ್ಲ. ಆಗಾಗ ಚಿರು ಅವರನ್ನು ಮೇಘನಾ ನೆನಪಿಸಿಕೊಂಡು ಭಾವುಕರಾಗುತ್ತಾ ಇರುತ್ತಾರೆ.

ಚಿರು ಜೊತೆಗಿನ ಫೋಟೋಗಳನ್ನು ಕೂಡ ನಟಿ ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಇನ್ನು ನಟಿ ಚಿರು ಅಗಲಿಕೆಯ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ತಮ್ಮ ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ.

Meghana Raj wished Valentine's Day by sharing her son's photo
Image Credit: instagram

ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ಮೇಘನಾ ತೀರ್ಪುಗಾರರಾಗಿದ್ದರು. ಈ ವೇಳೆ ನಟಿ ತಮ್ಮ ಪತಿಯನ್ನು ನೆನಪಿಸಿಕೊಂಡು ಸಾಕಷ್ಟು ಬಾರಿ ಭಾವುಕರಾಗಿದ್ದರು. ಇನ್ನು ನಟಿ ಎರಡನೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಕೂಡ ಸಾಕಷ್ಟು ಬಾರಿ ಹರಡಿದ್ದವು. ನಟಿ ತಮ್ಮ ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.

Join Nadunudi News WhatsApp Group