Ration Card: ಪಡಿತರ ಚೀಟಿಗೆ ಹೆಸರು ಸೇರಿಸಬೇಕಾ…? ಹಾಗಾದರೆ ಈ ವಿಧಾನದ ಮೂಲಕ ಸುಲಭವಾಗಿ ಹೆಸರು ಸೇರಿಸಿ.

ರೇಷನ್ ಕಾರ್ಡಿಗೆ ಈ ವಿಧಾನದ ಮೂಲಕ ಸುಲಭವಾಗಿ ಹೆಸರನ್ನ ಸೇರಿಸಬಹುದು

Ration Card Latest Update: ದೇಶದ ಬಡ ಜನತೆಗಾಗಿ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ದೇಶದ ಜನರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಸರ್ಕಾರ ಪರಿಚಯಿಸಿರುವಂತಹ ಎಲ್ಲ ಯೋಜನೆಗಳು ಜನರಿಗೆ ಸಹಾಯವಾಗುತ್ತಿದೆ.

ಸದ್ಯ ದೇಶದಲ್ಲಿ BPL ರೇಷನ್ Card ಗೆ ಹೆಚ್ಚಿನ ಬೇಡಿಕೆ ಇದೆ. ಜನರು BPL ರೇಷನ್ ಕಾರ್ಡ್ ನ ಮೂಲಕ ಸರ್ಕಾರ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಸರ್ಕಾರ ಈ ಬಾರಿ BPL ಕಾರ್ಡ್ ದಾರರ ವಿರುದ್ಧ ಕ್ರಮ ಕೈಗೊಂಡಿದೆ. ಹೌದು ಅಕ್ರಮವಾಗಿ ರೇಷನ್ ಪಡೆಯುತ್ತಿರುವವರ ಮೇಲೆ ಸರ್ಕಾರ ಕ್ರಮ ಕೈಕೊಂಡಿದ್ದು ಅವರ ರೇಷನ್ ಕಾರ್ಡುಗಳನ್ನ ರದ್ದು ಮಾಡಿದೆ.

Ration Card Latest Updates
Image Credit: News 18

ನಿಮ್ಮ ಹೆಸರು ಪಡಿತರ ಚೀಟಿಯಿಂದ ತೆಗೆದುಹಾಕಲ್ಪಟ್ಟಿದ್ದರೆ ಚಿಂತಿಸುವ ಅಗತ್ಯವಿಲ್ಲ
ಸರ್ಕಾರದ ನಿಯಮವನ್ನು ಯಾರು ಪಾಲಿಸುತ್ತಿಲ್ಲವೋ ಅಂತವರ ಹೆಸರನ್ನು ಪಡಿತರ ಚೀಟಿಯಿಂದ ಸರ್ಕಾರ ತೆಗೆದು ಹಾಕಿದೆ. ಇನ್ನು ನಿಮ್ಮ ಹೆಸರು ಪಡಿತರ ಚೀಟಿಯಿಂದ ತೆಗೆದುಹಾಕಲ್ಪಟ್ಟಿದ್ದರೆ ನೀವು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಹೆಸರನ್ನು ನೀವು ಸುಲಭವಾಗಿ ಪಡಿತರ ಚೀಟಿಗೆ ಸೇರಿಸಿಕೊಳ್ಳಬಹುದು.

ಪಡಿತರ ಚೀಟಿಯೊಂದಿಗೆ ಮನೆಯ ಮುಖ್ಯಸ್ಥರ ಹೆಸರನ್ನು ಜೋಡಿಸಲು ಜಿಲ್ಲಾ ಜಾರಿ ಇಲಾಖೆಯು ಆ ಹೆಸರುಗಳನ್ನು ಪಡಿತರ ಚೀಟಿಗೆ ಮತ್ತೆ ಸೇರಿಸುವ ಪ್ರಕ್ರಿಯೆ ಆರಂಭಿಸಿದೆ. ಜಿಲ್ಲಾ ಪರಿಷತ್ ಇಲಾಖೆ ಆರಂಭಿಸಿರುವ ಈ ಪ್ರಕ್ರಿಯೆಯಿಂದ ಜಿಲ್ಲೆಯ ಜನರಿಗೆ ಅನುಕೂಲವಾಗಲಿದ್ದು, ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ನೀವು ಸರಳ ಪ್ರಕ್ರಿಯೆಯ ಮೂಲಕ ನಿಮ್ಮ ಹೆಸರನ್ನು ಪಡಿತರ ಚೀಟಿಗೆ ಸೇರಿಸಬಹುದು. ಪಡಿತರ ಚೀಟಿಗಳ ತಿದ್ದುಪಡಿಗೆ ಅವಕಾಶ ನೀಡಿದ್ದು ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು.

Ration Card New Update 2024
Image Credit: India Today

ಈ ವಿಧಾನದ ಮೂಲಕ ಸುಲಭವಾಗಿ ಹೆಸರು ಸೇರಿಸಿ•ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.kar.nic.in/ ಅನ್ನು ಭೇಟಿ ಪಡಿತರ ಚೀಟಿ ಹೆಸರು ಸೇರ್ಪಡೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

Join Nadunudi News WhatsApp Group

•ಇ-ಸೇವೆಗಳನ್ನುಮುಖ್ಯ ಪುಟದಲ್ಲಿ ಆಯ್ಕೆ ಮಾಡಿ. ತಿದ್ದುಪಡಿ ಅಥವಾ ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ.

•ಹೊಸ ಪೇಜ್ ನ ಫಾರ್ಮ್ ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿಮಾಡಿದ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ.

•ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್ಮೀಟ್ ಮಾಡಿ.

•ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನೆಗೆ ಅಪ್ಡೇಟ್ ಆಗಿರುವ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ.

Join Nadunudi News WhatsApp Group