Comet Feature: MG ಕಾಮೆಟ್ ಕಾರಿನಲ್ಲಿ ಬಂತು ಹೊಸ ಫೀಚರ್, ಹೊಸ ಫೀಚರ್ ಕಂಡು ಕಾರ್ ಬುಕ್ ಮಾಡಲು ಶೋ ರೂಮ್ ನತ್ತ ಜನರು.

MG ಕಾಮೆಟ್ ಕಾರಿನಲ್ಲಿ ಹೊಸ ಫೀಚರ್ ಸೇರ್ಪಡೆ ಮಾಡಿದ MG.

MG Comet EV New Feature: ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಸಂಖ್ಯೆ ಹೆಚ್ಚಾಗಿದೆ. ಇನ್ನು ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಕೂಡ ಹೆಚ್ಚುತ್ತಿದ್ದಂತೆ ಎಲೆಕ್ಟ್ರಿಕ್ ವಾಹನಗಳು ಅತಿ ಹೆಚ್ಚು ಸೇಲ್ ಕಾಣುತ್ತಿದೆ. ಈಗಾಗಲೇ ಅನೇಕ ಪ್ರತಿಷ್ಠಿತ ಕಂಪನಿಗಳು ಸಾಕಷ್ಟು ರೀತಿಯ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲಿನ ಬೇಡಿಕೆ ಕೂಡ ಹೆಚ್ಚಾಗಿದೆ.

MG ಕಾಮೆಟ್ ಎಲೆಕ್ಟ್ರಿಕ್ ಕಾರ್
ಇನ್ನು ಇದೀಗ ಮಾರುಕಟ್ಟೆಗೆ ವಾಹನ ಪ್ರಿಯರನ್ನು ಆಕರ್ಷಿಸಲು ಅತಿ ಸಣ್ಣ MG ಕಾಮೆಟ್ ಎಲೆಕ್ಟ್ರಿಕ್ (MG Comet Electric) ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾರುಕಟ್ಟೆಯಲ್ಲಿ MG ಕಾಮೆಟ್ ನ ಇವಿ ಕಾರುಗಳು ಹೆಚ್ಚು ಮಾರಾಟವಾಗಿದ್ದು ಅಧಿಕ ಬೇಡಿಕೆ ಪಡೆದಿವೆ. MG ಮೋಟರ್ಸ್ ತನ್ನ ಕಾಮೆಟ್ ಹೆಸರಿನ ಸಣ್ಣ ಕಾರಿನಲ್ಲಿ ಹೊಸ ಫೀಚರ್ ಬಿಡುಗಡೆ ಮಾಡಲಿದೆ ಎನ್ನುವ ವರದಿಯಾಗಿದೆ.

MG Comet EV Price
Image Credit: Cartrade

MG ಕಾಮೆಟ್ EV ಕಾರಿನ ಬೆಲೆ ಮತ್ತು ವಿಶೇಷತೆ
MG ಕಾಮೆಟ್ ಕಾರು 12 ಇಂಚಿನ ಮಿಶ್ರಲೋಹದ ಚಕ್ರಗಳಲ್ಲಿ ಸವಾರಿ ಮಾಡುತ್ತದೆ. ಇದು ಪ್ರಸ್ತುತ ಮಾರಾಟದಲ್ಲಿರುವ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ವಾಹನವಾಗಿದೆ. ಆಯಾಮಗಳಿಗೆ ಸಂಬಂಧಿಸಿದಂತೆ ಇದು 3 ಮೀಟರ್ ಗಿಂತ ಕಡಿಮೆ ಉದ್ದ 1640 MM ಎತ್ತರ ಮತ್ತು 1505 MM ಅಗಲದಲ್ಲಿ 2010 MM ಉದ್ದದ ಚಕ್ರಾಂತರವನ್ನು ಹೊಂದಿದೆ.

ಆಟೋಮೆಟಿಕ್ ಎಸಿ, ಕೀಲೆಸ್ ಎಂಟ್ರಿ, ಸ್ಟೀರಿಂಗ್ ಮೌಟೆಡ್ ಕಂಟ್ರೋಲ್ ಹಾಗು LED ಹೆಡ್ ಲ್ಯಾಂಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ಕಾಮೆಟ್ EV ಕಾರ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. MG ಕಾಮೆಟ್ ಎಲೆಕ್ಟ್ರಿಕ್ ಕಾರ್ ಅನ್ನು ಕಂಪನಿಯು 8 .65 ಲಕ್ಷ ಬೆಲೆಯನ್ನು ನಿಗಧಿಪಡಿಸಿದೆ. ಈ ಕಾರನ್ನು ಕಂಪನಿಯ ಅಧಿಕೃತ ವೆಬ್ ಸೈಟ್ ಅಥವಾ ಆನ್ಲೈನ್ ನಲ್ಲಿ ಬುಕ್ ಮಾಡಿಕೊಳ್ಳಬಹೌದಾಗಿದೆ.

An EV that offers a range of 230 KM on a single charge
Image Credit: Financialexpress

ಒಂದೇ ಚಾರ್ಜ್ ನಲ್ಲಿ 230 KM ರೇಂಜ್ ನೀಡುವ EV
MG ಕಾಮೆಟ್ EV ಯನ್ನು ಡ್ಯುಯೆಲ್ ಟೋನ್, ಆಪಲ್ ಗ್ರೀನ್, ಕ್ಯಾಂಡಿ ವೈಟ್, ಅರೋರಾ ಸಿಲ್ವರ್ ಮತ್ತು ಸ್ಟಾರ್ರಿ ಬ್ಲಾಕ್ ನ 5 ಬಣ್ಣದ ಆಯ್ಕೆಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಕಾಮೆಟ್ EV 17 .3 kWh ಬ್ಯಾಟರಿ ಪ್ಯಾಕ್ ನೊಂದಿಗೆ ಬರುತ್ತದೆ. ದು IP67 ನೀರು ಮತ್ತು ಧೂಳಿನ ನಿರೋಧಕತೆ ಎರಡಕ್ಕೂ ರೇಟ್ ಮಾಡಲ್ಪಟ್ಟಿದೆ ಆದರೆ ಏಕ ಎಲೆಕ್ಟ್ರಿಕ್ ಎಂಜಿನ್ 42 HP ಪವರ್ ಮತ್ತು 110 NM ಟಾರ್ಕ್ ಮಾಡುತ್ತದೆ. MG ಕಾಮೆಟ್ EV ಒಂದೇ ಚಾರ್ಜ್ ನಲ್ಲಿ 230 KM ರೇಂಜ್ ನೀಡಲಿದೆ.

Join Nadunudi News WhatsApp Group

Join Nadunudi News WhatsApp Group