MG EV: ಬೈಕ್ ಖರೀದಿಸುವ ಬೆಲೆಯಲ್ಲಿ ಖರೀದಿಸಿ ಈ ಎಲೆಕ್ಟ್ರಿಕ್ ಕಾರ್, ಕಡಿಮೆ ಬೆಲೆ 230 Km ಮೈಲೇಜ್

ಬೈಕ್ ಖರೀದಿಸುವ ಬೆಲೆಗೆ ಈಗ ಖರೀದಿ ಮಾಡಬಹುದು ಹೊಸ ಎಲೆಕ್ಟ್ರಿಕ್ ಕಾರ್

MG Comet EV Price Down: ಸದ್ಯ ವಾಹನ ಪ್ರಿಯರನ್ನು ಆಕರ್ಷಿಸಲು ಅತಿ ಸಣ್ಣ MG Comet Electric ಕಾರು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಾರುಕಟ್ಟೆಯಲ್ಲಿ MG ಕಾಮೆಟ್ ನ EV ಕಾರುಗಳು ಹೆಚ್ಚು ಮಾರಾಟವಾಗಿದ್ದು ಅಧಿಕ ಬೇಡಿಕೆ ಪಡೆದಿವೆ. MG Motors  ತನ್ನ ಕಾಮೆಟ್ ಹೆಸರಿನ ಸಣ್ಣ ಕಾರಿನಲ್ಲಿ ನೂತನ ಫೀಚರ್ ಅಳವಡಿಸಿದ್ದು ಹೆಚ್ಚಿನ ಮಾರಾಟ ಕಾಣುತ್ತಿದೆ ಎನ್ನಬಹುದು.

MG ಕಾಮೆಟ್ ಅನ್ನು 2023 ರಲ್ಲಿ ದೇಶದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರು ಎಂದು ಬಿಡುಗಡೆ ಮಾಡಲಾಯಿತು. ಸದ್ಯ ಈ MG Comet EV ಬೆಲೆಯಲ್ಲಿ ಕಂಪನಿಯು ಬಾರಿ ಇಳಿಕೆ ಮಾಡಿದ್ದು, ಗ್ರಹಕರು ಇನ್ನು ಕಡಿಮೆ ಬೆಲೆಯಲ್ಲಿ EV ಯನ್ನು ತಮ್ಮದಾಗಿಕೊಳ್ಳಬಹುದು.

MG Comet EV Price Down
Image Credit: Cardekho

ಬರೋಬ್ಬರಿ 1 ಲಕ್ಷ ರೂ. ಇಳಿಕೆ ಕಂಡಿದೆ ಈ EV
ಹೌದು, ಕಂಪನಿಯು ಇದೀಗ ತನ್ನ ಜನಪ್ರಿಯ MG Comet Electric Car ನ ಬೆಲೆಯಲ್ಲಿ ಕಡಿಮೆ ಮಾಡಿದೆ. ಕಂಪನಿಯು ತನ್ನ MG Comet EV ಬೆಲೆಯನ್ನು ಬರೋಬ್ಬರಿ 99,000 ಇಳಿಕೆ ಮಾಡಿದೆ. ಈವರೆಗೆ ದೇಶಿಯ ಮಾರುಕಟ್ಟೆಯಲ್ಲಿ MG Comet EV ಬೆಲೆ ರೂ. 7.98 ಲಕ್ಷವಿದ್ದು, ಸದ್ಯ ಬಾರಿ ಇಳಿಕೆಯ ನಂತರ ನೀವು MG Comet EV ಯನು ಕೇವಲ 6 .99 ಲಕ್ಷ ಎಕ್ಸ್ ಶೋರೂಮ್ ಬೆಲೆಗೆ ಖರೀದಿಸಬಹುದು.

MG Comet EV ನಿಮಗೆ Pace , Play , Plus ನ ಮೂರು ರೂಪಾಂತರದಲ್ಲಿ ಲಭ್ಯವಿದ್ದು, ಇದ್ರಲ್ಲಿ ಪೇಸ್ ರೂಪತರಾದ ಬೆಲೆ ಮಾತ್ರ ಬಹಿರಂಗವಾಗಿದೆ. ಇನ್ನು ನೀವು ಈ MG Comet EV ಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹಾಗೂ ಹೆಚ್ಚಿನ ಸುರಕ್ಷತಾ ಫೀಚರ್ ಅನ್ನು ನೋಡಬಹುದಾಗಿದೆ.

MG Comet EV Price In India
Image Credit: Live Mint

ಸಿಂಗಲ್ ಚಾರ್ಜ್ ನಲ್ಲಿ 230km ಮೈಲೇಜ್ ನೀಡುವ EV
MG ಕಾಮೆಟ್ EV ಯನ್ನು ಡ್ಯುಯೆಲ್ ಟೋನ್, ಆಪಲ್ ಗ್ರೀನ್, ಕ್ಯಾಂಡಿ ವೈಟ್, ಅರೋರಾ ಸಿಲ್ವರ್ ಮತ್ತು ಸ್ಟಾರ್ರಿ ಬ್ಲಾಕ್ ನ 5 ಬಣ್ಣದ ಆಯ್ಕೆಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಕಾಮೆಟ್ EV 17.3 kWh ಬ್ಯಾಟರಿ ಪ್ಯಾಕ್ ನೊಂದಿಗೆ ಬರುತ್ತದೆ.

Join Nadunudi News WhatsApp Group

ಇದು IP67 ನೀರು ಮತ್ತು ಧೂಳಿನ ನಿರೋಧಕತೆ ಎರಡಕ್ಕೂ ರೇಟ್ ಮಾಡಲ್ಪಟ್ಟಿದೆ, ಆದರೆ ಏಕ ಎಲೆಕ್ಟ್ರಿಕ್ ಎಂಜಿನ್ 42 HP ಪವರ್ ಮತ್ತು 110 NM ಟಾರ್ಕ್ ಮಾಡುತ್ತದೆ. ಇದರ ಗರಿಷ್ಟ ವೇಗ 100 ಕಿಲೋಮೀಟರ್ ಆಗಿದ್ದು, ಕೇವಲ 5 ರಿಂದ 6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. MG ಕಾಮೆಟ್ EV ಒಂದೇ ಚಾರ್ಜ್ ನಲ್ಲಿ 230 KM ರೇಂಜ್ ನೀಡಲಿದೆ. ಹೆಚ್ಚಿನ ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಮಾದರಿಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು.

Join Nadunudi News WhatsApp Group