Milk Price Hike: ಮನೆಯಲ್ಲಿ ಹಾಲು ಹೆಚ್ಚು ಬಳಸುವವರಿಗೆ ಬೇಸರದ ಸುದ್ದಿ, ಹಾಲಿನ ಬೆಲೆಯಲ್ಲಿ ಮತ್ತೆ ಇಷ್ಟು ಹೆಚ್ಚಳ

ಹಾಲು ಬೆಲೆ ಮತ್ತೆ ಬಾರಿ ಪ್ರಮಾಣದಲ್ಲಿ ಏರಿಕೆ, ಇನ್ನುಮುಂದೆ ಹಾಲು ಬಳಕೆ ಬಹಳ ಕಷ್ಟಕರ ಆಗಲಿದೆ

Milk Price Hike In Karnataka: ಹಾಲು (Milk) ದಿನನಿತ್ಯ ಬಳಕೆಯ ಪದಾರ್ಥ ಆಗಿದ್ದು, ಪ್ರತಿಯೊಬ್ಬರ ಮನೆಯಲ್ಲೂ ಹೆಚ್ಚಾಗಿ ಹಾಲು ಬಳಕೆ ಮಾಡುತ್ತಾರೆ. ಆಗಸ್ಟ್ ನಲ್ಲಿ ಈಗಾಗಲೇ ಎಲ್ಲಾ ಕಂಪನಿಯ ಹಾಲು ಬೆಲೆಯಲ್ಲಿ ಭಾರಿ ಏರಿಕೆ ಆಗಿದ್ದನ್ನು ನೋಡಬಹುದು. ಎಷ್ಟೇ ಬೆಲೆ ಏರಿಕೆ ಆದರೂ ಹಾಲು ಅವಶ್ಯಕ ಆಗಿರುವುದರಿಂದ ಜನ ಸಾಮಾನ್ಯರು ಖರೀದಿಸಲೇ ಬೇಕಾಗಿದೆ.

ಹಾಲು ಬಳಸುವ ಗ್ರಾಹಕರಿಗೆ ಇನ್ನೊಂದು ಬಿಗ್ ಶಾಕ್ ಹೊರ ಬಂದಿದ್ದು, ಮತ್ತೆ ಹಾಲಿನ ದರದಲ್ಲಿ ಭಾರಿ ಏರಿಕೆ ಆಗುವ ಕುರಿತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ ಹೇಳಿದ್ದಾರೆ. ಅದರಲ್ಲೂ ನಂದಿನಿ ಹಾಲಿನ ಬೆಲೆಯಲ್ಲಿ ಬಾರಿ ಏರಿಕೆ ಆಗಲಿದೆ ಎಂಬ ವರದಿ ಆಗಿದೆ.

Milk Price Hike
Image Credit: Business Today

ಹಾಲಿನ ಬೆಲೆಯಲ್ಲಿ ಭಾರಿ ಏರಿಕೆ

ಸಚಿವ ಕೆ.ವೆಂಕಟೇಶ ಅವರು ನಂದಿನಿ ಹಾಲಿನ ಬೆಲೆಯನ್ನು ಏರಿಸುವ ಕುರಿತು ವಿಧಾನ ಪರಿಷತ್ ನಲ್ಲಿ ಮಾಹಿತಿ ನೀಡಿದರು. ಕಳೆದ ಆಗಸ್ಟ್ ನಲ್ಲಿ ಪ್ರತೀ ಲೀಟರ್‌ಗೆ 3 ರೂ.ಹೆಚ್ಚಿಸಲಾಗಿತ್ತು. ಅದಾದ ಬಳಿಕ ಇದೀಗ ಮತ್ತೆ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಲು ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದರು. ಆಗಸ್ಟ್ ನಲ್ಲಿ ಬೆಲೆ ಏರಿಕೆಯ ನಂತರ ನಂದಿನಿ ಹಾಲಿನ ದರವು ಪ್ರತಿ ಲೀಟರ್‌ ಟೋನ್ಡ್ ಹಾಲಿಗೆ 42 ರೂ., ಹೋಮೋಜೆನೈಸ್ಡ್ ಹಾಲಿಗೆ 43 ರೂ., ಪಾಶ್ಚರೀಕರಿಸಿದ ಹಾಲಿಗೆ 46 ರೂ. ಮತ್ತು ಶುಭಂ ವಿಶೇಷ ಹಾಲಿಗೆ 48 ರೂ. ಆಗಿದೆ.

ರೈತರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಈ ಕ್ರಮ ಜಾರಿ

Join Nadunudi News WhatsApp Group

ಹಾಲಿನ ಬೆಲೆಯನ್ನು ಮತ್ತೆ ಏರಿಕೆ ಮಾಡಲು ಬಹಳ ಪ್ರಮುಖ ಆದ ಕಾರಣವೇನೆಂದರೆ ಹಸುಗಳ ಮೇವಿನ ದರದಲ್ಲಿ ಏರಿಕೆ ಆಗಿರುವುದು. ಹಸು ಸಾಕುವವರಿಗೆ ಹಸುವಿಗೆ ಮೇವು ಹಾಕುವುದು ಬಹಳ ಕಷ್ಟ ಆಗುತ್ತಿದೆ, ಹುಲ್ಲು ಹಾಗು ಇನ್ನಿತರ ಹಸುವಿನ ಫುಡ್ ಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಇದೇ ಕಾರಣಕ್ಕಾಗಿ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತಿದೆ ಎನ್ನಲಾಯಿತು, ರೈತರಿಗೆ ಪ್ರಯೋಜನವಾಗುವುದಾದರೆ ಈ ಕ್ರಮವನ್ನು ಪಕ್ಷಾತೀತವಾಗಿ ಬೆಂಬಲಿಸಲು ಸಿದ್ಧ ಎಂದು ಪರಿಷತ್ ಸದಸ್ಯರು ತಮ್ಮ ಬೆಂಬಲ ಸೂಚಿಸಿದ್ದಾರೆ.

Milk Price Hike Latest News
Image Credit: Deccan Herald

ಸರಿಯಾದ ಬೆಂಬಲ ದೊರೆತರೆ ಹಾಲಿನ ಬೆಲೆಯಲ್ಲಿ ಏರಿಕೆ ಆಗಲಿದೆ

ಸದ್ಯದ ಸವಾಲುಗಳಿಗೆ ಸ್ಪಂದಿಸಿ ಸರ್ಕಾರವು ಈಗಾಗಲೇ ಹಾಲಿನ ಪ್ರೋತ್ಸಾಹಧನವನ್ನು 3 ರೂ.ಗಳಷ್ಟು ಹೆಚ್ಚಿಸಿದೆ ಮತ್ತು ಹಾಲಿನ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳದ ಬಗ್ಗೆ ಮುಕ್ತ ಮನಸ್ಸು ಹೊಂದಿದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲದೆ ಎಲ್ಲಾ ಹಾಲು ಉತ್ಪದಕರಿಂದ ಬೆಂಬಲ ದೊರೆಯುವುದು ಮುಖ್ಯ ಆಗಿದೆ.

ನಂದಿನಿ ಬ್ರಾಂಡ್‌ನಲ್ಲಿ ಮಾರಾಟವಾಗುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಲಿನ ಚಿಲ್ಲರೆ ಮಾರಾಟ ಬೆಲೆ ಏರಿಕೆಗೆ ವಿರೋಧ ಪಕ್ಷಗಳು ಸೇರಿದಂತೆ ಎಲ್ಲರಿಂದ ಬೆಂಬಲ ದೊರೆತರೆ ಮಾತ್ರ ಸರ್ಕಾರವು ಮುಂದುವರಿಯುತ್ತದೆ ಎಂದು ಸಚಿವರು ಹೇಳಿದರು.

Join Nadunudi News WhatsApp Group