Milk Price Hike: ನಂದಿನಿ ಹಾಲಿನ ದರ ಇಂದಿನಿಂದ ಹೆಚ್ಚಳ, ಯಾವ ಪ್ಯಾಕೆಟ್ ಮೇಲೆ ಎಷ್ಟು ರೂ ಹೆಚ್ಚಳ ನೋಡಿ

ನಂದಿನಿ ಹಾಲಿನ ದರ ಇಂದಿನಿಂದ ಇಷ್ಟು ಹೆಚ್ಚಳ

Milk Price Hike In Karnataka: ಪ್ರಸ್ತುತ ಜನಸಾಮಾನ್ಯರು ಹಣದುಬ್ಬರತೆಯ ಪರಿಸ್ಥಿಯನ್ನು ಎದುರಿಸುತ್ತಲೇ ಇದ್ದಾರೆ. ಈ ದುಬಾರಿ ದುನಿಯಾದಲ್ಲಿ ಹೇಗೆ ಜೀವನ ನೆಡೆಸಬೇಕು ಎಂದು ಕಂಗಾಲಾಗುತ್ತಿದ್ದಾರೆ. ವರ್ಷದ ಪ್ರತಿ ತಿಂಗಳಲ್ಲಿ ಒಂದಲ್ಲ ಒಂದು ವಸ್ತುವಿನ ಬೆಲೆ ಏರಿಕೆ ಆಗುತ್ತಲೇ ಇರುತ್ತದೆ. ದಿನ ಬಳಕೆಯ ವಸ್ತುಗಳ ಬೆಳೆಯಂತೂ ಆಗಾಗ ಹೆಚ್ಚಳವಾಗುತ್ತ ಇರುವುದು ಸಹಜವಾಗಿದೆ.

ಇತ್ತೀಚಿಗಷ್ಟೇ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಏರಿಕೆಮಾಡಿದೆ. ಇದೀಗ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯ ಬೆನ್ನಲ್ಲೇ ಪ್ರತಿನಿತ್ಯ ಬಳಸುವಂತಹ ಹಾಲಿನ ಬೆಲೆಯಲ್ಲಿ ಏರಿಕೆಯಾಗಿದೆ. ಹಾಲು ದಿನನಿತ್ಯ ಬಳಕೆಯ ಪದಾರ್ಥ ಆಗಿದ್ದು, ಪ್ರತಿಯೊಬ್ಬರ ಮನೆಯಲ್ಲೂ ಹೆಚ್ಚಾಗಿ ಹಾಲು ಬಳಕೆ ಮಾಡುತ್ತಾರೆ. ಅಲ್ಲಿನ ಬೆಲೆ ಏರಿಕೆ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಹಾಗಾದರೆ ಯಾವ ಹಾಲಿನ ಪ್ಯಾಕೆಟ್ ಮೇಲೆ ಎಷ್ಟು ಬೆಲೆ ಏರಿಕೆ ಆಗಿದೆ ಅನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Milk Price Hike
Image Credit: Timesnownews

ನಂದಿನಿ ಹಾಲಿನ ದರ ಇಂದಿನಿಂದ ಇಷ್ಟು ಹೆಚ್ಚಳ
ಇದೀಗ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯ ನಡುವೆ ಕಾಂಗ್ರೆಸ್ ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಿರುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ 2.10 ರೂ. ಗೆ ಏರಿಕೆ ಮಾಡಲಾಗಿದೆ. ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದೆ.

ಸದ್ಯ ಸಿದ್ದರಾಮಯ್ಯ ಅವರು ಹಾಲಿನ ದರ ಏರಿಕೆ ಮಾಡುವುದು ಸರ್ಕಾರ ಅಲ್ಲ, KMF​ ಎಂದು ಹೇಳಿಕೆ ನೀಡಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಹಾಲಿನ‌ ದರ ಹೆಚ್ಚಳ ಬಗ್ಗೆ ಚರ್ಚೆ ಮಾಡುತ್ತೇವೆ. ಬೇರೆ ರಾಜ್ಯಗಳ ಪರಿಸ್ಥಿತಿ ನೋಡಿಕೊಂಡು ದರ ಹೆಚ್ಚಳ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Milk Price Hike In Karnataka
Image Credit: Oneindia

ಯಾವ ಪ್ಯಾಕೆಟ್ ಮೇಲೆ ಎಷ್ಟು ರೂ ಹೆಚ್ಚಳ…?
*ನೀಲಿ ಪ್ಯಾಕೆಟ್ ಹಾಲು (Toned milk): 42 ರಿಂದ 44 ರೂ.

Join Nadunudi News WhatsApp Group

*ನೀಲಿ ಪ್ಯಾಕೆಟ್ (Homogenized toned milk): 43 ರಿಂದ 45 ರೂ.

*ಕಿತ್ತಳೆ ಪ್ಯಾಕೆಟ್ ಹಾಲು (Homogenized cow’s milk): 46 ರಿಂದ 48 ರೂ.

*ಕಿತ್ತಳೆ ವಿಶೇಷ ಹಾಲು: 48 ರಿಂದ 50 ರೂ.

*ಶುಭಂ ಹಾಲು: 48 ರಿಂದ 50 ರೂ.

*ಸಮೃದ್ಧಿ ಹಾಲು: 51 ರಿಂದ 53 ರೂ.

*ಶುಭಂ (Homogenized toned milk): 49 ರಿಂದ 51 ರೂ.

*ಶುಭಂ ಚಿನ್ನದ ಹಾಲು: 49 ರಿಂದ 51 ರೂ.

*ಶುಭಂ ಡಬಲ್ ಟೋನ್ಡ್ ಹಾಲು: 41 ರಿಂದ 43 ರೂ.

Milk Price Latest Update
Image Credit: The Hindu

Join Nadunudi News WhatsApp Group