Mini Cars In India: ಭಾರತಕ್ಕೆ ಬಂತು ಸ್ವಿಫ್ಟ್ ಕಾರನ್ನ ಹೋಲುವ ಇನ್ನೆರಡು ಚಿಕ್ಕ ಕಾರ್, ಬೆಲೆ ಕೊಂಚ ದುಬಾರಿ

ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ ಎರಡು ಪುಟ್ಟ ಮಿನಿ ಕೂಪರ್

Mini Cooper S And Mini Cooper Countryman EV: ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ Electric ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಜನರು ಸದ್ಯ ಇಂಧನ ಬೆಲೆ ಹೆಚ್ಚಿರುವ ಕಾರಣ ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮನಸ್ಸು ಮಾಡುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆ ಆಗುತ್ತಿದೆ. ಸದ್ಯ Mini India ಹೊಸ ಮಿನಿ ಕೂಪರ್ ಎಸ್ ಮತ್ತು ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ಅನ್ನು ಬಿಡುಗಡೆ ಮಾಡಿದೆ.

Mini Cooper S
Image Credit: Financialexpress

ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ ಎರಡು ಪುಟ್ಟ ಮಿನಿ ಕೂಪರ್
ಭಾರತೀಯ ಮಾರುಕಟ್ಟೆಯಲ್ಲಿ ಈ ಎರಡು ಐಷಾರಾಮಿ ಮಿನಿ ಕಾರುಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳನ್ನು ದೇಶದಾದ್ಯಂತ ಅಧಿಕೃತ MINI ಡೀಲರ್‌ ಗಳಲ್ಲಿ ಅಥವಾ ಆನ್‌ ಲೈನ್‌ ನಲ್ಲಿ shop.mini.in ನಲ್ಲಿ ಬುಕ್ ಮಾಡಬಹುದು. ಸೆಪ್ಟೆಂಬರ್ 2024 ರಿಂದ ವಿತರಣೆ ಪ್ರಾರಂಭವಾಗುತ್ತದೆ. ಹೊಸ ಐದನೇ ತಲೆಮಾರಿನ ಮಿನಿ ಕೂಪರ್ ಎಸ್ ಮತ್ತು ಮೂರನೇ ತಲೆಮಾರಿನ ಎಲೆಕ್ಟ್ರಿಕ್ ಮಿನಿ ಕೂಪರ್ ಕಂಟ್ರಿಮ್ಯಾನ್ ಆಧುನಿಕ ತಂತ್ರಜ್ಞಾನದೊಂದಿಗೆ ಕ್ಲಾಸಿಕ್ ಮಿನಿ ವಿನ್ಯಾಸವನ್ನು ಸಂಯೋಜಿಸುತ್ತದೆ. ಈ ವಾಹನಗಳು ಹೊಸ ಶೈಲಿಯನ್ನು ಪಡೆಯುವುದು ಮಾತ್ರವಲ್ಲದೆ ಮಿನಿಯ ಹೆಸರಾಂತ ಚಾಲನಾ ಕಾರ್ಯಕ್ಷಮತೆಯನ್ನು ಉಳಿಸಿಕೊಂಡಿದೆ.

•Mini Cooper S
ಭಾರತದಲ್ಲಿ Mini Cooper S ರೂಪಾಂತರದ ಬೆಲೆ 44 ಲಕ್ಷ 90 ಸಾವಿರ ರೂ. ಆಗಿದೆ. ಮೆಲ್ಟಿಂಗ್ ಸಿಲ್ವರ್, ಮಿಡ್‌ ನೈಟ್ ಬ್ಲಾಕ್, ನ್ಯಾನೂಕ್ ವೈಟ್, ಬ್ರಿಟಿಷ್ ರೇಸಿಂಗ್ ಗ್ರೀನ್, ಚಿಲ್ಲಿ ರೆಡ್ II, ಇಂಡಿಗೊ ಸನ್‌ ಸೆಟ್ ಬ್ಲೂ, ಬ್ಲೇಜಿಂಗ್ ಬ್ಲೂ, ಐಸಿ ಸನ್‌ಶೈನ್ ಬ್ಲೂ, ಓಷನ್ ವೇವ್ ಗ್ರೀನ್ ಮತ್ತು ಸನ್ನಿ ಸೈಡ್ ಯೆಲ್ಲೋ ಸೇರಿದಂತೆ ಹತ್ತು ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ. Mini Cooper S ಟ್ವಿನ್‌ ಪವರ್ ಟರ್ಬೊ ತಂತ್ರಜ್ಞಾನದಿಂದ ಚಾಲಿತವಾದ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಇನ್ನು 5,000 – 6,500rpm ನಲ್ಲಿ 150 kW/204hp ಮತ್ತು 1450-4500rpm ನಲ್ಲಿ 300Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ EV ಕೇವಲ 6.6 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಪಡೆಯುತ್ತದೆ. ಅಲ್ಲದೆ ಇದರ ಗರಿಷ್ಠ ವೇಗ ಗಂಟೆಗೆ 242 ಕಿ.ಮೀ ಆಗಿದೆ.

Mini Cooper Countryman EV
Image Credit: Thesun

•Mini Cooper Countryman EV
ಇನ್ನು ಮಾರುಕಟ್ಟೆಯಲ್ಲಿ Mini Cooper Countryman EV 54 ಲಕ್ಷ 90 ಸಾವಿರಕ್ಕೆ ಬಿಡುಗಡೆಯಾಗಿದೆ. ಇದು ಒಂಬತ್ತು ಆಕರ್ಷಕ ಬಣ್ಣಗಳೊಂದಿಗೆ ಕಾಣಿಸಿಕೊಂಡಿದೆ. ಬಣ್ಣ ಆಯ್ಕೆಗಳಲ್ಲಿ ಮೆಲ್ಟಿಂಗ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್, ನ್ಯಾನೂಕ್ ವೈಟ್, ಬ್ರಿಟಿಷ್ ರೇಸಿಂಗ್ ಗ್ರೀನ್, ಚಿಲ್ಲಿ ರೆಡ್ II, ಇಂಡಿಗೊ ಸನ್‌ಸೆಟ್ ಬ್ಲೂ, ಬ್ಲೇಜಿಂಗ್ ಬ್ಲೂ, ಸ್ಮೋಕಿ ಗ್ರೀನ್ ಮತ್ತು ಸ್ಲೇಟ್ ಬ್ಲೂ ಸೇರಿವೆ. ಸನ್ ರೂಫ್ ಆಯ್ಕೆಯು ಸಹ ವಿಭಿನ್ನವಾಗಿರುತ್ತದೆ.

Mini Cooper Countryman EV 150 kW/204 hp ಮತ್ತು 250Nm ಗರಿಷ್ಠ ಟಾರ್ಕ್‌ನೊಂದಿಗೆ ಶಕ್ತಿಯುತವಾದ ಎಲೆಕ್ಟ್ರಿಕ್ ಡ್ರೈವ್ ಅನ್ನು ನೀಡುತ್ತದೆ. ಇನ್ನು Mini Cooper Countryman EV 8.6 ಸೆಕೆಂಡುಗಳಲ್ಲಿ 0-100 kmph ನಿಂದ ವೇಗವನ್ನು ಪಡೆಯುತ್ತದೆ. ಇದು 66.45 kWh ಒಟ್ಟು ಸಾಮರ್ಥ್ಯದೊಂದಿಗೆ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು 462km ವರೆಗಿನ WLTP ಡ್ರೈವಿಂಗ್ ಶ್ರೇಣಿಯನ್ನು ನೀಡುತ್ತದೆ.

Join Nadunudi News WhatsApp Group

Mini Cooper S And Mini Cooper Countryman EV
Image Credit: Drivencarguide

Join Nadunudi News WhatsApp Group