Narendra Modi About Movies: ಚಲನಚಿತ್ರಗಳ ಬಗ್ಗೆ ಮೋದಿ ಸಂದೇಶ, ಅನಗತ್ಯ ಟೀಕೆ ಬೇಡ ಎಂದ ಮೋದಿ.

Modi said that there is no need for unnecessary comments about films: ನಮ್ಮ ದೇಶದ ಪ್ರಧಾನ್ ಮಂತ್ರಿ ನರೇಂದ್ರ (narendra Modi) ಮೋದಿ ಜನಸಾಮಾನ್ಯರಿಗಾಗಿ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದೀಗ ನರೇಂದ್ರ ಮೋದಿ ಚಲನಚಿತ್ರಗಳ ಬಗ್ಗೆ ಅನಗತ್ಯ ಟೀಕೆ ಮಾಡದಂತೆ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ.

Modi said that there is no need for unnecessary comments about films
Image Credit: economictimes

ಬಿಜೆಪಿ ನಾಯಕರಿಗೆ ಸಲಹೆ ನೀಡಿದ ನರೇಂದ್ರ ಮೋದಿ
ದೆಹಲಿಯಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಣಿ ಮಂಗಳವಾರ ಮುಕ್ತಾಯವಾಗಿದ್ದು ಮೋದಿ 9 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯ ಪ್ಲ್ಯಾನ್ ಹೇಗಿರಬೇಕು ಎಂಬುದನ್ನು ಮಾತನಾಡಿದ್ದಾರೆ.

ಈ ವೇಳೆ ಸಾಮಾಜಿಕ ಜಾಲತಾಣ (Social Media)ದಲ್ಲಿ ಚರ್ಚೆ ಆಗುತ್ತಿರುವ ಸಿನಿಮಾ ವಿಚಾರವನ್ನು ಪ್ರಸ್ತಾಪಿಸಿ ನಾಯಕರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ ಎಂದು ಮೂಲಗಳನ್ನು ಆಧರಿಸಿ ವರದಿಯಾಗಿದೆ.

Narendra Modi has sent a message to the BJP leaders that no one should make fun of Indian films
Image Credit: thestatesman

ಬಿಜೆಪಿ ಮುಖಂಡರಿಗೆ ಅನೇಕ ವಿಚಾರಗಳನ್ನು ತಿಳಿಸಿದ ನರೇಂದ್ರ ಮೋದಿ
ಸಭೆಯಲ್ಲಿ ಕೆಲವರು ಕೆಲವು ಚಲನಚಿತ್ರಗಳ ಹೇಳಿಕೆಗಳನ್ನು ನೀಡುತ್ತಾರೆ. ಅದು ಟಿವಿ ಮತ್ತು ಮಾಧ್ಯಮಗಳಲ್ಲಿ ಇಡೀ ದಿನ ಪ್ರಸಾರವಾಗುತ್ತದೆ. ಹೀಗಾಗಿ ಚಿತ್ರಗಳ ಬಗ್ಗೆ ಯಾವುದೇ ಅನಗತ್ಯ ಟೀಕೆ ಮಾಡಬೇಡಿ ಎಂದು ಮೋದಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ (Loka Sabha Electrion) ಇನ್ನು 400 ದಿನಗಳಷ್ಟೇ ಬಾಕಿ ಇದೆ. ನಾವು ಜನರನ್ನು ತಲುಪಲು ಅಗತ್ಯವಾಗಿ ಎಲ್ಲ ಸೇವೆಗಳನ್ನು ಮಾಡಬೇಕು, ಮತ್ತೊಂದು ಇತಿಹಾಸ ಸೃಷ್ಟಿ ಮಾಡಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೆ ಇಷ್ಟು ದಿನ ಬಿಜೆಪಿ ಅನುಸರಿಸಿಕೊಂಡು ಬರುತಿದ್ದ ಕಟ್ಟರ್ ಹಿಂದುತ್ವವಾದ ಬದಲು ಮೃದು ಹಿಂದುತ್ವ ಅನುಸರಿಸುವಂತೆಯೂ ಮೋದಿ ಪರೋಕ್ಷವಾಗಿ ಸಲಹೆ ನೀಡಿದ್ದಾರೆ.

Join Nadunudi News WhatsApp Group

Narendra Modi gave a message that no one should make fun of Indian films
Image Credit: economictimes.indiatimes

ವಿರೋಧ ಪಕ್ಷಗಳ ಬಗ್ಗೆ ಮಾತನಾಡಿದ ಮೋದಿ
ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ಯಾವುದೇ ರೀತಿಯಲ್ಲಿಯೂ ಕಡೆಗೆಣಿಸಬೇಡಿ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಅತಿಯಾದ ಆತ್ಮವಿಶ್ವಾಸ ಬೇಡ, ಮೋದಿ ಗೆಲ್ಲಿಸುತ್ತಾರೆ ಎಂಬ ಭ್ರಮೆ ಬೇಡ.

ಲೋಕಸಭೆ ಚುನಾವಣೆ ಹೊತ್ತಿಗೆ ಹೊಸ ಮತದಾರರನ್ನು ಸೃಷ್ಟಿಸಿಕೊಳ್ಳಬೇಕು. ಹೊಸ ಮತದಾರರನ್ನು ತಲುಪಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರಮುಖವಾಗಿ 18-25 ವರ್ಷದೊಳಗಿರುವವರು ನಮ್ಮ ಆದ್ಯತೆ ಆಗಬೇಕು. ಅವರಲ್ಲಿ ಹಿಂದಿನ ರಾಜಕೀಯದ ಜ್ಞಾನ ಕಡಿಮೆ ಇರುತ್ತದೆ ಎಂದಿದ್ದಾರೆ.

Join Nadunudi News WhatsApp Group