MyGov Helpdesk: ಇನ್ನುಮುಂದೆ ವಾಟ್ಸಾಪ್ ನಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡಿಕೊಳ್ಳಿ, ಬಂದಿದೆ ಹೊಸ ತಂತ್ರಜ್ಞಾನ.

ಈಗಿನ ಕಾಲದಲ್ಲಿ ಮೊಬೈಲ್ ಇಲ್ಲದ ಮನುಷ್ಯನನ್ನ ಹುಡುಕುವುದು ಬಹಳ ಕಷ್ಟ. ವಿಧ ವಿಧವಾದ ಮೊಬೈಲ್ ಗಳು ಮಾರುಕಟ್ಟೆಗೆ ಬಂದಿದ್ದು ಈಗ ಪ್ರತಿಯೊಬ್ಬರ ಕೈಯ್ಯಲಿ ಕೂಡ Mobile Phone ಇದೆ. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಈಗ WhatsApp ಬಳಸುತ್ತಾರೆ. ಕರೆ ಮಾಡಲು, ಸಂದೇಶ ಕಳುಹಿಸಲು ಮತ್ತು ಇತರೆ ಮಾಹಿತಿಯನ್ನ ಶೇರ್ ಮಾಡು ಜನರು WhatsApp Application ಬಳಸುತ್ತಾರೆ. ಸದ್ಯ ದೇಶದಲ್ಲಿ ಅನೇಕ ತಂತ್ರಜ್ಞಾನಗಳು ಜಾರಿಯಲ್ಲಿ ಬಂದಿದ್ದು ಜನರು ಈಗ ಮೊಬೈಲ್ ಮೂಲಕವೇ ಎಲ್ಲವನ್ನ ಪಡೆದುಕೊಳ್ಳಬಹುದಾಗಿದೆ. ಸದ್ಯ ವಾಟ್ಸಾಪ್ ಬಳಸುವ ಜನರಿಗೆ ಇನ್ನೊಂದು ಹೊಸ ಯೋಜನೆಯನ್ನ ಜಾರಿಗೆ ತರಲಾಗಿದೆ ಮತ್ತು ಜನರು ಇನ್ನುಮುಂದೆ ವಾಟ್ಸಾಪ್ ಮೂಲಕ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Aadhar Card And Pan Card Download ಮಾಡಿಕೊಳ್ಳಲು ಈಗ ವಾಟ್ಸಾಪ್ ನಲ್ಲಿ ಹೊಸ ತಂತ್ರಜ್ಞಾನವನ್ನ ಜಾರಿಗೆ ತರಲಾಗಿದ್ದು ಇನ್ನುಮುಂದೆ ಜನರು ಕಚೇರಿಗಳಿಗೆ ಹೋಗದೆ ವಾಟ್ಸಪ್ ಮೂಲಕ ತಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು. MyGov Helpdesk ಈಗ ವಾಟ್ಸಾಪ್ ಅಪ್ಲಿಕೇಶನ್ ಗೆ ಒಂದು ಸಹಾಯವಾಣಿ ನಂಬರ್ ನೀಡಿದ್ದು ಜನರು ಈ ನಂಬರ್ ಬಳಸಿಕೊಂಡು ವಾಟ್ಸಾಪ್ ನಲ್ಲಿ ತಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಪಡೆದುಕೊಳ್ಳಬಹುದು. ಬರಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಮಾತ್ರವಲ್ಲದೆ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇನ್ನು ಹಲವು ದಾಖಲೆಗಳನ್ನ ಡೌನ್ಲೋಡ್ ಮಾಡಿಕೊಳ್ಳಬಹುದು.

Whatsapp and myGov
Image Credit: tekno.kompas.com

MyGov ವಾಟ್ಸಾಪ್ ಗೆ ತನ್ನ ಸೇವೆಯನ್ನ ನೀಡಲು ಮುಂದಾಗಿದ್ದು ಜನರು ಈಗ ವಾಟ್ಸಾಪ್ ಮೂಲಕ ಡಿಜಿಲಾಕರ್ ರಚಿಸುವುದು ಸೇರಿದಂತೆ ಅನೇಕ ಡಾಕ್ಯುಮೆಂಟ್ ಗಳನ್ನ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಜನರು ವಾಟ್ಸಾಪ್ ಸಹಾಯವಾಣಿ ನಂಬರ್ ಮೂಲಕ digilocker ಖಾತೆಗೆ ಸೈನ್ ಅಪ್ ಆಗುವುದರ ಮೂಲಕ ಅನೇಕ ದಾಖಲೆಗಳನ್ನ ವಾಟ್ಸಾಪ್ ಮೂಲಕ ಪಡೆದುಕೊಳ್ಳಬಹುದು. ಜನರು ಈಗಾಗಲೇ digilocker ಖಾತೆಯನ್ನ ಹೊಂದಿದ್ದರೆ ಅವರು ಅಗತ್ಯ ದಾಖಲೆಗಳನ್ನ ಪಡೆದುಕೊಳ್ಳಬಹುದು ಇನ್ನಷ್ಟು ಸುಲಭ ಆಗಿದೆ. ಇನ್ನು ಈ ಸೇವೆಯನ್ನ ಬಳಸಲು ಇಷ್ಟಪಡುವವರು ಮೊದಲು ತಮ್ಮ ಮೊಬೈಲ್ ನಲ್ಲಿ MyGov ನ +91-9013151515 ಸಂಖ್ಯೆಯನ್ನ ಸೇವ್ ಮಾಡಿಕೊಳ್ಳಬೇಕು.

ಸೇವ್ ಮಾಡಿದ ನಂತರ ತಮ್ಮ ವಾಟ್ಸಾಪ್ ಚಾಟ್ ನಲ್ಲಿ ಹಯ್ ಅಥವಾ ನಮಸ್ತೆ ಎಂದು ಸಂದೇಶವನ್ನ ಕಳುಹಿಸಬೇಕು. ನೀವು ಈ ಸಂದೇಶವನ್ನ ಕಳುಹಿಸಿದ ನಂತರ ನಿಮಗೆ ಚಾಟ್ ನಲ್ಲಿ digilocker ಅಥವಾ ಕೋವಿನ್ ಸೇವೆ ಅನ್ನುವ ಎರಡು ಆಯ್ಕೆಗಳು ಬರುತ್ತದೆ ಮತ್ತು ನೀವು digilocker ಅನ್ನು ಆಕೆ ಮಾಡಬೇಕು. ಇದಾದ ನಂತರ ನೀವು digilocker ಖಾತೆಯನ್ನ ಹೊಂದಿದ್ದೀರಾ ಅನ್ನುವ ಸಂದೇಶ ಬರುತ್ತದೆ ಮತ್ತು digilocker ಖಾತೆ ಹೊಂದಿದ್ದರೆ ಹೌದು ಎಂದು ಹೇಳಬೇಕು, ಇಲ್ಲವಾದರೆ digilocker website ಅಥವಾ ಅಪ್ಲಿಕೇಶನ್ ನಲ್ಲಿ ಖಾತೆಯನ್ನ ರಚಿಸಬೇಕು. ನೀವು ಖಾತೆಯನ್ನ ರಚಿಸಿದ ನಂತರ digilocker ಖಾತೆಯನ್ನ ವಾಟ್ಸಾಪ್ ಗೆ ಲಿಂಕ್ ಮಾಡಲು ನಿಮ್ಮ 12 ಸಂಖ್ಯೆಯ ಆಧಾರ್ ನಂಬರ್ ಅನ್ನು ಹಾಕಬೇಕು.

ಆಧಾರ್ ನಂಬರ್ ಹಾಕಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ ಮತ್ತು ಆ OTP ಅನ್ನು ನೀವು ಚಾಟ್ ನಲ್ಲಿ ನಮೂದಿಸಬೇಕು. ನೀವು ಒಟಿಪಿ ನಮೂದಿಸಿದ ನಂತರ ನೀವು digilocker ನಲ್ಲಿ ಲಿಂಕ್ ಮಾಡಿದ ಎಲ್ಲಾ ದಾಖಲೆಗಳು ನಿಮ್ಮ ವಾಟ್ಸಾಪ್ ನಲ್ಲಿ ಬರುತ್ತದೆ. ಇದಾದ ನಂತರ ಆ ಡಾಕ್ಯುಮೆಂಟ್ ಡೋಲೋಡ್ ಮಾಡಲು ನೀವು ಚಾಟ್ ನಲ್ಲಿ ಡಾಕ್ಯುಮೆಂಟ್ ನಂಬರ್ ಹಾಕಬೇಕು ಮತ್ತು ಡಾಕ್ಯುಮೆಂಟ್ ನಂಬರ್ ಹಾಕಿದ ನಂತರ ನಿಮ್ಮ ಡಾಕ್ಯುಮೆಂಟ್ PDF ರೂಪದಲ್ಲಿ ಡೌನ್ಲೋಡ್ ಆಗುತ್ತದೆ.

Join Nadunudi News WhatsApp Group

Join Nadunudi News WhatsApp Group