Actress Sreeleela: ಶ್ರೀಲೀಲಾ ಕೆನ್ನೆಗೆ ಭಾರಿಸಿದ ನಟ ಬಾಲಯ್ಯ, ಶೂಟಿಂಗ್ ಸೆಟ್ ನಲ್ಲಿ ಗಳಗಳನೆ ಕಣ್ಣೀರಿಟ್ಟ ಶ್ರೀಲೀಲಾ.

ಶೂಟಿಂಗ್ ಸೆಟ್ ನಲ್ಲಿ ಮುತ್ತು ಕೊಟ್ಟಿದ್ದಕ್ಕೆ ನಂದಮೂರಿ ಬಾಲಕೃಷ್ಣ ನಟಿ ಶ್ರೀಲೀಲಾ ಅವರ ಕೆನ್ನೆಗೆ ಹೊಡೆದಿದ್ದಾರೆ ಅನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Actor Nandamuri Balakrishna: ತೆಲುಗು ಚಿತ್ರರಂಗದ ಖ್ಯಾತ ನಟ ನಂದಮುರಿ ಬಾಲಕೃಷ್ಣ (Nandamuri Balakrishna) ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇನ್ನು ನಟ ಬಾಲಕೃಷ್ಣ ಅವರು ಬಾಲಯ್ಯ ಎಂಬ ಹೆಸರಿನಿಂದಲೇ ಹೆಚ್ಚು ಖ್ಯಾತಿಯನ್ನು ಪಡೆದಿದ್ದಾರೆ. ನಟ ಬಾಲಯ್ಯ ಅವರಿಗೆ ಕೋಪ ಜಾಸ್ತಿ.

ಅವರಿಗೆ ಕೋಪ ಬಂದಾಗ ಅಭಿಮಾನಿಗಳ ಕೆನ್ನೆಗೆ ಬಾರಿಸಿದ ಘಟನೆಗಳು ಕೂಡ ನಡೆದಿದೆ. ಇದೀಗ ಕನ್ನಡದ ನಟಿ ಶ್ರೀಲೀಲಾ (Sreeleela) ಅವರಿಗೆ ನಟ ಬಾಲಯ್ಯ ಅವರಿಗೆ ಕೆನ್ನೆಗೆ ಹೊಡೆದಿದ್ದಾರಂತೆ. ಇದೀಗ ಈ ವಿಚಾರ ಬಾರಿ ವೈರಲ್ ಆಗುತ್ತಿದೆ.

The news that Nandamuri Balakrishna slapped actress Srileela on the cheek for kissing her on the shooting set has gone viral on social media.
Image Credit: mirchi9

ನಟಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ ನಟ ಬಾಲಕೃಷ್ಣ
ಬಾಲಯ್ಯ ಆಪ್ತರ ಜೊತೆ ಸದಾ ಖುಷಿ ಖುಷಿಯಾಗಿ ಇರುತ್ತಾರೆ. ಆದರೆ ಕೆಲವೊಮ್ಮೆ ಇದ್ದಕ್ಕಿಂದ್ದಂತೆ ಗರಂ ಆಗಿಬಿಡುತ್ತಾರಂತೆ. ಇದೀಗ ಬಾಲಕೃಷ್ಣ ಅವರ ಆಕ್ರೋಶಕ್ಕೆ ನಟಿ ಶ್ರೀಲೀಲಾ ಗುರಿಯಾಗಿದ್ದಾರೆ. ಇದೀಗ ಬಾಲಯ್ಯ ಶ್ರೀಲೀಲಾಗೆ ಕಪಾಳಮೋಕ್ಷ ಮಾಡಿದ್ದಾರೆ. ನಟಿ ಶ್ರೀಲೀಲಾ ಅತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

NBK108 ಸಿನಿಮಾದಲ್ಲಿ ನಟಿ ಶ್ರೀಲೀಲಾ
ಅನಿಲ್ ರಾವಿಪುಡಿ ನಿರ್ದೇಶನದಲ್ಲಿ ಬಾಲಕೃಷ್ಣ ನಟನೆಯ NBK108 ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ಕಾಜಲ್ ಅಗರ್ ವಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ನಟಿ ಶ್ರೀಲೀಲಾ ಚಿತ್ರದಲ್ಲಿ ಬಾಲಯ್ಯ ಅವರ ಸೋದರ ಸೊಸೆಯ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗುತ್ತಿದೆ.

The news that actress Srileela was slapped by Balakrishna on the cheek has gone viral on social media.
Image Credit: gulte

ಸನ್ನಿವೇಶ ಒಂದರಲ್ಲಿ ಶ್ರೀಲೀಲಾ ಕೆನ್ನೆಗೆ ನಟ ಬಾಲಕೃಷ್ಣ ಬಾರಿಸುವ ಸನ್ನಿವೇಶವನ್ನು ನಿರ್ದೇಶಕರು ಚಿತ್ರೀಕರಣ ಮಾಡಿದ್ದಾರೆ. ಈ ದೃಶ್ಯ ಬಹಳ ನೈಜವಾಗಿ ಮೂಡಿಬರಬೇಕು ಎಂದು ನಟಿ ಶ್ರೀಲೀಲಾ ಅಂದುಕೊಂಡಿದ್ದಾರೆ.  ಇನ್ನು ಈ ಸಿನಿಮಾದ ಚಿತ್ರೀಕರಣದ ವೇಳೆ ನಿಜವಾಗಿಯೇ ಕೆನ್ನೆಗೆ ಹೊಡೆಯುವಂತೆ ಶ್ರೀಲೀಲಾ ಬಾಲಕೃಷ್ಣ ಅವರ ಬಳಿ ಕೇಳಿಕೊಂಡಿದ್ದಾರಂತೆ.

Join Nadunudi News WhatsApp Group

ನಂತರ ಬಾಲಯ್ಯ ನಟಿಯ ಕೆನ್ನೆಗೆ ಜೋರಾಗಿಯೇ ಬಾರಿಸಿದ್ದಾರಂತೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿ ಒಂದು ಕ್ಷಣ ಸೈಲೆಂಟ್ ಆದರಂತೆ. ಸೀನ್ ಮುಗಿದ ನಂತರ ಕೂಡ ನಿರ್ದೇಶಕರು ಕಟ್ ಹೇಳಲಿಲ್ಲವಂತೆ. ಈ ಸನ್ನಿವೇಶ ಬಹಳ ನೈಜವಾಗಿ ಮೂಡಿ ಬಂದಿದೆ ಎನ್ನಲಾಗುತ್ತಿದೆ. ಚಿತ್ರೀಕರಣದ ಭಾಗವಾಗಿ ಶ್ರೀಲೀಲಾ ಅಳುತ್ತಾ ಹೊರಟು ಹೋದರಂತೆ. ಶ್ರೀಲೀಲಾ ಅವರ ಬದ್ಧತೆಯನ್ನು ಸೆಟ್‌ ನಲ್ಲಿ ಎಲ್ಲರೂ ಕೊಂಡಾಡುತ್ತಿದ್ದಾರೆ.

Join Nadunudi News WhatsApp Group