Pension Scheme: ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 75,000 ಪಿಂಚಣಿ ಸಿಗಲಿದೆ, NPS ಯೋಜನೆ.

ನ್ಯಾಷನಲ್ ಪೆನ್ಷನ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ಸುಮಾರು 75000 ರೂಪಾಯಿ ತನಕ ಪಿಂಚಣಿ ಪಡೆದುಕೊಳ್ಳಬಹುದು.

National Pension Scheme: ಇದೀಗ ಸರ್ಕಾರದಿಂದ ಮತ್ತೊಂದು ಹೊಸ ಸುದ್ದಿ ಹೊರ ಬಿದ್ದಿದೆ. ಪಿಂಚಣಿದಾರರಿಗೆ ಇದು ಸಿಹಿ ಸುದ್ದಿ ಎನ್ನಬಹುದು. ಏನ್ ಪಿ ಏನ್ ಹೂಡಿಕೆಯಿಂದ ತಿಂಗಳಿಗೆ 75 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯಲು ಬಯಸಿದರೆ ಹೆಚ್ಚು ಹಣವನ್ನ ಹೂಡಿಕೆ ಕೂಡ ಮಾಡಬೇಕಾಗುತ್ತದೆ.

If you invest in the National Pension Scheme, you can get a benefit of up to 75000 rupees
Image Credit: indianexpress

ಪಿಂಚಣಿದಾರರಿಗೆ ಹೊಸ ಸುದ್ದಿ
ಏನ್ ಪಿ ಎಸ್ ಹೂಡಿಕೆದಾರರಿಗೆ ಮಾಸಿಕ ಪಿಂಚಣಿ ಬರುತ್ತದೆ. ಇವರು ಮಾಸಿಕ ಪಿಂಚಣಿ ಪಡೆಯಲು ಈಕ್ವಿಟಿ, ಕಾರ್ಪೊರೇಟ್ ಸಾಲ, ಸರ್ಕಾರಿ ಬಾಂಡ್ ಗಳು ಮತ್ತು ಪರ್ಯಾಯ ಹೂಡಿಕೆ ನಿಧಿಗಳಲ್ಲಿ ಹಣ ಹೂಡಿಕೆ ಮಾಡಬೇಕು.

NPS ಹೂಡಿಕೆಯಿಂದ ತಿಂಗಳಿಗೆ 75 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯಲು ಬಯಸಿದರೆ, ಇದಕ್ಕಾಗಿ ನೀವು 3.83 ಕೋಟಿ ರೂಪಾಯಿಯನ್ನು ಠೇವಣಿ ಮಾಡಬೇಕು. ಬೇರೆ ಬೇರೆ ದೀರ್ಘಾವಧಿಯ ಯೋಜನೆಗಳಿಗಿಂತ ಏನ್ ಪಿ ಎಸ್ ನಿಂದ ಬರುವ ಆದಾಯವು ವ್ಯಕ್ತಿಯು ಯಾವಾಗ ಹೂಡಿಕೆಯನ್ನು ಪ್ರಾರಂಭಿಸುತ್ತಾನೆ ಅನ್ನುವುದರ ಮೇಲೆ ಅವಲಂಭಿತವಾಗಿರುತ್ತದೆ.

ಆದಷ್ಟು ಬೇಗ ನಿಮ್ಮ ಹೂಡಿಕೆ ಪ್ರಾರಂಭಿಸಿ ಮತ್ತು ನಿಯಮಿತವಾಗಿ ಉಳಿತಾಯ ಮಾಡುವುದರಿಂದ ನಿವೃತ್ತಿ ಸಂದರ್ಭದಲ್ಲಿ ನೀವು ದೊಡ್ಡ ಮೊತ್ತದ ಹಣವನ್ನು ಪಡೆಯಬಹುದು.

If you invest more money in National Pension Scheme, you can get more pension in old age.
Image Credit: krishijagran

ನಿವೃತ್ತಿ ನಂತರದ ಪಿಂಚಣಿ
ಉದಾಹರಣೆಗೆ ಹೇಳುವುದಾದರೆ, 25 ವರ್ಷ ವಯಸ್ಸಿನವರು ಮುಂದಿನ 35 ವರ್ಷಗಳವರೆಗೆ NPS ನಲ್ಲಿ ತಿಂಗಳಿಗೆ ರೂಪಾಯಿ 10,000 ಹೂಡಿಕೆ ಮಾಡಿದರೆ ವಾರ್ಷಿಕವಾಗಿ 10 ಪ್ರತಿಶತದ ವಾರ್ಷಿಕ ಆದಾಯವು 3,82,82,768 ರೂಪಾಯಿ ಆಗಿರುತ್ತದೆ.

Join Nadunudi News WhatsApp Group

ಈ ನಿಮ್ಮ ಹೂಡಿಕೆಯು ಮೂರೂ ಕೋಟಿ ರೂಪಾಯಿಗೆ ತಲುಪಿದಾಗ ನಿವೃತ್ತಿಯ ನಂತರ ಅವರು ತಿಂಗಳಿಗೆ 76,566 ರೂಪಾಯಿ ಪಿಂಚಣಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಅಂಚೆ ಕಚೇರಿ ಅಥವಾ ಸೇವಾ ಕೇಂದ್ರದಲ್ಲಿ ಮಾಹಿತಿಯನ್ನ ತಿಳಿದುಕೊಳ್ಳಬಹುದಾಗಿದೆ.

Join Nadunudi News WhatsApp Group