Pension Investment: ಪ್ರತಿ ತಿಂಗಳು 50,000 ರೂ ಪಿಂಚಣಿ ಬೇಕಾದರೆ ಎಷ್ಟು ಹೂಡಿಕೆ ಮಾಡಬೇಕು….? ನಿಮ್ಮ ಮುಂದಿನ ಭವಿಷ್ಯಕ್ಕಾಗಿ.

ಪ್ರತಿ ತಿಂಗಳು 50 ಸಾವಿರ ಪಿಂಚಣಿ ಪಡೆಯಲು ಇಂದೇ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.

National Pension Scheme Investment Profit: ಕೇಂದ್ರ ಸರ್ಕಾರ ದೇಶದ ಬಡ ನಾಗರೀಕರಿಗಾಗಿ ವಿವಿಧ ರೀತಿಯ ಯೋಜನೆಯನ್ನು ಬಿಡುಗಡೆ ಮಾಡುತ್ತಿರಿಯುತ್ತದೆ. ವಿಮ ಯೋಜನೆಯ ಜೊತೆಗೆ ಸರ್ಕಾರದ ಪಿಂಚಣಿ (Pension Scheme) ಯೋಜನೆಯಲ್ಲಿನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿರುತ್ತದೆ.

ಇನ್ನು ಕೇಂದ್ರ ಸರ್ಕಾರ ಹಲವು ರೀತಿಯ ಪಿಂಚಣಿ ಯೋಜನೆಯನ್ನು ಕೂಡ ಜಾರಿಗೊಳಿಸುತ್ತಿದೆ. ಇನ್ನು 60 ವರ್ಷ ಮೇಲ್ಪಟ್ಟವರು ಈ ಹೊಸ ಯೋಜನೆಯಡಿಯಲ್ಲಿ ಮಾಸಿಕ ಪಿಂಚಣಿಯನ್ನು ಪಡೆಯಬಹುದು. ಪಿಂಚಣಿ ಯೋಜನೆಯಲ್ಲಿನ ಹೂಡಿಕೆಯು ನಿವೃತ್ತಿಯ ನಂತರದ ಜೀವನವನ್ನು ಸುಗಮವಾಗಿರಿಸುತ್ತದೆ ಎನ್ನಬಹುದು.

National Pension Scheme Investment Profit
Image Credit: Silvermason

National Pension Scheme
NPS ಅಂದರೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಸರ್ಕಾರದ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಉದ್ಯೋಗಿಗಳ ನಿವೃತ್ತಿಯ ನಂತರ ಪಿಂಚಣಿಯ ಲಾಭವನ್ನು ಪಡೆಯಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿನ ಹೂಡಿಕೆಯು ಹೆಚ್ಚಿನ ಲಾಭವನ್ನು ನೀಡಲಿದೆ.

ಈ ಯೋಜನೆಯಡಿಯಲ್ಲಿ ನೀವು ಕಡಿಮೆ ಮೊತ್ತದ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ಕಡಿಮೆ ಹೂಡಿಕೆಯಲ್ಲಿ 50,000 ರೂ. ಪಿಂಚಣಿಯನ್ನು ಪಡೆಯುವ ಅವಕಾಶವಿರುತ್ತದೆ. ಪ್ರತಿ ತಿಂಗಳು 50,000 ರೂ ಪಿಂಚಣಿ ಬೇಕಾದರೆ ಎಷ್ಟು ಹೂಡಿಕೆ ಮಾಡಬೇಕು….? ಎನ್ನುವ ಬಗ್ಗೆ ವಿವರ ಇಲ್ಲಿದೆ.

National Pension Scheme Investment
Image Credit: Zee News

ಪ್ರತಿ ತಿಂಗಳು 50,000 ರೂ. ಪಿಂಚಣಿ ಬೇಕಾದರೆ ಎಷ್ಟು ಹೂಡಿಕೆ ಮಾಡಬೇಕು….?
ಈ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ನೀವು ಪ್ರತಿನಿತ್ಯ 200 ರೂ. ಹೂಡಿಕೆ ಮಾಡಬೇಕು. ದಿನಕ್ಕೆ 200 ರೂ. ಅಂದರೆ ಮಾಸಿಕವಾಗಿ 6,000 ರೂ. ಪಾವತಿಸಬೇಕಾಗುತ್ತದೆ. ನಂತರ 60 ವರ್ಷಗಳ ಬಳಿಕ ಒಟ್ಟು ಮೊತ್ತ 50,000 ರೂ. ಪಿಂಚಣಿಯ ಹಣವನ್ನು ತಿಂಗಳಿಗೆ ಪಡೆಯಬಹುದು. ಈ ಯೋಜನೆಯ ಅಡಿಯಲ್ಲಿ NPS ಶ್ರೇಣಿ 1 ಮತ್ತು NPS ಶ್ರೇಣಿ 2 ಎಂಬ ಎರಡು ರೀತಿಯ ಖಾತೆಗಳಿವೆ. PF ಠೇವಣಿ ಹೊಂದಿರದ ಜನರು 500 ರೂ. ಠೇವಣಿ ಮಾಡುವ ಮೂಲಕ ಶ್ರೇಣಿ 1 ಖಾತೆಯನ್ನು ತೆರೆಯಬಹುದು.

Join Nadunudi News WhatsApp Group

ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಲಭ್ಯ
ನಿಮ್ಮ ಠೇವಣಿಯ ಮೇಲೆ 10% ಆದಾಯವನ್ನು ಊಹಿಸಿದರೆ, ಅದರ ಒಟ್ಟು ಕಾರ್ಪಸ್ ಮೌಲ್ಯವು ರೂ 2,54,50,906 ಆಗುತ್ತದೆ. ನಿಮ್ಮ ಮೆಚ್ಯುರಿಟಿ ಆದಾಯದ 40% ರಿಂದ ನೀವು NPS ವರ್ಷಾಶನವನ್ನು ಖರೀದಿಸಿದರೆ ನಿಮ್ಮ ಖಾತೆಯಲ್ಲಿ 1,01,80,362 ರೂ. ಇದರ ಮೇಲೆ 10 % ಆದಾಯವನ್ನು ಊಹಿಸಿದರೆ ನಿಮ್ಮ ಖಾತೆಯಲ್ಲಿ ಒಟ್ಟು ಠೇವಣಿ 1,52,70,000 ರೂ. ಆಗುತ್ತದೆ. ನೀವು 36 ವರ್ಷಗಳನ್ನು ಪೂರ್ಣಗೊಳಿಸಿದಾಗ NPS ನಿಮಗೆ 50,000 ರೂ. ಗಳನ್ನೂ ಪಿಂಚಣಿಯಾಗಿ ನೀಡುತ್ತದೆ. ಇನ್ನು NPS ನಲ್ಲಿ ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ.

Join Nadunudi News WhatsApp Group