ನೆನಪಿದ್ದಾರಾ ನಟ ನವೀನ್ ಮಯೂರ್, ಇವರ ಜೀವನದ ದುರಂತ ಅಂತ್ಯ ಹೇಗಾಯಿತು ಗೊತ್ತಾ, ಕಣ್ಣೀರು ಬರುತ್ತದೆ ನೋಡಿ.

ಯಾವುದೇ ಒಬ್ಬ ವ್ಯಕ್ತಿ ಭೂಮಿಯ ಬರುವಾಗ ಆತನ ಎಲ್ಲಿಯ ತನಕ ಭೂಮಿಯ ಮೇಲೆ ಇರಬೇಕು ಅನ್ನುವುದು ಆ ದೇವರು ಮೊದಲೇ ನಿರ್ಧಾರ ಮಾಡಿ ಕಳುಹಿಸಿರುತ್ತಾನೆ ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಯುವನಟರು ಮತ್ತು ನಟಿಯರು ನಟನೆಯನ್ನ ಮಾಡಿ ಹೋಗಿದ್ದಾರೆ ಎಂದು ಹೇಳಬಹುದು. ಹೌದು ಯುವನಟರು ಅಕಾಲಿಕವಾಗಿ ಇಹಲೋಕವನ್ನ ತ್ಯಜಿಸಿದ್ದ ನಾವು ಕಣ್ಣಾರೆ ನೋಡಿದ್ದೇವೆ ಎಂದು ಹೇಳಬಹುದು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಅಕಾಲಿಕವಾಗಿ ಮರೆಯಾದ ದೊಡ್ಡ ನಟರಲ್ಲಿ ನಟ ನವೀನ್ ಮಯೂರ್ ಕೂಡ ಒಬ್ಬರು ಎಂದು ಹೇಳಬಹುದು. ಹಲವು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟ ನವೀನ್ ಮಯೂರ್ ಅವರು ಒಂದು ಕಾಲದಲ್ಲಿ ಫೇಮಸ್ ನಟನಾಗಿ ಮಿಂಚಿದವರು ಆಗಿದ್ದಾರೆ ಎಂದು ಹೇಳಬಹುದು.

ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಹೆಜ್ಜೆಯನ್ನ ಇಡುತ್ತಿರುವ ಸಮಯದಲ್ಲೇ ನಟ ಮಯೂರ್ ಅವರು ಇಹಲೋಕವನ್ನ ತ್ಯಜಿಸಿದರು ಮತ್ತು ನಟ ಮಯೂರ್ ಅವರ ಅಗಲಿಕೆಗೆ ಇಡೀ ಕರ್ನಾಟಕವೇ ಕಣ್ಣೀರು ಹಾಕಿತು ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ನಟ ನವೀನ್ ಮಯೂರ್ ಅವರ ಜೀವನದಲ್ಲಿ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಟ ನವೀನ್ ಮಯೂರ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಹಲವು ಕನ್ನಡ ಚಿತ್ರ ಮತ್ತು ಧಾರಾವಾಹಿಯಲ್ಲಿ ನಟನೆಯನ್ನ ಮಾಡಿದ ನಟ ನವೀನ್ ಮಯೂರ್ ಅವರು ಆರಂಭದ ದಿನಗಳಲ್ಲಿ ಮಿಂಚಿದವರು, ಆದರೆ ಕಾಲ ಉರುಳಿದಂತೆ ಜೀವನದಲ್ಲಿ ಇದ್ದ ಯಶಸ್ಸು ಮರೆಯಾದವು ಎಂದು ಹೇಳಬಹುದು.

naveen mayur life

ಚಿತ್ರಗಳಲ್ಲಿ ಮತ್ತು ಧಾರಾವಾಹಿಯನ್ನ ನಟನೆಯನ್ನ ಮಾಡಿದ ನಟ ನವೀನ್ ಮಯೂರ್ ಅದರಲ್ಲಿ ಯಶಸ್ಸು ಸಿಗದ ಕಾರಣ ಖಾಸಗಿ ಕಂಪನಿಯಲ್ಲಿ ಕೆಲಸವನ್ನ ಕೂಡ ಮಾಡಿದರು, ಆದರೆ ಜೀವನದಲ್ಲಿ ಬಹಳ ನೊಂದಿದ್ದ ನಟಿ ನವೀನ್ ಮಯೂರ್ ಅವರು ತಮ್ಮ 30 ನೇ ವಯಸ್ಸಿನಲ್ಲಿ ಬಹಳ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿತ್ತು ಮತ್ತು ಅಂದು ರಾತ್ರಿ ಮಲಗಿದ್ದ ನಟ ನವಿ ಮಯೂರ್ ಮಾರನೆಯ ದಿನ ಏಳಲೇ ಇಲ್ಲ. ಎರಡು ದಶಕಗಳ ಹಿಂದೆ ಈ ನಟ ಕನ್ನಡ ಚಿತ್ರದ ಚಾಕಲೇಟ್ ಹೀರೋ ಅನಿಸಿಕೊಂಡಿದ್ದರು. ಜೀವನದಲ್ಲಿ ಯಶಸ್ಸನ್ನ ಸಾಧಿಸುವ ಮುನ್ನವೇ ವಿಧಿ ಈತನ ಜೀವನದಲ್ಲಿ ಕರಾಳ ಬದುಕು ಬರುವಂತೆ ಮಾಡಿತು ಎಂದು ಹೇಳಬಹುದು.

ಸುಂದರ ಮುಖ ಮತ್ತು ಮನಸ್ಸನ್ನ ಹೊಂದಿದ್ದ ನಟ ನವೀನ್ ಮಯೂರ್ ಆಗಿನ ಕಾಲದಲ್ಲಿ ಹೆಚ್ಚಿನ ಜನರ ನಿದ್ದೆ ಕೆಡಿಸಿದ್ದ ಎಂದು ಹೇಳಬಹುದು. ತನ್ನ 21 ವಯಸ್ಸಿನಲ್ಲಿ ನಟ ಮಯೂರ್ ಚಿತ್ರವನ್ನ ಪ್ರವೇಶ ಮಾಡಿದ್ದರು. ಹಲವು ವರ್ಷ ಚಿತ್ರರಂಗದಲ್ಲಿ ಇದ್ದ ನಟ ನವೀನ್ ಮಯೂರ್ ನಂತರ ಇದ್ದಕ್ಕಿದ್ದ ಹಾಗೆ ಎರಡು ವರ್ಷಗಳ ಚಿತ್ರರಂಗದಿಂದ ದೂರ ಉಳಿದರು. ಎರಡು ವರ್ಷದ ನಂತರ ನಟ ನವೀನ್ ಅವರು ಉಪ್ಪಿ ದಾದಾ MBBS ಚಿತ್ರದಲ್ಲಿ ಕ್ಯಾನ್ಸರ್ ರೋಗಿಯಾಗಿ ನಟನೆಯನ್ನ ಮಾಡಿದರು ಮತ್ತು ಈ ಚಿತ್ರದಲ್ಲಿ ನವೀನ್ ಬಹಳ ವಿಭಿನ್ನವಾಗಿ ನಟನೆಯನ್ನ ಮಾಡಿದ್ದರು. ಬಹಳ ಕಷ್ಟಪಟ್ಟ ನವೀನ್ ಮಯೂರ್ ಅವರಿಗೆ ಅದೃಷ್ಟ ಅನ್ನುವುವುದು ಕೈಗೆ ಸಿಗಲಿಲ್ಲ.

Join Nadunudi News WhatsApp Group

naveen mayur life

ಜೀವನದಲ್ಲಿ ಬಹಳ ಬೇಸತ್ತ ನವೀನ್ ಅವರು ಖಿನ್ನತೆಗೆ ಕೂಡ ಜಾರಿದ್ದರು ಎಂದು ಹೇಳಲಾಗಿತ್ತು. 2010 ರಲ್ಲಿ ಜಾಂಡಿಸ್ ಅನ್ನುವ ಮಾರಿ ಅವರಿಗೆ ಇರುವುದು ದೃಢಪಟ್ಟಿತ್ತು, ಈ ಮಹಾಮಾರಿ ನವೀನ್ ಅವರ ಜೀವನವನ್ನೇ ಕಿತ್ತು ತಿನ್ನಲು ಆರಂಭಿಸಿತು ಎಂದು ಹೇಳಬಹುದು. ಅಂದು ಅಕ್ಟೋಬರ್ 2 ರ ದಿನದ ರಾತ್ರಿ ಎಂದಿನಂತೆ ಮಲಗಿದ್ದ ನವೀನ್ ಮಯೂರ್ ಮರುದಿನ ಏಳಲೇ ಇಲ್ಲ. ನವೀನ್ ಅವರು ಕೊನೆಯುಸಿರನ್ನ ಎಳೆದಾಗ ಅವರ ವಯಸ್ಸು ಕೇವಲ 32 ವರ್ಷ. ಸ್ನೇಹಿತರೆ ಈ ಕಲಾವಿದನ ದುರಂತ ಅಂತ್ಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group