New Rule: ಎಲ್ಲಾ ಸರ್ಕಾರೀ ನೌಕರರಿಗೆ ಹೊಸ ಆದೇಶ, ಎರಡು ದಿನಗಳಲ್ಲಿ ಎಲ್ಲರೂ ಈ ಕೆಲಸ ಮಾಡಬೇಕು.

ಸರ್ಕಾರೀ ನೌಕರರು ಮುಂದಿನ ಎರಡು ದಿನದಲ್ಲಿ ಈ ಕೆಲಸ ಮಾಡುವುದು ಕಡ್ಡಾಯ

New Rule For Govt Employees: ಪ್ರಸ್ತುತ ರಾಜ್ಯದಲ್ಲಿ ಅನೇಕ ರೀತಿಯ ಹೊಸ ಹೊಸ ನಿಯಮಗಳು ಜಾರಿಯಾಗಿವೆ. ರಾಜ್ಯ ಸರ್ಕಾರ ಇದೀಗ ಸರ್ಕಾರೀ ನೌಕರರಿಗೆ ಹೊಸ ಆದೇಶವನ್ನು ಹೊರಡಿಸಿದೆ. ಪ್ರತಿ ಸರ್ಕಾರೀ ನೌಕರರು ಕೂಡ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸುವುದು ಅಗತ್ಯವಾಗಿದೆ. ಸರ್ಕಾರ ನಿಗದಿಪಡಿಪಡಿಸಿರುವ ದಿನಾಂಕದೊಳಗೆ ಈ ಕೆಲಸಗಳನ್ನು ಮುಗಿಸುವುದು ಅಗತ್ಯವಾಗಿದೆ.

New Rule For Govt Employees
Image Credit: Trak

ಎಲ್ಲಾ ಸರ್ಕಾರೀ ನೌಕರರಿಗೆ ಹೊಸ ಆದೇಶ
ಇನ್ನು 2023-24 ವರ್ಷಕ್ಕೆ ಸಂಬಂಧಿಸಿದಂತೆ ಏಪ್ರಿಲ್ ಅಂತ್ಯದೊಳಗೆ ಆಸ್ತಿ ಮತ್ತು ಋಣ ಪಟ್ಟಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರ ಎಲ್ಲಾ ನೌಕರರು/ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮೇಲಿನವುಗಳಿಗೆ ಸಂಬಂಧಿಸಿದಂತೆ ಸದರಿ ಅಧಿಕೃತ ಜ್ಞಾಪಕ ಪತ್ರ ಮತ್ತು ಸುತ್ತೋಲೆಯಲ್ಲಿ, ಸರ್ಕಾರಿ ನೌಕರರು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳ ಪಟ್ಟಿಯನ್ನು ಸಕಾಲದಲ್ಲಿ ಸಲ್ಲಿಸಲು ಸೂಚಿಸಲಾಗಿದೆ ಮತ್ತು ಪಟ್ಟಿಯನ್ನು ಸಕ್ಷಮ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಸರ್ಕಾರೀ ನೌಕರರಿಗೆ ಈ ಮಾರ್ಗಸೂಚಿಯನ್ನು ನೀಡಲಾಗಿದೆ
•ಎಲ್ಲಾ ಸರ್ಕಾರಿ ನೌಕರರಿಗೆ (ಗ್ರೂಪ್-ಡಿ ನೌಕರರು ಸೇರಿದಂತೆ) ನೀತಿ ನಿಯಮಗಳ 24 ರ ಉಪ ನಿಯಮ (2) ನಿಗದಿತ ನಮೂನೆಯಲ್ಲಿ ಮಾರ್ಚ್ 31-2024 ರಂತೆ ಅವರ ಆಸ್ತಿ ಮತ್ತು ಹೊಣೆಗಾರಿಕೆಗಳ ವಾರ್ಷಿಕ ಪಟ್ಟಿಗಳನ್ನು ಭರ್ತಿ ಮಾಡಬೇಕು ಮತ್ತು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ನಿಗದಿತ ಅಧಿಕಾರಿಗಳಿಗೆ ಸಲ್ಲಿಸಬೇಕು.

•ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೌಕರರಿಗೆ ಸಂಬಂಧಿಸಿದಂತೆ, ಆಯಾ ಜಿಲ್ಲಾ ಮಟ್ಟದಲ್ಲಿ ಖಜಾನೆ ಇಲಾಖೆಯ ಕಚೇರಿಯ ಮುಖ್ಯಸ್ಥರು ತನಿಖಾ ಅಧಿಕಾರಿಯಾಗಿರುತ್ತಾರೆ.

Govt Employees Latest News Update
Image Credit: Zeenews

•ತನಿಖಾ ಅಧಿಕಾರಿಗಳು ಈ ಪಟ್ಟಿಯಲ್ಲಿ ತೋರಿಸಿರುವ ವಹಿವಾಟುಗಳು ನಿಯಮಿತವಾಗಿದೆಯೇ ಮತ್ತು ನೌಕರರು ಗಳಿಸಿದ ಆಸ್ತಿಗಳು ಅವರು ಗಳಿಸಿದ ಆದಾಯಕ್ಕೆ ಅನುಗುಣವಾಗಿವೆಯೇ ಎಂದು ಬಹಳ ಎಚ್ಚರಿಕೆಯಿಂದ ಪರಿಶೀಲಿಸಬೇಕು, ಅಂತಹ ತನಿಖೆಯ ನಂತರ ಯಾವುದೇ ಉದ್ಯೋಗಿ ತನ್ನ ಗಳಿಸಿದ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದರೆ ಅದಕ್ಕೆ ಸಮರ್ಥನೆಯನ್ನು ನೀಡದಿದ್ದರೆ, ಅವನ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳತಕ್ಕದ್ದು ಮತ್ತು ಅಂತಹ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ತಪಾಸಣೆಗೆ ಒಪ್ಪಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ.

Join Nadunudi News WhatsApp Group

•ಅಂತಹ ಲೆಕ್ಕಪರಿಶೋಧನೆಯ ಫಲಿತಾಂಶವನ್ನು (ಅನುಬಂಧ-01 ರಲ್ಲಿ ಲಗತ್ತಿಸಲಾಗಿದೆ) ದೃಢೀಕರಣದೊಂದಿಗೆ 2 ತಿಂಗಳೊಳಗೆ ಖಜಾನೆ ಆಯುಕ್ತರಿಗೆ ತಿಳಿಸಬೇಕು.

•ಗ್ರೂಪ್ ‘ಸಿ’ ಮತ್ತು ‘ಡಿ’ ಉದ್ಯೋಗಿಗಳು ಖಜಾನೆ ಕಮಿಷನರೇಟ್‌ ಗೆ ಆಸ್ತಿ ಮತ್ತು ಋಣ ಪಟ್ಟಿಯನ್ನು ಕಳುಹಿಸುವ ಅಗತ್ಯವಿಲ್ಲ. ಇದನ್ನು ಆಯಾ ಜಿಲ್ಲಾ ಖಜಾನೆ ಮಟ್ಟದಲ್ಲಿ ಇರಿಸಲು ನಿರ್ದೇಶಿಸಲಾಗಿದೆ ಮತ್ತು ಖಜಾನೆ ಆಯುಕ್ತರು ಅದನ್ನು ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ ಖಜಾನೆ ಆಯುಕ್ತರಿಗೆ ತರಲು ಅವಕಾಶವಿದೆ.

•ಗ್ರೂಪ್ ‘ಎ’ ಮತ್ತು ‘ಬಿ’ ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಸಾಲ ಪಟ್ಟಿಯನ್ನು ಏಪ್ರಿಲ್ ಅಂತ್ಯದೊಳಗೆ ಖಜಾನೆ ಕಮಿಷನರೇಟ್‌ ಗೆ ಸಲ್ಲಿಸಬೇಕು. ಈ ನಿಯಮಗಳು ಮತ್ತು ಸೂಚನೆಗಳನ್ನು ನಿರ್ಲಕ್ಷಿಸುವ ನೌಕರರು/ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ.

Govt Employees New Rule 2024
Image Credit: Kalimpongonlinenews

Join Nadunudi News WhatsApp Group