ಕರೋನ ಮಹಾಮಾರಿಯಿಂದ ಗುಣಮುಖರಾದವರಿಗೆ ಶಾಕಿಂಗ್ ಸುದ್ದಿ, ಕಾಣಿಸಿಕೊಳ್ಳುತ್ತಿದೆ ಹೊಸ ಸಮಸ್ಯೆ, ವೈದ್ಯರು ಹೇಳಿದ್ದೇನು ನೋಡಿ.

ದೇಶದಲ್ಲಿ ಕರೋನ ಮಹಾಮಾರಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಕರೋನ ಮಹಾಮಾರಿ ಬಹಳ ವೇಗವಾಗಿ ಜನರಿಗೆ ಹರಡುತ್ತಿದ್ದು ಜನರು ದಿನದಿಂದ ದಿನಕ್ಕೆ ಬಹಳ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ ಎಂದು ಹೇಳಬಹುದು. ದೇಶದಲ್ಲಿ ಈಗಾಗಲೇ ಕರೋನ ಮಹಾಮಾರಿಗೆ ವ್ಯಾಕ್ಸೀನ್ ನೀಡುತ್ತಿದ್ದರು ಕೂಡ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನರಲ್ಲಿ ಭಯ ಇನ್ನಷ್ಟು ಜಾಸ್ತಿ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಕರೋನ ಸೋಂಕಿತರ ಸಂಖ್ಯೆ ದಿನದಿನಕ್ಕೆ ಅತೀ ವೇಗದಲ್ಲಿ ಜಾಸ್ತಿ ಆಗುತ್ತಿದ್ದು ಕರೋನ ಮಾರ್ಗಸೂಚಿಯನ್ನ ಪಾಲನೆ ಮಾಡದೆ ಇರುವುದೇ ಅದಕ್ಕೆ ಕಾರಣ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ವಿಷಯಕ್ಕೆ ಬರುವುದಾದರೆ ಹೇಗೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ ಅದೇ ರೀತಿಯಲ್ಲಿ ಗುಣಮುಖರಾಗುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಬಹಳ ಜಾಸ್ತಿ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಕರೋನ ಮಹಾಮಾರಿಯಿಂದ ಗುಣಮುಖರಾದವರಲ್ಲಿ ಹೊಸ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ವೈದ್ಯರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆಯನ್ನ ಕೂಡ ನೀಡಿದ್ದಾರೆ. ಹಾಗಾದರೆ ಕರೋನ ಮಹಾಮಾರಿಯಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಆ ಹೊಸ ಸಮಸ್ಯೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

New corona synthoms

ಕರೋನ 2ನೇ ಅಲೆಯಿಂದಾಗಿ ಈಗಾಗಲೇ ತತ್ತರಿಸಿರುವ ಭಾರತದಲ್ಲಿ ಹೊಸ ಸಂಕಷ್ಟವೊಂದು ಶುರುವಾಗಿದೆ. ಸೋಂಕಿಗೊಳಗಾಗಿ ಗುಣಮುಖರಾದವರಲ್ಲಿ ಬ್ಲಾಕ್ ಫಂಗಸ್ ಎಂದು ಕರೆಯಲ್ಪಡುವ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಬಹಳ ಎಚ್ಚರಿಕೆಯಿಂದಿರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಇನ್ನು ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿರುವ ಸಂಖ್ಯೆ ಮಹಾರಾಷ್ಟ್ರ ಗುಜರಾತ್ ರಾಜ್ಯದಲ್ಲಿ ಬಹಳ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಕಳೆದ ಬಾರಿ ಕರೋನ ಸೋಂಕು ಕಾಣಿಸಿಕೊಂಡವರಲ್ಲಿ ಬ್ಲಾಕ್ ಫಂಗಸ್’ಗಳು ಕಂಡು ಬಂದಿದ್ದವು. ಇನ್ನು ಈ ಶಿಲೀಂಧ್ರ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಠಿ ಹೀನತೆ ಉಂಟಾಗುವ ಸಾಧ್ಯತೆ ಬಹಳ ಇದೆ ಮತ್ತು ಒಂದು ವೇಳೆ ಈ ಸೋಂಕು ಮೆದುಳಿಗೆ ವ್ಯಾಪಿಸಿದರೆ ಸಾವನ್ನಪ್ಪುವ ಸಾಧ್ಯತೆಯೂ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದವರು, ಡಯಾಬಿಟಿಸಿ ನಂತಹ ಕಾಯಿಲೆ ಉಳ್ಳವರಲ್ಲಿ ಶಿಲೀಂದ್ರ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೊರೋನಾದಿಂದ ಗುಣಮುಖರಾದ ರೋಗಿಗಳು ಮ್ಯೂಕೋರ್ಮೈಕೋಸಿಸ್’ಗೆ ಕಾರಣವಾಗುವ ಫಂಗಸ್ ಗಳಿಗೆ ತುತ್ತಾಗುವುದರಿಂದ ಸೋಂಕಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಕಣ್ಣಿನಲ್ಲಿ ನೋವು, ಒಂದುಕಡೆ ಮುಖ ಊದಿಕೊಳ್ಳುವುದು, ತಲೆನೋವು, ಜ್ವರ, ಮೂಗು ಕಟ್ಟುವಿಗೆ ಇವು ಈ ಸೋಂಕಿನ ಲಕ್ಷಣಗಳು ಆಗಿದೆ. ಕರೋನ ಮಹಾಮಾರಿಯಿಂದ ಚೇತರಿಸಿಕೊಂಡ ಎರಡು ಅಥವಾ ಮೂರೂ ವಾರದಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಎಚ್ಚರಿಕೆಯನ್ನ ನೀಡಿದ್ದಾರೆ. ಕೋವಿಡ್ ಚಿಕಿತ್ಸೆಗಾಗಿ ಸ್ಟಿರಾಯ್ಡ್ ಪಡೆದುಕೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Join Nadunudi News WhatsApp Group

New corona synthoms

Join Nadunudi News WhatsApp Group