D.K Suresh: ರಾಜ್ಯದ ಮಹಿಳೆಯರ ಖಾತೆಗೆ 4000 ರೂ ಜಮಾ ಮಾಡಲಾಗುತ್ತದೆ, ಇನ್ನೊಂದು ಗ್ಯಾರೆಂಟಿ ಘೋಷಿಸಿದ DK ಸುರೇಶ್

ಮಹಿಳೆಯರಿಗೆ ಇನ್ನೊಂದು ಯೋಜನೆ, ಖಾತೆಗೆ ಬರಲಿದೆ 4000 ರೂ

D.K Suresh About Tax: ಸದ್ಯ ರಾಜ್ಯದಲ್ಲಿ Congress ಸರ್ಕಾರ ಅಧಿಕಾರಕ್ಕೆ ಬರಲು ಐದು ಗ್ಯಾರಂಟಿ ಯೋಜನೆಗೆ ಮುಖ್ಯ ಕಾರಣ ಎನ್ನಬಹುದು. ಚುನಾವಣಾ ಸಮಯದಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಅನ್ನ ಭಾಗ್ಯ, ಯುವ ನಿಧಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ.

ರಾಜ್ಯದ ಅರ್ಹ ಫಲಾನುಭವಿಗಳು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಸದ್ಯ ಕಾಂಗ್ರೆಸ್ ಸರ್ಕಾರ ಐದು ಉಚಿತ ಗ್ಯಾರಂಟಿಯ ಅನುಷ್ಠಾನದ ಬೆನ್ನಲ್ಲೇ ಇದೀಗ ಹೊಸ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಇದೀಗ ನಾವು ಈ ಹೊಸ ಯೋಜನೆಯ ಬಗ್ಗೆ ಮಾಹಿತಿ ಹೇಳಲಿದ್ದೇವೆ.

D.K Suresh About Tax
Image Source: Oneindia Kannada

ಮಹಿಳೆಯರಿಗಾಗಿ ಇನ್ನೊಂದು ಗ್ಯಾರಂಟಿ ಸ್ಕೀಮ್
ಸದ್ಯ ಸಂಸದ ಡಿ. ಕೆ ಸುರೇಶ್ ಅವರು ರಾಜ್ಯದ ಮಹಿಳೆಯರಿಗೆ ಇನ್ನೊಂದು ಮಹತ್ತರ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದೆ. ಹೌದು ಮಹಿಳೆಯರು ಇನ್ನುಮುಂದೆ ಈ ಹೊಸ ಗ್ಯಾರಂಟಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಂಸದ D.K Suresh, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಈ ವೇಳೆ ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ.

D.K Suresh About Tax
Image Source: Times Of India

ಮಹಿಳೆಯರ ಖಾತೆಗೆ 4000 ರೂ. ಹಣ ಜಮಾ
ನಮ್ಮ ರಾಜ್ಯದ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ. ನಮ್ಮ ತೆರಿಗೆ ಹಣ ವಾಪಸ್ ಕೊಡಿ, ನಮ್ಮ ತೆರಿಗೆ ಹಣ ಕೊಡಿ ಎಂದು ಕೇಳಿದರೆ ನನ್ನನ್ನು ವಿಲನ್ ರೀತಿ ನೋಡುತ್ತಾರೆ. ನೀವು ತೆರಿಗೆ ಹಣವನ್ನು ಹಿಂತಿರುಗಿಸಿದರೆ, ತಿಂಗಳಿಗೆ ಈಗಿರುವ ಎರಡು ಸಾವಿರ ರೂಪಾಯಿ ಜೊತೆಗೆ ಮಹಿಳೆಯರಿಗೆ ಇನ್ನು ಎರಡು ಸಾವಿರ ರೂಪಾಯಿ ಸೇರಿಸಿ ಕೊಡುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ. ಅಂದರೆ ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಹಣವನ್ನು ವಾಪಾಸ್ ಕೊಟ್ಟರೆ ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಮಾಸಿಕ 4000 ಹಣ ಜಮಾ ಮಾಡುವುದಾಗಿ ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group