Tax Regime: ಪ್ರತಿ ತಿಂಗಳು ಸಂಬಳ ಪಡೆಯುವವರಿಗೆ ಗುಡ್ ನ್ಯೂಸ್, ಇನ್ಮುಂದೆ ಇವುಗಳಿಗೆ ತೆರಿಗೆ ಇಲ್ಲ.

ಪ್ರತಿ ತಿಂಗಳು ಸಂಬಳ ಪಡೆಯುವವರಿಗೆ ಗುಡ್ ನ್ಯೂಸ್

New Income Tax Regime: ದೇಶದಲ್ಲಿ ಆದಾಯ ತೆರಿಗೆ ನಿಯಮಗಳು ಬಹಳ ಕಠಿಣವಾಗಿದೆ. ತೆರಿಗೆ ಪಾವತಿಯಿಂದ ಯಾವುದೇ ವ್ಯಕ್ತಿಯು ತಪ್ಪಿಸಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಆದಾಯ ಇಲಾಖೆಯು ಜನರ ಎಲ್ಲ ರೀತಿಯ ವಹಿವಾಟಿನ ಮೇಲು ಹೆಚ್ಚು ಗಮನ ಹರಿಸುತ್ತದೆ. ಆದಾಯ ತೆರಿಗೆಯು ದೇಶದಲ್ಲಿ ಗಳಿಸುವ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅತ್ಯಗತ್ಯ ಭಾಗವಾಗಿದೆ.

ಆದಾಯ ತೆರಿಗೆಯನ್ನು ಕಡಿತಗೊಳಿಸಿದ ನಂತರವೇ ಜನರು ತಮ್ಮ ಸಂಬಳವನ್ನು ಪಡೆಯುತ್ತಾರೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಎಷ್ಟು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ, ಅಥವಾ ಯಾವ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಪ್ರತಿ ತಿಂಗಳು ಪಡೆಯುವ ಯಾವ ಯಾವ ವೇತನಕ್ಕೆ ತೆರಿಗೆ ಇರುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Income Tax In India
Image Credit: Indiafilings

ಪ್ರತಿ ತಿಂಗಳು ಸಂಬಳ ಪಡೆಯುವವರಿಗೆ ಗುಡ್ ನ್ಯೂಸ್
2020 ರ ಸಾಮಾನ್ಯ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 115BAC ಅಡಿಯಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಘೋಷಿಸಿದರು. ಹೊಸ ತೆರಿಗೆ ಪದ್ಧತಿಯಲ್ಲಿ, ತೆರಿಗೆದಾರರಿಗೆ ಪ್ರಯೋಜನಗಳನ್ನು ನೀಡುವ ಉದ್ದೇಶದಿಂದ ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಬದಲಾಯಿಸಲಾಯಿತು ಮತ್ತು ದರಗಳನ್ನು ಸಹ ಕಡಿಮೆ ಮಾಡಲಾಯಿತು.

ಆದರೆ ಆದಾಯ ತೆರಿಗೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಲಭ್ಯವಿರುವ ಎಲ್ಲಾ ರೀತಿಯ ವಿನಾಯಿತಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು. ಮತ್ತೊಂದೆಡೆ, ಉಳಿತಾಯದ ಅಭ್ಯಾಸವನ್ನು ಹೊಂದಿರುವ ಸಂಬಳದಾರರಿಗೆ ಪರಿಹಾರವನ್ನು ನೀಡಲು ಹಳೆಯ ತೆರಿಗೆ ಪದ್ಧತಿಯನ್ನು ಉಳಿಸಿಕೊಳ್ಳಲಾಯಿತು, ಆದರೆ ಅವರಿಗೆ ತೆರಿಗೆ ದರಗಳನ್ನು ಅದೇ ರೀತಿ ಇರಿಸಲಾಯಿತು.

New Income Tax Regime
Image Credit: India Today

ಇನ್ಮುಂದೆ ಇವುಗಳಿಗೆ ತೆರಿಗೆ ಇಲ್ಲ
ಹೊಸ ತೆರಿಗೆ ವ್ಯವಸ್ಥೆಯಲ್ಲಿ, ರೂ. 7 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಜನರು ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಪಡೆಯುತ್ತಾರೆ. ಆದರೆ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆಗೆ ಒಳಪಡುವ ಆದಾಯ ರೂ. 5 ಲಕ್ಷಕ್ಕಿಂತ ಕಡಿಮೆ ಇರುವವರಿಗೆ ಮಾತ್ರ ಈ ವಿನಾಯಿತಿ ಲಭ್ಯವಿದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಮೊದಲ ರೂ. 3 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ, ಮುಂದಿನ ರೂ. 3 ಲಕ್ಷಕ್ಕೆ ಶೇ 5ರಷ್ಟು ತೆರಿಗೆ, ಅಂದರೆ ರೂ. 3 ಲಕ್ಷದಿಂದ ರೂ. 6 ಲಕ್ಷದವರೆಗೆ ಶೇ 10ರಷ್ಟು ತೆರಿಗೆ ವಿಧಿಸಲಾಗುತ್ತದೆ.

Join Nadunudi News WhatsApp Group

ರೂ. 6 ರಿಂದ 9 ಲಕ್ಷ, ರೂ. 9 ರಿಂದ 12 ಲಕ್ಷದವರೆಗಿನ ಆದಾಯಕ್ಕೆ ಶೇ 15 ತೆರಿಗೆ, ರೂ. 12 ರಿಂದ 15 ಲಕ್ಷದವರೆಗಿನ ಆದಾಯಕ್ಕೆ ಶೇ 20 ತೆರಿಗೆ ವಿಧಿಸಲಾಗುತ್ತದೆ. ರೂ. 15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಲಾಗುತ್ತದೆ. ನೀವು ಉಳಿತಾಯ ಯೋಜನೆಗಳಲ್ಲಿ (ಪಿಪಿಎಫ್, ಎನ್‌ಎಸ್‌ಸಿ, ಜೀವ ವಿಮಾ ಪಾಲಿಸಿ ಇತ್ಯಾದಿ) ಹೂಡಿಕೆ ಮಾಡದ ಅಥವಾ ಬ್ಯಾಂಕ್‌ ನಿಂದ ಸಾಲ ಪಡೆದು ಮನೆ ನಿರ್ಮಿಸದ ಎಲ್ಲರಿಗೂ ಹೊಸ ತೆರಿಗೆ ವ್ಯವಸ್ಥೆಯು ತುಂಬಾ ಪ್ರಯೋಜನಕಾರಿಯಾಗಿದೆ.

Income Tax New Updates
Image Credit: Aajtak

Join Nadunudi News WhatsApp Group