Working Hour: ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬಾರದ ಸರ್ಕಾರೀ ನೌಕರರಿಗೆ ಹೊಸ ನಿಯಮ, ಸಂಬಳ ಕಟ್

ಸರ್ಕಾರೀ ನೌಕರರಿಗೆ ಇಂದಿನಿಂದ ಹೊಸ ನಿಯಮ

New Rule To Govt Employees: ಸದ್ಯ ದೇಶದಲ್ಲಿ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ದೇಶದ ಅಭಿವೃದ್ಧಿ ಕಾರ್ಯದಲ್ಲಿ ಸರ್ಕಾರ ಈಗಾಗಲೇ ಮುಂದಾಗಿದೆ. ಇನ್ನು ಸರ್ಕಾರೀ ನೌಕರರ ಬೇಡಿಕೆಯನ್ನು ಈಡೇರಿಸಲು ಮುಂದಾಗುತ್ತಿರುವ ಸರ್ಕಾರ ಸರ್ಕಾರೀ ನೌಕರರಿಗೆ ಹೊಸ ನಿಯಮಗಳನ್ನು ಕೂಡ ಜಾರಿಗೊಳಿಸುತ್ತಿದೆ.

ಸದ್ಯ ಕೇಂದ್ರ ಸರ್ಕಾರ ಸರ್ಕಾರೀ ನೌಕರರಿಗೆ ಹೊಸ ನಿಯಮವನ್ನು ಪರಿಚಯಿಸಿದೆ. ನಿಯಮವನ್ನು ಪರಿಚಯಿಸುವುದರ ಜೊತೆಗೆ ನೌಕರರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ಇನ್ನುಮುಂದೆ ಎಲ್ಲ ಸರ್ಕಾರೀ ನೌಕರರು ಈ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ.

New Rule To Govt Employees
Image Credit: Rightsofemployees

ಸರ್ಕಾರೀ ನೌಕರರಿಗೆ ಇಂದಿನಿಂದ ಹೊಸ ನಿಯಮ
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಎನ್ ಡಿಎ ಸರ್ಕಾರ ಸರ್ಕಾರಿ ನೌಕರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತಡವಾಗಿ ಬರುವ ಹಾಗೂ ಬೇಗ ಹೊರಡುವ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅನೇಕ ಅಧಿಕಾರಿಗಳು/ಸಿಬ್ಬಂದಿಗಳು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ (AEBAS) ಮೂಲಕ ಹಾಜರಾತಿಯನ್ನು ನೋಂದಾಯಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ, ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಅನೇಕ ಉದ್ಯೋಗಿಗಳು ನಿಯಮಿತವಾಗಿ ತಡವಾಗಿ ಬರುವುದನ್ನು ಗಮನಿಸಲಾಗಿದೆ. ಅಧಿಕಾರಿಗಳು/ಸಿಬ್ಬಂದಿಗಳು ತಡವಾಗಿ ಬರುತ್ತಿದ್ದು, ಪ್ರತಿದಿನ ಬೇಗ ಕಚೇರಿ ಬಿಡುತ್ತಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿದ್ದಾರೆ. ಹಾಗಾಗಿ ನೌಕರರು ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

Govt Employees Latest News
Image Credit: Live Mint

ಈ ಸಮಯಕ್ಕೆ ಆಫೀಸ್ ತಲುಪದಿದ್ದರೆ ಸಂಬಳ ಕಟ್
ಮೊಬೈಲ್ ಅಪ್ಲಿಕೇಶನ್ ಆಧಾರಿತ ಹಾಜರಾತಿ ವ್ಯವಸ್ಥೆಯು ನೌಕರರು ಹಾಜರಾದ ಸ್ಥಳವನ್ನು ಟ್ರ್ಯಾಕ್ ಮಾಡಬಹುದು. ಹಲವಾರು ನೌಕರರು ನಿರಂತರವಾಗಿ ತಡವಾಗಿ ಬರುತ್ತಿರುವುದು ಕಂಡುಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಎಲ್ಲಾ ಸಚಿವಾಲಯಗಳು/ಇಲಾಖೆಗಳು/ಸಂಸ್ಥೆಗಳು ಬಯೋಮೆಟ್ರಿಕ್ ಹಾಜರಾತಿ (AEBAS) ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಬೇಕು.

Join Nadunudi News WhatsApp Group

ಇದನ್ನು ನಿಯಮಿತವಾಗಿ ಪರಿಶೀಲಿಸಬೇಕು, ವಿಳಂಬ ಮಾಡದಂತೆ ಕಚೇರಿಗೆ ಬರಬೇಕು ಎಂದು ನೌಕರರಿಗೆ ಸೂಚಿಸಬೇಕು ಎಂದು ಹೇಳಲಾಗಿದೆ. ನಿರಂತರವಾಗಿ ಕಚೇರಿಗೆ ತಡವಾಗಿ ಬರುವ ಹಾಗೂ ಬೇಗ ಹೊರಡುವ ನೌಕರರ ಹಾಜರಾತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ. ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Govt Employees New Rules
Image Credit: The Karmanews

Join Nadunudi News WhatsApp Group