Pension: 60 ವರ್ಷ ಮೇಲ್ಪಟ್ಟವರಿಗೆ ಗುಡ್ ನ್ಯೂಸ್, ಪಿಂಚಣಿ ನಿಯಮದಲ್ಲಿ ದೊಡ್ಡ ಬದಲಾವಣೆ

ಪಿಂಚಣಿದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್

New Rule For Pensioners: ಕೇಂದ್ರ ಮತ್ತು ರಾಜ್ಯ ಸರ್ಕಾರ ಆಗಾಗ ಸರ್ಕಾರೀ ನೌಕರರಿಗೆ ಹಾಗೆಯೆ ಪಿಂಚಣಿದಾರರಿಗೆ ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಿರುತ್ತದೆ. ರಾಜ್ಯ ಸರ್ಕಾರ ಈಗಾಗಲೇ 7 ನೇ ವೇತನದ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ.

ಶೀಘ್ರದಲ್ಲೇ 7 ನೇ ವೇತನ ಪರಿಷ್ಕರಣೆ ಆಗಲಿದೆ. ಇನ್ನು 7 ನೇ ವೇತನ ಪರಿಷ್ಕರಣೆಯ ಜೊತೆಗೆ ಹಿರಿಯ ನಾಗರೀಕೃ ಹಾಗೂ ಪಿಂಚಣಿದಾರರಿಗೆ ಸರ್ಕಾರದಿಂದ ಬಂಪರ್ ಸುದ್ದಿ ಹೊರಬಿದ್ದಿದೆ. ಸದ್ಯ ಹೈ ಕೋರ್ಟ್ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಹೈಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಪಿಂಚಣಿಯ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ.

New Rule For Pensioners
Image Credit: Bizzbuzz

ಪಿಂಚಣಿದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಈ ಹಿಂದೆ 65 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ವಿಮೆ ಪಡೆಯುವುದು ಕಷ್ಟಕರವಾಗಿತ್ತು. ಇದೀಗ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ನಿಯಮಗಳನ್ನು ಬದಲಾಯಿಸಿದೆ. ಈಗ ಯಾವುದೇ ವಯಸ್ಸಿನವರು ಆರೋಗ್ಯ ವಿಮೆಯನ್ನು ಪಡೆಯಬಹುದು. ಇನ್ನುಮುಂದೆ ಇದು ಹಿರಿಯ ನಾಗರಿಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೊದಲು ಈ ವಿಮಾ ಸೌಲಭ್ಯವು 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಭ್ಯವಿರಲಿಲ್ಲ ಆದರೆ ನಿಯಮಗಳಲ್ಲಿನ ಬದಲಾವಣೆಗಳಿಂದಾಗಿ ಯಾವುದೇ ವಯಸ್ಸಿನವರು ವಿಮಾ ಯೋಜನೆಗೆ ಅರ್ಹರಾಗಿರುತ್ತಾರೆ.

ಯಾವುದೇ ಪಿಂಚಣಿ ಸಂಬಂಧಿತ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದರೆ, ವರ್ಷಗಳ ಕಾಲ ನ್ಯಾಯಾಲಯಗಳ ಅಲೆದಾಡುವ ಅಗತ್ಯವಿಲ್ಲ. ಈ ಸಂಬಂಧ ಪಂಜಾಬ್ ಮತ್ತು ಹರಿಯಾಣ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು ನಿವೃತ್ತಿ ಮತ್ತು ಪಿಂಚಣಿಗೆ ಸಂಬಂಧಿಸಿದ ಪ್ರಕರಣಗಳನ್ನು ದೈನಂದಿನ ಪಾಳಿ ಪ್ರಕಾರ ಪರಿಹರಿಸಲಾಗುತ್ತಿದ್ದು, ಪರಿಹಾರವನ್ನು ಆದಷ್ಟು ಬೇಗ ನೀಡಲಾಗುವುದು. ಇದರಿಂದ ಪಿಂಚಣಿದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹಾಗೆಯೆ ಅಲಹಾಬಾದ್ ಹೈಕೋರ್ಟ್ ಕೂಡ ಪಿಂಚಣಿದಾರರಿಗೆ ರಿಲೀಫ್ ನೀಡಿದೆ. ವೇತನವನ್ನು ತಪ್ಪಾಗಿ ಪಾವತಿಸಿದ ಕಾರಣ ಗ್ರಾಚ್ಯುಟಿಯನ್ನು ಕಡಿತಗೊಳಿಸಿದರೆ, ಅಂತಹ ಮೊತ್ತವನ್ನು 6% ಬಡ್ಡಿಯೊಂದಿಗೆ ಮರುಪಾವತಿಸಲಾಗುತ್ತದೆ ಎಂದು ಆದೇಶಿಸಿದೆ.

Pension Rules Update
Image Credit: Zeenews

Join Nadunudi News WhatsApp Group

Join Nadunudi News WhatsApp Group