July Rule: ಜುಲೈ 1 ರಿಂದ ದೇಶದಲ್ಲಿ ಜಾರಿಗೆ ಬರಲಿದೆ ಈ ಎಲ್ಲಾ ಹೊಸ ನಿಯಮಗಳು, ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ.

ಜುಲೈ 1 ರಿಂದ ದೇಶದಲ್ಲಿ ಜಾರಿಗೆ ಬರಲಿದೆ ಈ ಎಲ್ಲಾ ಹೊಸ ನಿಯಮಗಳು

New Rule From July 1st: ದೇಶದಲ್ಲಿ ಪ್ರತಿ ತಿಂಗಳ ಆರಂಭದಲ್ಲಿ ಅನೇಕ ಹಣಕಾಸೇತರ ನಿಯಮಗಳು ಬದಲಾಗುತ್ತಿವೆ. ಸದ್ಯ ಇನ್ನೇನು ಕೆಲವೇ ದಿನಗಳಲ್ಲಿ ಜೂನ್ ತಿಂಗಳು ಮುಗಿದು ಜುಲೈ ಆರಂಭವಾಗಲಿದೆ. ಜುಲೈ ತಿಂಗಳ ಆರಂಭದ ಕಾರಣ ಈ ತಿಂಗಳಿನಲ್ಲಿ ಕೂಡ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗುವುದು ಬಾಕಿ ಇದೆ.

ಜುಲೈ 1 ರಿಂದ ದೇಶದಲ್ಲಿ ಈ ನಿಯಮಗಳು ಬದಲಾಗುವುದು ಸಹಜ. ಗ್ರಾಹಕರು ಹೊಸ ನಿಯಮದ ಅನುಸಾರ ತಮ್ಮ ವ್ಯವಹಾರವನ್ನು ಮಾಡಬೇಕಾಗುತ್ತದೆ. ನೀವು ಬದಲಾಗಿರುವ ನಿಯಮಗಳನ್ನು ತಿಳಿಯಲು ಈ ಲೇಖನವನ್ನು ಓದಿ. ನಾವೀಗ ಈ ಲೇಖನದಲ್ಲಿ ಜುಲೈ ನಲ್ಲಿ ಬದಲಾಗಲಿರುವ ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

New Rule From July 1st
Image Credit: racgp

ಜುಲೈ 1 ರಿಂದ ದೇಶದಲ್ಲಿ ಜಾರಿಗೆ ಬರಲಿದೆ ಈ ಎಲ್ಲಾ ಹೊಸ ನಿಯಮಗಳು, ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ
•LPG Gas Cylinder Price
ನಿಮಗೆ ತಿಳಿದಿರುವ ಹಾಗೆ ಗ್ಯಾಸ್ ಸಿಲಿಂಡರ್ ಬೆಲೆಗಳು ತಿಂಗಳ ಮೊದಲ ದಿನದಂದು ಬದಲಾಗುತ್ತದೆ. ಗ್ಯಾಸ್ ಬೆಲೆಯಲ್ಲಿ ಇಳಿಕೆಯಾಗುತ್ತದೆಯೋ ಅಥವಾ ಏರಿಕೆಯಾಗುತ್ತದೆಯೋ ಎನ್ನುವುದು ತಿಂಗಳ ಮೊದಲ ದಿನ ತಿಳಿಯುತ್ತದೆ. ಜುಲೈ1 ರಂದು ದೇಶಿಯ ಸಿಲಿಂಡರ್ ಗಳು ಹಾಗೂ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ.

•Bank Holiday In July
ಇನ್ನು ಪ್ರತಿ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಒಂಧಿಷ್ಟು ರಜೆಯನ್ನು ನಿಗದಿಪಡಿಸಲಾಗುತ್ತದೆ. ಹಬ್ಬ, ಸರ್ಕಾರೀ ರಜೆ ಹಾಗೂ ಭಾನುವಾರ ಶನಿವಾರದ ರಜೆ ಸೇರಿದಂತೆ ಬ್ಯಾಂಕ್ ಗಳು ಕೆಲ ದಿನಗಳು ಬಂದ್ ಅಗರುತ್ತದೆ. ಇನ್ನು RBI ಬಿಡುಗಡೆ ಮಾಡಿರುವ ಬ್ಯಾಂಕ್ ರಜಾ ದಿನದ ಪಟ್ಟಿಯ ಪ್ರಕಾರ ಜುಲೈ ನಲ್ಲಿ 12 ದಿನಗಳು ಬ್ಯಾಂಕ್ ಬಂದ್ ಆಗಿರಲಿದೆ. ಆಯಾ ರಾಜ್ಯದ ಹಬ್ಬದ ವಿಶೇಷತೆಗೆ ಆಧರಿಸಿ ಕೆಲ ರಾಜ್ಯದಲ್ಲಿ ರಜೆಯನ್ನು ನೀಡಲಾಗುತ್ತದೆ. ಇನ್ನು ಬ್ಯಾಂಕ್ ಗಳು ಮುಚ್ಚಿದ್ದರು ಕೂಡ ಗ್ರಾಹಕರಿಗೆ Online ನಲ್ಲಿ ಸೇವೆಗಳು ಲಭ್ಯವಿರುತ್ತದೆ.

LPG Cylinder Price
Image Credit: Lokmat

•Credit Card Rule
ಜೂನ್ 30 ರ ನಂತರ, ಕೆಲವು ಪ್ಲಾಟ್‌ ಫಾರ್ಮ್‌ ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್‌ ಗಳನ್ನು ಪಾವತಿಸಲು ಕಷ್ಟವಾಗಬಹುದು. Phonepay, Cred, Builddesk ಮತ್ತು Infibeam Avenue ಇವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮಗಳಿಂದ ಪ್ರಭಾವಿತವಾಗಬಹುದಾದ ಕೆಲವು ಪ್ರಮುಖ ಫಿನ್‌ ಟೆಕ್‌ ಗಳಾಗಿವೆ. ಫೋನ್ ಪೇ, ಕ್ರೆಡಿಟ್, ಬಿಲ್ ಡೆಸ್ಕ್ ಪ್ಲಾಟ್‌ ಫಾರ್ಮ್‌ ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳ ಮೇಲೆ ಪರಿಣಾಮ ಬೀರುತ್ತದೆ.

Join Nadunudi News WhatsApp Group

ಜೂನ್ 30 ರ ನಂತರದ ಎಲ್ಲಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಮೂಲಕ ಪ್ರಕ್ರಿಯೆಗೊಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳಿದೆ. HDFC ಬ್ಯಾಂಕ್, ICICI ಬ್ಯಾಂಕ್ ಮತ್ತು Axis ಬ್ಯಾಂಕ್ BBPS ಅನ್ನು ಸಕ್ರಿಯಗೊಳಿಸಿಲ್ಲ. ಈ ಬ್ಯಾಂಕ್‌ ಗಳು ಗ್ರಾಹಕರಿಗೆ ಒಟ್ಟು 5 ಕೋಟಿಗೂ ಹೆಚ್ಚು ಕ್ರೆಡಿಟ್ ಕಾರ್ಡ್‌ ಗಳನ್ನು ವಿತರಿಸಿವೆ. ಅದಾಗ್ಯೂ, ಈ ಬ್ಯಾಂಕ್‌ ಗಳು ಇನ್ನೂ ಸೂಚನೆಗಳನ್ನು ಪಾಲಿಸುತ್ತಿಲ್ಲ. ಈಗಾಗಲೇ BBPS ಸದಸ್ಯರಾಗಿರುವ PhonePay ಮತ್ತು CRED ನಂತಹ ಫಿನ್‌ ಟೆಕ್‌ ಗಳು ಜೂನ್ 30 ರ ನಂತರ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ.

Credit Card Rules 2024
Image Credit: Informalnewz

Join Nadunudi News WhatsApp Group