New Rule: ಜೂನ್ 1 ರಿಂದ ಬದಲಾಗಲಿವೆ ಈ ಐದು ನಿಯಮಗಳು.

ಜೂನ್ 1 ರಿಂದ ಈ ಐದು ನಿಯಮಗಳು ಬದಲಾಗಲಿವೆ. ಜೂನ್ ತಿಂಗಳ ಆರಂಭದಲ್ಲಿ ಯಾವ ಯಾವ ನಿಯಮಗಳು ಬದಲಾಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

New Rule From June 1st: ಹೊಸ ಹಣಕಾಸು ವರ್ಷ ಆರಂಭದ ದಿನದಿಂದ ಸಾಕಷ್ಟು ನಿಯಮಗಳು ಬದಲಾಗುತ್ತಿದೆ. ಪ್ರತಿ ತಿಂಗಳು ಮುಗಿಯುತ್ತಿದ್ದಂತೆ ಹೊಸ ಹೊಸ ನಿಯಮಗಳು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಏಪ್ರಿಲ್ ಮತ್ತು ಮೇ ತಿಂಗಳ ಆರಂಭದಿಂದ ಸಾಕಷ್ಟು ನಿಯಮಗಳು ಬದಲಾಗಿವೆ. ಇದೀಗ ಮೇ ತಿಂಗಳು ಮುಗಿದು ಜೂನ್ ಆರಂಭಗೊಳ್ಳಲಿದೆ. ಜೂನ್ ತಿಂಗಳ ಆರಂಭದಲ್ಲಿ ಕೂಡ ಅನೇಕ ನಿಯಮಗಳು ಬದಲಾಗಲಿದೆ. ಇನ್ನು ಜೂನ್ 1 ರಿಂದ ಈ ಐದು ನಿಯಮಗಳು ಬದಲಾಗಲಿವೆ. ಜೂನ್ ತಿಂಗಳ ಆರಂಭದಲ್ಲಿ ಯಾವ ಯಾವ ನಿಯಮಗಳು ಬದಲಾಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

New Rule From June 1st
Image Source: News18

 

ಜೂನ್ 1 ರಿಂದ ಬದಲಾಗಲಿವೆ ಈ ಐದು ನಿಯಮಗಳು
*ಕೇಂದ್ರ ಕೈಗಾರಿಕಾ ಸಚಿವಾಲಯ ಮೇ 21 ರಂದು ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕಡಿತಗೊಳಿಸಲು ಸೂಚನೆ ನೀಡಿದೆ. ಈ ಕಾರಣದಿಂದಾ ಜೂನ್ 1 ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆ ದುಬಾರಿಯಾಗಲಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಸುಮಾರು 20 ರಿಂದ 30 ಸಾವಿರ ರೂ. ಹೆಚ್ಚಳವಾಗಲಿದೆ.

*ವಾರಸುದಾರರಿಲ್ಲದ ಠೇವಣಿ ಮೊತ್ತವನ್ನು ಸೂಕ್ತ ವಾರಸುದಾರರಿಗೆ ಪಾವತಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯ ಪ್ರತಿ ಬ್ಯಾಂಕ್ ನಲ್ಲಿ ವಿತ್ ಡ್ರಾ ಮಾಡದೆ ಉಳಿದಿರುವ ಠೇವಣಿಯ ಮೊತ್ತವನ್ನು ಸೂಕ್ತ ವಾರಸುದಾರರನ್ನು ಪತ್ತೆ ಹಚ್ಚಿ ಪಾವತಿಸಲಾಗುತ್ತದೆ.

New Rule From June 1st
Image Source: Deccan Heraland

*ಜೂನ್ 1 ರಿಂದ ಬ್ಯಾಂಕ್ ಲಾಕರ್ ನಿಯಮಗಳು ಬದಲಾಗಲಿವೆ. ಹೊಸ ನಿಯಮದ ಪ್ರಕಾರ, ಗ್ರಾಹಕರು ಬ್ಯಾಂಕ್ ಲಾಕರ್ ನಲ್ಲಿ ಆಭರಣಗಳು ಮತ್ತು ಪ್ರಮುಖ ದಾಖಲೆಗಳಂತಹ ಕಾನೂನು ಬದ್ದವಾಗಿ ಮಾನ್ಯವಾದ ವಸ್ತುಗಳನ್ನು ಮಾತ್ರ ಇಡಲು ಸಾಧ್ಯವಾಗುತ್ತದೆ. ಒಪ್ಪಂದದಲ್ಲಿ ಯಾವ ವಸ್ತುಗಳು ಇರಿಸಲಾಗುವುದು ಎನ್ನುವ ಬಗ್ಗೆ ಅನುಮತಿಸಲಾಗುತ್ತದೆ.

Join Nadunudi News WhatsApp Group

*ಔಷದಿ ತಯಾರಿಸುವ ಕಂಪನಿಗಳು ಅವುಗಳನ್ನು ರಫ್ತು ಮಾಡುವ ಮುನ್ನ ಪರಿಶೀಲಿಸುವುದು ಕಡ್ಡಾಯ. ಸರಕಾರಿ ಪ್ರಯೋಗಾಲಯದಲ್ಲಿ ಕಫ್ ಸಿರಪ್‌ ಪರೀಕ್ಷೆಗೊಳಗಾದ ಅನಂತರವೇ ರಫ್ತಿಗೆ ಅನುಮತಿ ಸಿಗಲಿದೆ.

*ಪ್ರತಿ ತಿಂಗಳ ಆರಂಭದಲ್ಲಿ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಪರಿಷ್ಕರಣೆ ಆಗುವುದು ಕಡ್ಡಾಯವಾಗಿದೆ. ಜೂನ್ 1 ರಿಂದ ಗ್ಯಾಸ್ ಗ್ಯಾಸ್ ಸಿಲಿಂಡರ್ ಗಳ ಬೆಲೆ ಹೆಚ್ಚಾಗಬಹುದು ಅಥವಾ ಕಡಿಮೆ ಆಗಬಹುದು. ಸಿಎಂ ಜಿ ಹಾಗೂ ಪಿಎಂ ಜಿ ಬೆಲೆಗಳು ಪರಿಷ್ಕರಣೆ ಆಗುವ ಸಾಧ್ಯತೆ ಇದೆ.

New Rule From June 1st
Image Source: Deccan Heraland

Join Nadunudi News WhatsApp Group