Ration Rice: ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ದೇಶದಲ್ಲಿ ಜಾರಿಗೆ ಬರಲಿದೆ ದೊಡ್ಡ ಯೋಜನೆ.

ರೇಷನ್ ಕಾರ್ಡ್ ಇದ್ದವರಿಗೆ ಸರ್ವರ್ಧಿಕ ಅಕ್ಕಿ ವಿತರಣೆ ಮಾಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ.

Ration Card Food Supply: ಕೇಂದ್ರ ಸರ್ಕಾರವು (Central Government) ದೇಶದೆಲ್ಲೆಡೆ ಜನಸಾಮಾನ್ಯರಿಗಾಗಿ ಉಚಿತ ಪಡಿತರ ವಿತರಣೆ ನೀಡುತ್ತಿದೆ. ದೇಶದ ಅದೆಷ್ಟೋ ಬಡ ಜನರು ಈ ಉಚಿತ ಪಡಿತರ ವಿತರಣೆಯಿಂದ ಲಾಭವನ್ನು ಪಡೆಯುತ್ತಿದ್ದಾರೆ.

ಇನ್ನು ಪಡಿತರ ವಿತರಣೆಯ ವೇಳೆ ಜನಸಾಮಾನ್ಯರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ಉಚಿತ ಪಡಿತರ ವಿತರಣೆಯ ವೇಳೆ ಹೊಸ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ. ನೀವು ಪಡಿತರ ಚೀಟಿದಾರರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಕೊಳ್ಳಿ.

Ration Card Food Supply
Image Source: Zee News

ಪಡಿತರ ವಿತರಣೆಯಲ್ಲಿ ಹೊಸ ನಿಯಮ
ಉಚಿತ ಪಡಿತರ ವಿತರಣಾ ಯೋಜನೆಯ ಅಡಿಯಲ್ಲಿ ಸಾಕಷ್ಟು ಜನರು ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಪಡಿತರ ವಿತರ ವ್ಯವಸ್ಥೆಯಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹೊಸ ನಿಯಮವು ಏಪ್ರಿಲ್ 20 ರಿಂದ ಜಾರಿಗೆ ಬಂದಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಉತ್ತಮ ಪಡಿತರನ್ನು ನೀಡುವುದು ಸರ್ಕಾರದ ಗುರಿಯಾಗಿದೆ.

Ration Card Food Supply
Image Source: Zee News

ಸಾರವರ್ದಿತ ಅಕ್ಕಿ ವಿತರಣೆ
ಸಾರವರ್ದಿತ ಅಕ್ಕಿಯನ್ನು ದೇಶದಾದ್ಯಂತ ಜಾರಿಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಹೊಸ ನಿಯಮವು 269 ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಇನ್ನು ಮಾರ್ಚ್ 2024 ರೊಳಗೆ ಇಡೀ ದೇಶದಾದ್ಯಂತ ಸಾರವರ್ದಿತ ಅಕ್ಕಿ ವಿತರಣಾ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

ಇನ್ನು ರಾಜಸ್ಥಾನದ (Rajasthan) ಹಲವು ಜಿಲ್ಲೆಗಳಲ್ಲಿ ಈ ಸಾರವರ್ದಿತ ಅಕ್ಕಿ ವಿತರಣಾ ವ್ಯವಸ್ಥೆ ಜಾರಿಗೆ ಬಂದಿದೆ. ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ರಕ್ತಹೀನತೆಯ ಸಮಸ್ಯೆಯನ್ನು ನೀಗಿಸಲು ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.

Join Nadunudi News WhatsApp Group

ಮೈಕ್ರೋನ್ಯೂಟ್ರಿಯಂಟ್‌ಗಳನ್ನು ಹೊಂದಿರುವ ಸಾರವರ್ದಿತಾ ಅಕ್ಕಿಯಿಂದಾಗಿ ರಕ್ತ ಹೀನತೆಯ ಸಮಸ್ಯೆ ದೂರವಾಗುತ್ತದೆ. ದೇಶದಲ್ಲಿ ಸುಮಾರು 735 ಕ್ಕೂ ಹೆಚ್ಚು ಜಿಲ್ಲೆಗಳಿವೆ. ಸಾರವರ್ದಿತ ಅಕ್ಕಿ ವಿತರಣೆಯು 269 ಜಿಲ್ಲೆಗಳಲ್ಲಿ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾರಾಜ್ಯ  ಜಿಲ್ಲೆಗಳಿಗೂ ಈ ಸಾರವರ್ದಿತ ಅಕ್ಕಿ ವಿತರಣಾ ವ್ಯವಸ್ಥೆ ಜಾರಿಗೆ ಬರಲಿದೆ.

Ration Card Food Supply
Image Source: Zee News

Join Nadunudi News WhatsApp Group