Free Bus: ಪ್ರತಿನಿತ್ಯ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಖಡಕ್ ಎಚ್ಚರಿಕೆ, ಹೊಸ ರೂಲ್ಸ್ ಜಾರಿಗೆ

ಉಚಿತ ಪ್ರಯಾಣವನ್ನು ಮಾಡುವ ಮಹಿಳೆಯರು ಸರ್ಕಾರದ ಈ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ

New Rules On Shakti Yojana Karnataka: ಇದೀಗ ಮತ್ತೆ ಕೊರೋನಾ ಮಹಾಮಾರಿಯ ಬಗ್ಗೆ ದೇಶದಲ್ಲೇ ಚರ್ಚೆ ಹೆಚ್ಚುತ್ತಿದೆ. ಕಳೆದ ಕೆಲವು ವರ್ಷದಿಂದ ದೇಶದವನ್ನು ಬಿಟ್ಟುಹೋಗಿದ್ದ ಕರೋನ (Covid- 19) ಇದೀಗ ಹೊಸ ರೂಪಾಂತರದಲ್ಲಿ ಜನರನ್ನು ಕಾಡಲು ಮುಂದಾಗಿದೆ.  ಕಳೆದ ಕೆಲವು ವರ್ಷಗಳ ಹಿಂದೆ ಕಾಣಿಸಿಕೊಂಡ ಈ ಕೊರೋನಾ ಮಹಾಮಾರಿ ಲಕ್ಷಾಂತರ ಜನರ ಪ್ರಾಣವನ್ನು ಕಸಿದುಕೊಂಡಿತ್ತು. ಸಾಕಷ್ಟು ಜನರು ಸಾವಿನ ಬಾಗಿಲು ತಟ್ಟಿ ಬಂದಿರುವುದುಂಟು.

ಈಗಲೂ ಕೂಡ ಕೊರೋನಾ ಎಂದಾಕ್ಷಣ ಒಮ್ಮೆ ಭಯ ಹುಟ್ಟುವುದು ಸಹಜ. ಹೀಗಿರುವ ಇದೀಗ ಮತ್ತೆ ಹೊಸ ಕೊರೋನಾ ರೂಪಾಂತರ ಹುಟ್ಟಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಕೇರಳದಲ್ಲಿ ಕರೋನ ಅಟ್ಟಹಾಸ ಮತ್ತೆ ಆರಂಭ ಆಗಿದ್ದು ಸದ್ಯ ಸರ್ಕಾರ ಎಚ್ಚರಿಕೆಯನ್ನ ನೀಡಿದೆ. ಕರೋನ ಮತ್ತೆ ಹೆಚ್ಚಾಗಿರುವ ಕಾರಣ ಸರ್ಕಾರ ಈಗ ಶಕ್ತಿ ಯೋಜನೆಯಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ಖಡಕ್ ಎಕ್ವರಿಕೆ ನೀಡಿದೆ.

New Rule For Free Bus Travel
Image Credit: Live Mint

ಹೊಸ ರೂಲ್ಸ್ ಜಾರಿಗೆ ತಂದ ಸರ್ಕಾರ
ಕಳೆದ ಬಾರಿ ಕೊರೋನಾ ತನ್ನ ಆಕ್ರಮಣದ ಮೂಲಕ ಅದೆಷ್ಟೋ ಅಮಾಯಕ ಜೀವಗಳ ಬಲಿ ತೆಗೆದುಕೊಂಡಿದೆ. ಹೀಗಾಗಿ ಈ ಬಾರಿ ಸರ್ಕಾರ ಬಾರಿ ಮುನ್ನೆಚ್ಚರಿಕೆ ವಹಿಸುತ್ತಿದೆ. ಜೆಏನ್ 1 ಸೋಂಕು ಮತ್ತೆ ಬೇರೆ ಬೇರೆ ರೂಪಾಂತರಗಳಲ್ಲಿ ಹುಟ್ಟಿಕೊಂಡಿದೆ. ಈ ಹೊಸ ಸೋಂಕು ಇದೀಗ ಜನರನ್ನು ಕಾಡತೊಡಗಿದೆ. ಸದ್ಯ ರಾಜ್ಯದಲ್ಲಿ ಉಚಿತ ಪ್ರಯಾಣ ಇರುವುದರಿಂದ ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದು ಸಹಜ.

ಹೀಗಾಗಿ ಮುಖ್ಯವಾಗಿ ಮಹಿಳೆಯರ ಉಚಿತ ಪ್ರಯಾಣ ನಡೆಸುವಂತಹ KSRTC ಬಸ್ ಗಳಲ್ಲಿ ರಾಜ್ಯ ಸರ್ಕಾರ ಹೊಸ ನಿಯಮವನ್ನು ರೂಪಿಸಿದೆ. ಉಚಿತ ಪ್ರಯಾಣವನ್ನು ಮಾಡುವ ಮಹಿಳೆಯರು ಸರ್ಕಾರದ ಈ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ. ನೀವು ಉಚಿತ ಪ್ರಯಾಣವನ್ನು ಮಾಡುವ ಮುನ್ನ ಸರ್ಕಾರದ ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.

Guidelines Released For Free Bus Travel
Image Credit: Deccan Herald

ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಎಚ್ಚರಿಕೆ
ಸದ್ಯ ಪತ್ತೆಯಾಗಿರುವ ಕೊರೋನಾ ಹೊಸ ಸೋಂಕು ಜನರಿಗೆ ಹೆಚ್ಚು ತೊಂದರೆಯನ್ನು ನೀಡಬಾರದು ಎನ್ನುವ ಕಾರಣಕ್ಕೆ ಪ್ರಾರಂಭದಲ್ಲಿಯೇ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಉಚಿತ ಪ್ರಯಾಣ ಮಾಡುವಂತಹ 60 ವರ್ಷ ಮೇಲ್ಪಟ್ಟ ಮಹಿಳೆಯರು ಬಸ್ ನಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಹೆಚ್ಚು ಜನರು ಇರುವಂತಹ ಪ್ರದೇಶದಲ್ಲಿ ಜನರು ಸೇರುವ ಮುನ್ನ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ಬಗ್ಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನುಮುಂದೆ ನೀವು ಉಚಿತ ಪ್ರಯಾಣ ಮಾಡುವ ಮುನ್ನ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

Join Nadunudi News WhatsApp Group

Join Nadunudi News WhatsApp Group