New Traffic Rule: ಬೈಕ್ ಹಿಂದೆ ಕುಳಿತು ಪ್ರಯಾಣ ಮಾಡುವವರಿಗೆ ಹೊಸ ನಿಯಮ, ಇನ್ಮುಂದೆ ದಂಡ ಖಚಿತ

ಬೈಕ್ ಓಡಿಸುವಾಗ ಹಿಂಬದಿ ಸವಾರನ ಜೊತೆ ಮಾತನಾಡಿದ್ರೆ ಬೀಳುತ್ತೆ ದಂಡ

New Traffic Rule For Bike Riders: ಸಾಮಾನ್ಯವಾಗಿ ಬೈಕ್ ನಲ್ಲಿ ರೈಡ್ ಹೋಗಲು ಎಲ್ಲರು ಇಷ್ಟಪಡುತ್ತಾರೆ. ಬೈಕ್ ನಲ್ಲಿ ಸೋಲೋ ಟ್ರಿಪ್ ಹೋಗುವುದಕ್ಕಿಂತ ಹಿಂಬದಿಯಲ್ಲಿ ಒಬ್ಬರನ್ನು ಕೂರಿಸಿಕೊಂಡು ಮಾತನಾಡುತ್ತ ಹೋಗುವವರ ಸಂಖ್ಯೆಯೇ ಹೆಚ್ಚು. ಬೈಕ್ ನಲ್ಲಿ ಹಿಂಬದಿ ಇರುವವರ ಜೊತೆ ಮಾತನಾಡುತ್ತ ಹೋಗುವವರಿಗೆ ಸದ್ಯ ಸಂಚಾರ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಬೈಕ್ ಸವಾರರ ಸುರಕ್ಶೆತೆಗಾಗಿ ಸಂಚಾರ ಇಲಾಖೆ ಈ ಹೊಸ ನಿಯಮವನ್ನು ಪರಿಚಯಿಸಿದೆ ಎನ್ನಬಹುದು. ಆದಾಗ್ಯೂ, ಸಂಚಾರ ಇಲಾಖೆಯ ನಿಯಮವನ್ನು ಮೀರಿದರೆ ನೀವು ದಂಡ ಪಾವತಿಸುವುದರ ಜೊತೆಗೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಬೈಕ್ ನಲ್ಲಿ ಇಬ್ಬರ ಜೊತೆ ಸವರಿ ಮಾಡುವವರಿಗೆ ಸಂಚಾರ ಇಲಾಖೆ ಯಾವ ರೀತಿಯ ನಿಯಮವನ್ನು ರೂಪಿಸಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

New Traffic Rule For Bike Riders
Image Credit: Bangaloremirror

ಬೈಕ್ ಓಡಿಸುವಾಗ ಹಿಂಬದಿ ಸವಾರನ ಜೊತೆ ಮಾತನಾಡಿದ್ರೆ ಬೀಳುತ್ತೆ ದಂಡ
ಹಿಂಬದಿ ಸವಾರರಿದ್ದರೆ ಬೈಕ್ ಓಡಿಸುವಾಗ ಅವರೊಂದಿಗೆ ಮಾತನಾಡಿ ಹರಟೆ ಹೊಡೆಯುತ್ತಿರುವುದನ್ನು ನೀವು ನೋಡಿರಬಹುದು. ಹೀಗೆ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ. ನಮ್ಮಲ್ಲಿ ಹಲವರು ಇದನ್ನು ಸಹ ಮಾಡುತ್ತಾರೆ. ಆದರೆ ಇನ್ಮುಂದೆ ಬೈಕ್ ನಲ್ಲಿ ಹಿಂಬದಿ ಸವಾರನ ಜೊತೆ ಹೋಗುವಾಗ ಪೋಲೀಸರು ಈ ರೀತಿ ಮಾತನಾಡುವುದನ್ನು ಕಂಡರೆ ದಂಡ ಹಾಕುವುದಂತೂ ಖಂಡಿತ.

ಹೌದು, ಈ ರೀತಿಯ ಆದೇಶವನ್ನು ಕೇರಳದ ಮೋಟಾರು ವಾಹನ ಇಲಾಖೆ ಅಥವಾ ಸಂಚಾರ ಇಲಾಖೆ ಹೊರಡಿಸಿದೆ. ಈ ಸ್ಥಿತಿಯಲ್ಲಿ ಬೈಕ್‌ ನಲ್ಲಿ ಹಿಂಬದಿ ಸವಾರರ ಜೊತೆ ಮಾತನಾಡುವುದನ್ನು ಮುಂದುವರಿಸಿದರೆ ಅಂತಹವರಿಗೆ ದಂಡ ವಿಧಿಸಲಾಗುವುದು ಎಂದು ಕೇರಳದ ಪೊಲೀಸ್ ಇಲಾಖೆ ತಿಳಿಸಿದೆ. ಇದಕ್ಕೆ ಕಾರಣವನ್ನೂ ಅಧಿಕಾರಿಗಳು ನೀಡಿದ್ದಾರೆ.

New Rules For Bike Riders
Image Credit: Deccanchronicle

ಹೊಸ ನಿಯಮ ಜಾರಿಗೆ ಬರಲು ಕಾರಣವೇನು…?
ಇತ್ತೀಚೆಗೆ ಪ್ರಕಟವಾದ ಆನ್‌ ಲೈನ್ ವರದಿಯ ಪ್ರಕಾರ, ದ್ವಿಚಕ್ರ ವಾಹನ ಸವಾರರು ಸವಾರಿ ಮಾಡುವಾಗ ಮಾತನಾಡುವ ಪಿಲಿಯನ್ ಪ್ರಯಾಣಿಕರಿಂದ ವಿಚಲಿತರಾಗುತ್ತಾರೆ. ಇದು ಸಾಕಷ್ಟು ಅಪಾಯಕಾರಿ ಮತ್ತು ಅಪಘಾತಗಳಿಗೆ ಕಾರಣವಾಗಬಹುದು. ಜನರು ಈ ರೀತಿ ಮಾಡದಂತೆ ತಡೆಯಲು ಮೋಟಾರು ವಾಹನ ಇಲಾಖೆ ಈ ಹೊಸ ಅಧಿಸೂಚನೆ ಹೊರಡಿಸಿದೆ.

Join Nadunudi News WhatsApp Group

ಪಿಲಿಯನ್ ಪ್ರಯಾಣಿಕರು ಸವಾರರ ಗಮನವನ್ನು ಬೇರೆಡೆಗೆ ಸೆಳೆಯುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಈ ಸುತ್ತೋಲೆಯನ್ನು ಎಲ್ಲಾ ಜಾರಿ ಅಧಿಕಾರಿಗಳಿಗೆ ನೀಡಲಾಗಿದ್ದರೂ, ಅಧಿಕಾರಿಗಳು ಹೇಗೆ ದಂಡ ವಿಧಿಸುತ್ತಾರೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಆದಾಗ್ಯೂ, ನೀವು ಬೈಕ್ ನಲ್ಲಿ ಸವರಿ ಮಾಡುವಾಗ ಹಿಂಬದಿ ಸವಾರನ ಜೊತೆಗೆ ಮಾತನಾಡುವುದನ್ನು ಕಡಿಮೆ ಮಾಡುವುದು ಉತ್ತಮ.

New Traffic Rule
Image Credit: Informalnewz

Join Nadunudi News WhatsApp Group