ಹೊಸ ಮನೆ ಕಟ್ಟಿಸುವವರಿಗೆ ಬಂಪರ್ ಗುಡ್ ನ್ಯೂಸ್, ಸಿಗಲಿದೆ 100 ರೂಪಾಯಿಗೆ ಒಂದು ಲೋಡ್ ಮರಳು.

ದೇಶದಲ್ಲಿ ಮತ್ತು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೊಸ ಯೋಜನೆ ಜಾರಿಗೆ ಬರುತ್ತಿದ್ದು ಈ ಯೋಜನೆಗಳ ಲಾಭವನ್ನ ಹಲವು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೇ ಮನೆ ಕಟ್ಟಬೇಕು ಅನ್ನುವ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ತಾನು ಒಂದು ಸ್ವಂತ ಮನೆ ಕಟ್ಟಿಸಬೇಕು ಮತ್ತು ತನ್ನ ಸ್ವಂತ ಮನೆಯಲ್ಲಿ ನಾನು ಇರಬೇಕು ಅನ್ನುವ ಆಸೆ ಇದ್ದೆ ಇರುತ್ತದೆ. ಇನ್ನು ಪ್ರಸ್ತುತ ದಿನಗಳಲ್ಲಿ ಇರುವ ವಸ್ತುಗಳ ಬೆಲೆಗಳನ್ನ ನೋಡಿದರೆ ಮನೆಯನ್ನ ಕಟ್ಟಿಸುವುದು ಹಾಹಾಳ ಕಷ್ಟವೆಂದು ಹೇಳಬಹುದು. ದೇಶದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ ದಿನದಿಂದ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದು ಜನರಿಗೆ ಬಹಳ ಕಷ್ಟವಾಗಯುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಬೆಲೆ ಜಾಸ್ತಿಯಾದ ವಸ್ತುಗಳಲ್ಲಿ ಮರಳು ಕೂಡ ಒಂದು ಎಂದು ಹೇಳಬಹುದು.

ಮನೆ ಕಟ್ಟಲು ಬೇಕಾದ ಪ್ರಮುಖವಾದ ವಸ್ತುಗಳಲ್ಲಿ ಮರಳು ಕೂಡ ಎಂದು ಹೇಳಬಹುದು ಮತ್ತು ಮರಳಿಲ್ಲದೆ ಮನೆಯನ್ನ ನಿರ್ಮಾಣ ಮಾಡುವುದು ಬಹಳ ಕಷ್ಟವೆಂದು ಹೇಳಿದರೆ ತಪ್ಪಾಗಲ್ಲ. ರಾಜ್ಯದಲ್ಲಿ ಕೆಲವು ಸಮಯಗಳಿಂದ ಹಲವು ಮರಳು ನೀತಿ ಜಾರಿಗೆ ಬಂದಿದ್ದು ಇದರಿಂದ ಜನರು ಬೇಸೆತ್ತು ಹೋಗಿದ್ದಾರೆ ಎಂದು ಹೇಳಬಹುದು. ಇನ್ನು ಈಗ ಮನೆಯನ್ನ ಕಟ್ಟಿಸುತ್ತಿರುವ ಎಲ್ಲರಿಂಗೂ ಮತ್ತು ಮುಂದಿನ ದಿನಗಳಲ್ಲಿ ಮನೆಯನ್ನ ಕಟ್ಟಬೇಕು ಅಂದುಕೊಂಡಿರುವ ಎಲ್ಲಾ ಜನರಿಗೆ ಬಂಪರ್ ಸಿಹಿಸುದ್ದಿ ಬಂದಿದೆ ಎಂದು ಹೇಳಬಹುದು. ಹಾಗಾದರೆ ಏನದು ಸಿಹಿಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

news of sand

ಹೌದು ಸ್ನೇಹಿತರೆ ರಾಜ್ಯದಲ್ಲಿ ಹೊಸದಾದ ಮರಳು ನೀತಿ ಜಾರಿಗೆ ಬರುತ್ತಿದ್ದು ಮನೆಯನ್ನ ಕಟ್ಟಿಸುತ್ತಿರುವವರಿಗೆ ನೂರು ರೂಪಾಯಿಗೆ ಒಂದು ಟನ್ ಮರಳನ್ನ ನೀಡಲಾಗುತ್ತಿದೆ. ಅಕ್ರಮವನ್ನ ತಡೆಗಟ್ಟುವ ಉದ್ದೇಶದಿಂದ ನೂತನ ಮರಳು ನೀತಿಯನ್ನ ದೇಶದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಅವರು ತಿಳಿಸಿದ್ದಾರೆ. ಇನ್ನು ಸಭೆಯನ್ನ ಮಾಡಿರುವ ಸಚಿವರು ಜನರಿಗೆ ಕೈಗಿಟುಕುವ ಬೆಲೆಯಲ್ಲಿ ಮರಳನ್ನ ನೀಡಬೇಕು ಅನ್ನುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ. ಇನ್ನು ಇದೆ ತಿಂಗಳ ಕೊನೆಯಲ್ಲಿ ಉಚಿತ ಮರಳಿ ನೀತಿ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಉಚಿತ ಮರಳಿನ ಜೊತೆಗೆ ಇದೆ ತಿಂಗಳ ಅಂತ್ಯದಲ್ಲಿ ಹೊಸ ಮರಳು ನೀತಿಯನ್ನ ಜಾರಿಗೆ ತರಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಮರಳು ನೀತಿ ಸಿದ್ದವಾಗಿದ್ದು ಇಡೀ ದೇಶಕ್ಕೆ ಮಾದರಿಯಾಗುವಂತಹ ನೀತಿ ಇದಾಗಲಿದೆ ಎಂದು ಅವರು ತಿಳಿಸಿದ್ದಾರೆ. ಹತ್ತು ಲಕ್ಷದ ಒಳಗಿನ ಮನೆಯ ನಿರ್ಮಾಣಕ್ಕೆ ನೂರು ರೂಪಾಯಿಗೆ ಒಂದು ಟನ್ ಮರಳನ್ನ ನೀಡಲಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆಯನ್ನ ಕಟ್ಟಿಕೊಳ್ಳುವವರಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಹಳ್ಳಕೊಳ್ಳ, ಚೆಕ್ ಡ್ಯಾಮ್ ಮತ್ತು ಇತರೆ ಪ್ರದೇಶದಲ್ಲಿ ಉಚಿತವಾಗಿ ಮರಳನ್ನ ಪಡೆದು ಎತ್ತಿನ ಗಾಡಿಗಳ ಮೂಲಕ ಸಾಗಾಣಿಕೆಗೆ ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸ್ನೇಹಿತರೆ ಈ ಮರಳು ನೀತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

news of sand

Join Nadunudi News WhatsApp Group