NHAI  FASTAg Rule: ದೇಶದಲ್ಲಿ ಜಾರಿಗೆ ಬಂತು ಹೊಸ fastag ನಿಯಮ, ಇನ್ಮುಂದೆ ಕೊಡಬೇಕು ದುಬಾರಿ ದಂಡ

ನಿಮ್ಮ ವಾಹನದ ಮೇಲೆ ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ಬೀಳುತ್ತೆ ದಂಡ

NHAI  FASTAg New Update: ವಾಹನ ಸವಾರರು ಟೋಲ್ ಪಾವತಿ ಮಾಡಲು ಫಾಸ್ಟಾಗ್ ಅನ್ನು ಬಳಸುತ್ತಾರೆ. ಫಾಸ್ಟ್ ಟ್ಯಾಗ್ ನ ಮೂಲಕ ಟೋಲ್ ಪಾವತಿ ಬಹಳ ಸರಳವಾಗಿದೆ ಎನ್ನಬಹುದು. ಇನ್ನು NHAI ಫಾಸ್ಟ್ ಟ್ಯಾಗ್ ಗೆ ಸಂಬಂಧಿಸಿದಂತೆ ಅನೇಕ ನಿಯಮಾವಳಿಗಳನ್ನು ಆಗಾಗ ಜಾರಿಗೊಳಿಸುತ್ತದೆ.

ಸದ್ಯ NHAI ಫಾಸ್ಟ್ ಟ್ಯಾಗ್ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಇನ್ನುಮುಂದೆ ವಾಹನ ಸವಾರರು ಇಂತಹ ತಪ್ಪು ಮಾಡಿದರೆ ಡಬಲ್ ಟೋಲ್ ಪಾವತಿಸಬೇಕಾಗುತ್ತದೆ ಎಚ್ಚರ. ಟೋಲ್ ಹಾದುಹೋಗುವ ಮುನ್ನ ವಾಹನ ಸವಾರರು ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ.

NHAI FASTAg New Update
Image Credit: Tribuneindia

ನಿಮ್ಮ ವಾಹನದ ಮೇಲೆ ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ಬೀಳುತ್ತೆ ದಂಡ
ಸದ್ಯ NHAI ಫಾಸ್ಟ್ ಟ್ಯಾಗ್ ಮೂಲಕ ಟೋಲ್ ಪಾವತಿ ಕಡ್ಡಾಯಗೊಳಿಸಿದೆ. ಟೋಲ್ ಪಾವತಿ ಪ್ರಕ್ರಿಯೆ ಸರಳಗೊಳ್ಳಲು NHAI FASTag ಅನ್ನು ಜಾರಿಗೊಳಿಸಿತ್ತು. ಸದ್ಯ NHAI ಫಾಸ್ಟ್ ಟ್ಯಾಗ್ ನಿಯಮದಲ್ಲಿ ಹೊಸ ನಿಯಮವನ್ನು ಸೇರಿಸಿದೆ. ಹೌದು, ಉದ್ದೇಶಪೂರ್ವಕವಾಗಿ ವಾಹನದ ಮುಂದಿನ ಗಾಜಿಗೆ ಫಾಸ್ಟ್ ಟ್ಯಾಗ್ ಅನ್ನು ಅಂಟಿಸದೆ ಇರುವವರಿಗೆ NHAI ಹೊಸ ನಿಯಮ ಜಾರಿಗೊಳಿಸಿದೆ. ಇಂತಹ ತಪ್ಪು ಮಾಡಿದ ವಾಹನ ಸವಾರರಿಗೆ ದುಪ್ಪಟ್ಟು ಟೋಲ್ ಪಾವತಿಸಲು NHAI ನಿರ್ಧರಿಸಿದೆ.

NHAI ಹೊಸ ನಿಯಮ ಏನಿದೆ ನೋಡಿ
ವಾಹನ ಸವಾರರಿಗೆ NHAI ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಫಾಸ್ಟ್ ಟ್ಯಾಗ್ ಅಂಟಿಸದೆ ಇರುವುದರಿಂದ ಟೋಲ್ ಪ್ಲಾಜಾ ಗಳಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದನ್ನು ತಡೆಯಲು ದುಪ್ಪಟು ಶುಲ್ಕ ವಿಧಿಸಬೇಕು ಎಂದು ಮಾರ್ಗಸೂಚಿ ಜಾರಿ ಮಾಡಿದೆ. ಫಾಸ್ಟ್ ಟ್ಯಾಗ್ ನಿಯಮವನ್ನು ಪಾಲಿಸದಿದ್ದರೆ ವಿಧಿಸಲಾಗುವ ದಂಡವನ್ನು ಎಲ್ಲರಿಗೂ ಕಾಣುವಂತೆ ಮಾಹಿತಿ ಪ್ರದರ್ಶಿಸಬೇಕು.

ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳ ನೋಂದಣಿ ನಂಬರ್ CCTV ಯಲ್ಲಿ ದಾಖಲಾಗಬೇಕು. ಇದರಿಂದ ಶುಲ್ಕಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ನಿರ್ವಹಣೆ ಮತ್ತು ವಾಹನವು ಟೋಲ್ ಲೇನ್ ನಲ್ಲಿಟ್ಟು ಎನ್ನುವುದನ್ನು ತಿಳಿಯಬೇಕು. ಫಾಸ್ಟ್ ಟ್ಯಾಗ್ ಅಂಟಿಸದ ವಾಹನಗಳು ಉಚಿತ ಪ್ಲಾಜಾದಲ್ಲಿ ಹಾದುಹೋಗಬೇಕಾಗುತ್ತದೆ. ಮತ್ತು ದುಪ್ಪಟ್ಟು ಶುಲ್ಕ ಭರಿಸುವುದು ಮಾತ್ರವಲ್ಲದೆ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು NHAI ತನ್ನ ಮಾರ್ಗಸೂಚಿಯಲ್ಲಿ ಪ್ರಕಟಣೆ ಹೊರಡಿಸಿದೆ.

Join Nadunudi News WhatsApp Group

NHAI FASTAg Latest News
Image Credit: News 24

Join Nadunudi News WhatsApp Group