Nita Ambani Necklace: ಮಗನ ಮದುವೆ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಧರಿಸಿದ ಪಚ್ಚೆ ವಜ್ರದ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ…? ದುಬಾರಿ ನೆಕ್ಲೆಸ್

ಮಗನ ಮದುವೆ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಧರಿಸಿದ ಪಚ್ಚೆ ವಜ್ರದ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ...?

Nita Ambani Expensive Jewellery In Anant Ambani Marriage Function: ಮುಕೇಶ್ ಅಂಬಾನಿ ಅವರ ಪತ್ನಿ Nita Ambani ಅವರು ಆಗಾಗ ತಮ್ಮ ಐಷಾರಾಮಿ ಜೀವನದ ವಿಚಾರವಾಗಿ ಸುದ್ದಿಯಾಗುತ್ತ ಇರುತ್ತಾರೆ. ದೇಶದ ಶ್ರೀಮಂತ ವ್ಯಕ್ತಿಯ ಪತ್ನಿಯಾಗಿರುವ ನೀತಾ ಅಂಬಾನಿ ಅವರು ಐಷಾರಾಮಿ ಜೀವನವನ್ನು ನಡೆಸುವುದು ಸಹಜವಾದ ವಿಚಾರ. ಈಗಾಗಲೇ ಸಾಕಷ್ಟು ಬಾರಿ ನೀತಾ ಅಂಬಾನಿ ಅವರು ತಮ್ಮ ದುಬಾರಿ ಉಡುಗೆ ತೊಡುಗೆಗಳ ವಿಚಾರವಾಗಿ ಸುದ್ದಿಯಾಗಿದ್ದಾರೆ.

ಈಗಂತೂ ತಮ್ಮ ಮಗನ ಮದುವೆ ಹತ್ತಿರವಾಗುತ್ತಿದೆ. ಹೀಗಾಗಲಿ ನೀತಾ ಅಂಬಾನಿ ದುಬಾರಿ ವಸ್ತ್ರ ಆಭರಣಗಳ ಜೊತೆಗೆ ಮಿಂಚುವುದಂತೂ ನಿಜ. ಇದೀಗ ಭಾನುವಾರ ನಡೆದ Anant Ambani Wedding Event ನಲ್ಲಿ ನೀತಾ ಅಂಬಾನಿ ಧರಿಸಿದ ನೆಕ್ಲೆಸ್ ಎಲ್ಲರ ಗಮನ ಸೆಳೆದಿದೆ. ನೀತಾ ಅಂಬಾನಿ ಧರಿಸಿದ ನೆಕ್ಲೆಸ್ ನ ಬೆಲೆಯ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ. ನಾವೀಗ ಈ ಲೇಖನದಲ್ಲಿ ನೀತಾ ಅಂಬಾನಿ ಧರಿಸಿದ ಅಪರೂಪದ ನೆಕ್ಲೆಸ್ ನ ಬೆಲೆ ಎಷ್ಟಿರಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Nita Ambani Expensive Jewelry
Image Credit: Oneindia

ದುಬಾರಿ ಬೆಲೆಯ ಪಚ್ಚೆ ನೆಕ್ಲೆಸ್ ಧರಿಸಿದ ನೀತಾ ಅಂಬಾನಿ
Anant Ambani Wedding Event ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಮದುವೆಗೆ ಇನ್ನು ನಾಲ್ಕೈದು ತಿಂಗಳು ಇರುವಾಗಲೇ ಮದುವೆಯ ಸಿದ್ಧತೆ ಭರ್ಜರಿಯಾಗಿಯೇ ನಡೆಯುತ್ತಿದೆ. ಮದುವೆಯ ಪೂರ್ವ ಕಾರ್ಯಕ್ರಮಕ್ಕೆ ಅಂಬಾನಿ ಅದೆಷ್ಟೋ ಕೋಟಿ ಹಣವನ್ನು ಖರ್ಚು ಮಾಡಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲ ಪ್ರಮುಖ ವ್ಯಕ್ತಿಗಳು ಆಗಮಿಸಿದ್ದಾರೆ.

ಇನ್ನು ಗೂಗಲ್ ನಲ್ಲಿ ಅನಂತ್ ಅಂಬಾನಿ ಮದುವೆಯ ಬಗ್ಗೆ ಹೆಚ್ಚು ಸರ್ಚ್ ಆಗುತ್ತಿದೆ ಎನ್ನಬಹುದು. ತಮ್ಮ ಕೊನೆಯ ಪುತ್ರನ ಮದುವೆಯ ಸಿದ್ಧತೆಯಲ್ಲಿರುವ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ತಮ್ಮ ಮಗನ ಮದುವೆಯಲ್ಲಿ ಮಿಂಚಲು ದುಬಾರಿ ವಸ್ತ್ರ, ಒಡವೆಗಳನ್ನು ಹಾಕುವುದು ಸಹಜ. ನೀತಾ ಅಂಬಾನಿ ಮದುವೆಯ ಕಾರ್ಯಕ್ರಮದಲ್ಲಿ ದುಬಾರಿ ಒಡವೆ ಧರಿಸಿ ಎಲ್ಲರನ್ನು ಅಚ್ಚರಿ ಮೂಡಿಸಿದ್ದಾರೆ.

Nita Ambani Diamond Necklace
Image Credit: Bollywood Shaadis

ಮಗನ ಮದುವೆ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಧರಿಸಿದ ಪಚ್ಚೆ ವಜ್ರದ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ…?
ಇದೀಗ Anant Ambani Wedding Event ನಲ್ಲಿ ನೀತಾ ಅಂಬಾನಿ ಧರಿಸಿದ ನೆಕ್ಲೆಸ್ ಮೇಲೆ ಎಲ್ಲರ ಗಮನವಿದೆ ಎನ್ನಬಹುದು. ನೀತಾ ಅಂಬಾನಿ ಅವರ ಪಚ್ಚೆ ಆಭರಣಗಳು ಇದೀಗ ಬಾರಿ ವೈರಲ್ ಆಗುತ್ತಿದೆ. ಇನ್ನು ನೀತಾ ಅಂಬಾನಿ ಧರಿಸಿದ ಪಚ್ಚೆ ಆಭರಣದ ಬೆಲೆ ಸುಮಾರು 400 ರಿಂದ 500 ಕೋಟಿ ಎಂದು ವರದಿಗಳು ಹೇಳುತ್ತದೆ. ಇನ್ನು ವೆಡ್ಡಿಂಗ್ ಇವೆಂಟ್ ಗೆ ಈ ರೀತಿ ದುಬಾರಿ ಒಡವೇಯನ್ನು ಹಾಕಿರುವ ನೀತಾ ಅಂಬಾನಿ ಇನ್ನು ಮದುವೆಗೆ ಅದೆಷ್ಟು ಕೋಟಿ ಬೆಲೆ ಬಾಳುವ ಆಭರವನ್ನು ಹಾಕಬಹುದು ಎಂದು ಯೋಚಿಸುವಂತಾಗಿದೆ.

Join Nadunudi News WhatsApp Group

Join Nadunudi News WhatsApp Group