Nita Ambani Diamond Necklace: ಮಗನ ಮದುವೆಗೆ ನಿಂತ ಅಂಬಾನಿ ಧರಿಸಿದ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ…? ವಿಶ್ವದ ದುಬಾರಿ ನೆಕ್ಲೆಸ್

ಮಗನ ಮದುವೆಗೆ 100 ಕ್ಯಾರೆಟ್ ಡೈಮಂಡ್ ನೆಕ್ಲೆಸ್ ಧರಿಸಿದ ನೀತಾ ಅಂಬಾನಿ

Nita Ambani Expensive Diamond Necklace Price: ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಸಾವಿರಾರು ಗಣ್ಯರು ಮತ್ತು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದುಬಾರಿ ಕಲ್ಯಾಣ ಮಹೋತ್ಸವದಲ್ಲಿ ಪ್ರಧಾನಿ ಮೋದಿ ಕೂಡ ಪಾಲ್ಗೊಂಡಿದ್ದರು.

ಸದ್ಯ ಎಲ್ಲೆಡೆ ದೇಶದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಮದುವೆಯ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ದೇಶದ ದುಬಾರಿ ಮದುವೆಯನ್ನು ಸಾಕಷ್ಟು ಜನರು ಕಣ್ತುಂಬಿಕೊಂಡಿದ್ದಾರೆ. ಸೋಶಿಯಲ್ ಮಿಡಿಯದಲ್ಲೆಲ್ಲ ಅನಂತ್ ಅಂಬಾನಿ ಅದ್ದೂರಿಯ ಮದುವೆಯ ವಿಡಿಯೋ, ಫೋಟೋಗಳೇ ತುಂಬಿ ಹೋಗಿದೆ ಎನ್ನಬಹುದು. ಸದ್ಯ ಅನಂತ ಅಂಬಾನಿ ಅದ್ದೂರಿ ಮದುವೆಯ ಸುದ್ದಿಯ ಜೊತೆಗೆ ತಮ್ಮ ಮಗನ ಮದುವೆಯಲ್ಲಿ ನೀತಾ ಅಂಬಾನಿ ಧರಿಸಿದ ಒಡವೆಯ ಬಗ್ಗೆ ಸದ್ಯ ಬಾರಿ ಚರ್ಚೆ ನಡೆಯುತ್ತಿದೆ.

Nita Ambani Diamond Necklace
Image Credit: Presswire18

ಮಗನ ಮದುವೆಗೆ 100 ಕ್ಯಾರೆಟ್ ಡೈಮಂಡ್ ನೆಕ್ಲೆಸ್ ಧರಿಸಿದ ನೀತಾ ಅಂಬಾನಿ
ಹೌದು, ಯಾವುದೇ ಸಣ್ಣ ಕಾರ್ಯಕ್ರಮ ನಡೆದರೂ ದುಬಾರಿ ಒಡವೆ, ದುಬಾರಿ ಸೀರೆಯಲ್ಲಿ ಮಿಂಚುವ ನೀತಾ ಅಂಬಾನಿ ಇನ್ನು ತಮ್ಮ ಮಗನ ಮದುವೆಯಲ್ಲಿ ಎಷ್ಟು ರಿಚ್ಚ್ ಆಗಿ ಕಾಣಿಸಿಕೊಂಡಿರಬಹುದು ಎನ್ನುವ ಬಗ್ಗೆ ನೀವೆಲ್ಲರೂ ಯೋಚಿಸಿರಬಹುದು. ಮಗನ ಮದುವೆಗೆ ಸಂಬಂಧಿಸಿದ ಪ್ರತಿ ಕಾರ್ಯಕ್ರಮದಲ್ಲೂ ಅಂಬಾನಿ ಕುಟುಂಬದ ಪ್ರತಿಯೊಬ್ಬರೂ ಕೂಡ ದುಬಾರಿ ವಸ್ತ್ರಾಭರಣದಲ್ಲಿ ಮಿಂಚಿದ್ದಾರೆ.

ಸದ್ಯ ಮಗನ ಮದುವೆಗೆ ನೀತಾ ಅಂಬಾನಿ 100 ಕ್ಯಾರೆಟ್ ಡೈಮಂಡ್ ನೆಕ್ಲೆಸ್ ಕೂಡ ಧರಿಸಿದ್ದರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಸದ್ಯ ನೀತಾ ಅಂಬಾನಿ ಧರಿಸಿರುವ ನೆಕ್ಲೆಸ್ ಫೋಟೋಗಳು ಬಾರಿ ವೈರಲ್ ಆಗಿದ್ದು, ನೆಕ್ಲೆಸ್ ಬೆಲೆ ಎಷ್ಟಿರಬಹುದು ಎನ್ನುವ ಬಗ್ಗೆ ಪ್ರಶ್ನೆ ಕೇಳಿಬರುತ್ತಿದೆ. ಈ ನೆಕ್ಲೆಸ್ ನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Nita Ambani Expensive Diamond Necklace
Image Credit: Hauterrfly

ನೀತಾ ಅಂಬಾನಿ ಧರಿಸಿದ ಡೈಮಂಡ್ ನೆಕ್ಲೆಸ್ ಬೆಲೆ ಎಷ್ಟಿದೆ ಗೊತ್ತಾ…?
ಅನಂತ್ ಅಂಬಾನಿ ಮದುವೆಗೆ ನೀತಾ ಅಂಬಾನಿ 100 ಕ್ಯಾರೆಟ್ ಹಳದಿ ಡೈಮಂಡ್ ನೆಕ್ಲೇಸ್ ಧರಿಸಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಮುಂಬೈನ ಕುಶಲಕರ್ಮಿಗಳ ಜ್ಯುವೆಲರ್‌ ಗಳ ಗುಂಪೊಂದು ರಚಿಸಿದ ಕಾಂದಿಲಾಲ್ ಚೋಟಾಲಾಲ್ ಇದನ್ನು ರಚಿಸಲು 1000 ಗಂಟೆಗಳನ್ನು ತೆಗೆದುಕೊಂಡರು. ಕಾಂದಿಲಾಲ್ ಚೋಟಾಲಾಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

Join Nadunudi News WhatsApp Group

ಈ ನೆಕ್ಲೇಸ್‌ನ ಪ್ರಮುಖ ಅಂಶವೆಂದರೆ 100 ಕ್ಯಾರೆಟ್ ಹಳದಿ ವಜ್ರದ ಸುತ್ತಲಿನ ಸಂಕೀರ್ಣ ವಿನ್ಯಾಸಗಳು, ನಂತರ ಅದನ್ನು 80 ಕ್ಯಾರೆಟ್ ಪಚ್ಚೆ ಕಟ್ ಸಾಲಿಟೇರ್ ಡ್ರಾಪ್‌ ನೊಂದಿಗೆ ಜೋಡಿಸಲಾಗಿದೆ, ಇದನ್ನು ಐದು ಸಾಲುಗಳ ಅದ್ಭುತ ಸಾಲಿಟೇರ್‌ ಗಳಲ್ಲಿ ರಚಿಸಲಾಗಿದೆ. ನೀತಾ ಅಂಬಾನಿಯವರ ಸೌಂದರ್ಯವನ್ನು ಈ ಹಳದಿ ವಜ್ರದಿಂದ ಹೊದಿಸಿದ ನೆಕ್ಲೇಸ್ ಹೆಚ್ಚಿಸಿದೆ. ಪೂರ್ಣ ಡೈಮಂಡ್ ಸ್ಟಡ್‌ಗಳು, ಸಾಲಿಟೇರ್ ಹೇರ್‌ಪಿನ್‌ಗಳು (ಮತ್ತಲ್) ಮತ್ತು ನೇತಿ ಚುಟಿಯೊಂದಿಗೆ ಜೋಡಿಸಲಾಗಿದೆ. ಇನ್ನು ನೀತಾ ಅಂಬಾನಿ ಧರಿಸಿದ ಈ ನೆಕ್ಲೆಸ್ ಬೆಲೆ ಬರೋಬ್ಬರಿ 400 ರಿಂದ 500 ಕೋಟಿ ಎನ್ನಲಾಗುತ್ತಿದೆ.

Nita Ambani Expensive Diamond Necklace Price
Image Credit: NPR

Join Nadunudi News WhatsApp Group