Nita Ambani: ನೀತಾ ಅಂಬಾನಿ ಧರಿಸುವ ವಾಚ್ ಬೆಲೆ ಎಷ್ಟು ಗೊತ್ತಾ…? ದುಬಾರಿ ಜೀವನ ನಡೆಸುವ ಅಂಬಾನಿ ಪತ್ನಿ.

ದುಬಾರಿ ಬೆಲೆಯ ವಾಚ್ ಧರಿಸಿದ Nita Ambani.

Nita Ambani Jacob and Co Astronomia Fleurs de Jardin Watch Price: ಮುಕೇಶ್ ಅಂಬಾನಿ (Mukesh Ambani) ದೇಶದ ಶ್ರೀಮಂತ ವ್ಯಕ್ತಿ. ಅಂಬಾನಿ ಹಾಗು ಅಂಬಾನಿಯ ಇಡೀ ಕುಟುಂಬದವರು ಐಷಾರಾಮಿ ಜೀವನಕ್ಕೆ ಹೆಸರುವಾಸಿ ಆಗಿದ್ದಾರೆ.

Mukesh Ambani ಅವರು ಆಗಾಗ ತಮ್ಮ ವ್ಯವಹಾರ ಹಾಗೂ ಐಷಾರಾಮಿ ಜೀವನದ ವಿಷಯವಾಗಿ ಸುದ್ದಿಯಾಗುತ್ತಾರೆ. ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇರುವ ಇನ್ನೊಬ್ಬ ವ್ಯಕ್ತಿ ಅಂದರೆ ಅದು ಮುಕೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ. Nita Ambani ಅವರು ತಮ್ಮ ಐಷಾರಾಮಿ ಜೀವನ ಶೈಲಿಯಿಂದ ಆಗಾಗ ಸುದ್ದಿಯಲ್ಲಿರುತ್ತಾರೆ.

Mukesh Ambani And Nita Ambani
Image Credit: India Today

ದುಬಾರಿ ಜೀವನ ನಡೆಯುವ ಅಂಬಾನಿ ಪತ್ನಿ
Nita Ambani ಅವರಿಗೆ ಅತಿ ದುಬಾರಿ ಹಾಗೂ ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ಅಭ್ಯಾಸವಿದೆ. ನೀತಾ ಅಂಬಾನಿ ಅವರು ಅತಿ ದುಬಾರಿ ಬೆಲೆಯ ಬಟ್ಟೆಗಳು, ಬ್ಯಾಗ್‌, ಸ್ಲಿಪ್ಪರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಹೊಂದಿದ್ದಾರೆ. ಇದೀಗ ನೀತಾ ಅಂಬಾನಿ ಅವರು ಪಾರ್ಟಿಯೊಂದರಲ್ಲಿ ಧರಿಸಿದ ವಾಚ್ ಎಲ್ಲರ ಗಮನ ಸೆಳೆದಿದೆ. ಹಾಗೆ ಈ ವಾಚ್ ನ ಬೆಲೆ ಕೇಳಿದರೆ ನೀವು ಒಂದು ಕ್ಷಣ ದಂಗಾಗುದು ಖಚಿತ.

ದುಬಾರಿ ಬೆಲೆಯ ವಾಚ್ ಧರಿಸಿದ Nita Ambani
ಇತ್ತೀಚೆಗೆ ನೀತಾ ಅಂಬಾನಿಯವರು ತಮ್ಮ ಮಗಳು ಇಶಾ ಅಂಬಾನಿ ಅವರ ಮಕ್ಕಳ ಹುಟ್ಟು ಹಬ್ಬದಲ್ಲಿ Jacob and Co Astronomia Fleurs de Jardin Watch ಅನ್ನು ಧರಿಸಿದ್ದಾರೆ. ನೀತಾ ಅಂಬಾನಿ ಧರಿಸಿದ್ದ ಈ ವಿಶಿಷ್ಟವಾದ ವಾಚ್‌ ನ ಬೆಲೆ ಬರೋಬ್ಬರಿ 3 ಕೋಟಿ ರೂಪಾಯಿ ಆಗಿದೆ.

Nita Ambani Watch price
Image Credit: Luxurylaunches

Jacob and Co Astronomia Fleurs de Jardin Watch Features
ನೀತಾ ಅಂಬಾನಿಯವರು ಧರಿಸಿದ್ದ ವಾಚ್‌ ನ ವಿನ್ಯಾಸ ಬಹಳ ಆಕರ್ಷಣೀಯವಾಗಿದೆ. ಇದು 18k ಚಿನ್ನದ ಕೇಸ್‌ ಹೊಂದಿದೆ. ಹಸಿರು, ನೀಲಿ, ಕೆಂಪು, ಹಳದಿ, ಗುಲಾಬಿ ಬಣ್ಣಗಳನ್ನು ಒಳಗೊಂಡಿರುವ ಈ ವಾಚ್‌ ರೋಮನ್‌ ಅಂಕಿಗಳಲ್ಲಿ ಸಮಯವನ್ನು ಪ್ರದರ್ಶಿಸುತ್ತದೆ. ವಾಚ್‌ ನ ಸುತ್ತಲು ಎರಡು ರಿಂಗ್‌ ಗಳ ವಿನ್ಯಾಸವಿದೆ. ಹಾಗೆ ವಾಚ್ ನ ಒಳಗೆ ಚಿಟ್ಟೆಯಾಕಾರದ ಹಾಗೂ ನಕ್ಷತ್ರಾಕಾರದ ವಿನ್ಯಾಸವಿದೆ.

Join Nadunudi News WhatsApp Group

ಪತ್ನಿಗೆ ಅತ್ಯಂತ ದುಬಾರಿ ಬೆಲೆಯ ಕಾರ್ ನೀಡಿದ ಅಂಬಾನಿ
ಮುಕೇಶ್ ಅಂಬಾನಿ ಅವರು ತಮ್ಮ ಪ್ರೀತಿಯ ಪತ್ನಿಗೆ ದುಬಾರಿ ಕಾರ್ ಉಡುಗೊರೆಯಾಗಿ ನೀಡಿದ್ದಾರೆ. ನೀತಾ ಅಂಬಾನಿ ಅವರಿಗೆ ಮುಕೇಶ್ ಅಂಬಾನಿ ನೀಡಿರುವುದು Rolls Royce Cullinan Black Badge SUV ಆಗಿದೆ. ಈ ನೂತನ Rolls Royce Cullinan Black Badge SUV ಮಾರುಕಟ್ಟೆಯಲ್ಲಿ ಬರೋಬ್ಬರಿ 10 ಕೋಟಿ ಬೆಲೆಯದ್ದಾಗಿದೆ. ಇದು ಭಾರತದ ಅತ್ಯಂತ ದುಬಾರಿ ಕಾರ್ ಆಗಿದೆ.

Join Nadunudi News WhatsApp Group