ಚಿಕ್ಕವಳಿದ್ದಾಗ ನಿವೇದಿತಾ ಗೌಡ ಮಾಡಿರುವ ಡ್ಯಾನ್ಸ್ ವೈರಲ್, ಕಣ್ತುಂಬಿಕೊಂಡ ಅಭಿಮಾನಿಗಳು

ನಿವೇದಿತಾ ಗೌಡ, ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಪ್ರಸಿದ್ಧ ಹಾಗೂ ಹೆಚ್ಚು ಟ್ರೋಲ್​ ಆಗುವ ಸೆಲೆಬ್ರಿಟಿಗಳಲ್ಲಿ ಒಬ್ಬರು ಎಂದರೆ ತಪ್ಪಾಗಲ್ಲ. ಯಾವಾಗಲೂ ಒಂದೆಲ್ಲ ಒಂದು ವಿಚಾರವಾಗಿ ಅವರು ಟ್ರೆಂಡ್​ನಲ್ಲಿರುತ್ತಾರೆ. ರಿಯಾಲಿಟಿ ಶೋ ಇರಲಿ ಅಥವಾ ರೀಲ್ಸ್ ಇರಲಿ ನಿವೇದಿತಾ ಮಾಡದ ಅವತಾರಗಳಿಲ್ಲ. ಹಾಗೆಯೇ ನಿವೇದಿತಾ ಅವರ ರೀಲ್ಸ್ ಟ್ರೋಲ್ ಆಗುವುದರ ಜೊತೆಗೆ ಜನರಿಗೆ ಇಷ್ಟವಾಗುತ್ತದೆ ಕೂಡ. ಈ ಬಾರಿ ಕೂಡ ಅವರ ರೀಲ್ ಒಂದು ಬಹಳ ವೈರಲ್ ಆಗಿದ್ದು, ಜನರಿಗೆ ಸಹ ಇಷ್ಟವಾಗಿದೆ.

ನಿವೇದಿತಾ ದಿನಕ್ಕೆ ಒಂದಾದರೂ ವೀಡಿಯೋ ಹಾಕುತ್ತಾರೆ. ಅವರ ಅಭಿಮಾನಿಗಳು ಹಾಗೂ ಜನರೂ ಕೂಡ ಅವರ ಫೋಟೋ ಹಾಗೂ ವಿಡಿಯೋಗಾಗಿ ಕಾಯುತ್ತಿರುತ್ತಾರೆ. ಹಾಗೆಯೇ ಇವರಿಗೆ ಫಾಲೋವರ್ಸ್ಗಳಿಗೇನು ಕಡಿಮೆ ಇಲ್ಲ. ಸಾಮಾಜಿಕ ಜಾಲಾತಾಣದ ಮೂಲಕ ಫೇಮ್ ಪಡೆದು ನಂತರ ಬಿಗ್ಬಾಸ್ ಸೀಸನ್ನಲ್ಲಿ ತಮ್ಮ ವಿಶಿಷ್ಟ ರೀತಿಯ ಮಾತು ಹಾಗೂ ಫ್ಯಾಷನ್ ಕಾರಣದಿಂದ ಪ್ರಸಿದ್ದರಾದವರು ಈ ಸುಂದರಿ. ಗೊಂಬೆ ಎಂದೇ ಪ್ರೀತಿಯಿಂದ ಅಭಿಮಾನಿಗಳು ಇವರನ್ನು ಕರೆಯೋದು. ಇನ್ನು ನಿವೇದಿತಾ ಗೌಡ ಏನೇ ಪೋಸ್ಟ್ ಹಾಕಿದ್ರು ಅದು ವೈರಲ್ ಆಗುತ್ತೆ.

ಕೇವಲ ಒಂದು ಅಂತಲ್ಲ ಅವರ ಬಹುತೇಕ ವೀಡಿಯೋಗಳು ವೈರಲ್ ಎನ್ನಬಹುದು. ಅವರು ಎಲ್ಲಿಗೆ ಹೋದರೂ, ಬಂದರೂ ಸಹ ರೀಲ್ಸ್ ಮಾಡುತ್ತಾರೆ. ಅವರು ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅದರಲ್ಲಿ ತಮ್ಮ ಎಲ್ಲಾ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ಒಟ್ಟಾರೆಯಾಗಿ ಅವರು ಎಲ್ಲಾ ಕಡೆ ಫೇಮಸ್​. ನಿವೇದಿತಾ ಕಿರುತೆರೆಯಲ್ಲಿ ಸಹ ಬ್ಯುಸಿ ಇರುವ ನಟಿ. ಬಿಗ್​ಬಾಸ್​ ನಂತರ ಫೇಮಸ್​ ಆದ ನಿವೇದಿತಾ, ರಾಜಾ-ರಾಣಿ ಶೋನಲ್ಲಿ ಜನರಿಗೆ ಮನರಂಜನೆ ನೀಡಿದ್ದರು. ಈಗ ಗಿಚ್ಚಗಿಲಿ ಗಿಲಿ ಶೋ ಮೂಲಕ ಕಾಮಿಡಿ ಮಾಡುತ್ತಿದ್ದು, ಅಲ್ಲೂ ಸಹ ಅವರದ್ದೇ ಹವಾ ಎನ್ನಬಹುದು.

ಒಟ್ಟಾರೆಯಾಗಿ ನಿವೇದಿತಾ ಗೌಡ, ಯಾವುದೇ ಫೋಟೋ ಹಾಗೂ ವೀಡಿಯೋ ಮಾಡಿ ಹಾಕಿದರೂ ಸಹ ಅದು ವೈರಲ್ ಆಗುತ್ತದೆ. ಇದೀಗ ಅವರು ಮಿಸೆಸ್ ಇಂಡಿಯಾ ಸ್ಪರ್ಧೆಯ ತಯಾರಿಯಲ್ಲಿ ಬ್ಯುಸಿ ಇದ್ದಾರೆ. ಆಗಾಗಾ ಅಲ್ಲಿನ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈಗ ಸಹ ಅಲ್ಲಿ ಹೇಗೆ ಕ್ಯಾಟ್ ವಾಕ್ ಪ್ರ್ಯಾಕ್ಟೀಸ್ ಮಾಡಲಾಗುತ್ತದೆ ಎಂಬುದನ್ನ ಶೇರ್ ಮಾಡಿದ್ದು, ನಿವೇದಿತಾ ಹಾಟ್ ಲುಕ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ. ವೀಡಿಯೋದಲ್ಲಿ ನಿವೇದಿತಾ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಮಿಸೆಸ್ ಇಂಡಿಯಾ ಸ್ಪೆರ್ಧೆಗೆ ಈಗ ತಮ್ಮ ತಯಾರಿ ಹೇಗಿದೆ ಎನ್ನುವ ಸಂಪೂರ್ಣ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಜಿಮ್, ಡಯಟ್, ವರ್ಕೌಟ್ ಕೂಡ ಮಾಡುತ್ತಿದ್ದಾರೆ. ಅಲ್ಲಿ ನೀಡುವ ಕೆಲವೊಂದಿಷ್ಟು ಚಾಲೆಂಜಿಂಗ್ ವಿಚಾರ ತುಂಬಾ ಕುತೂಹಲಕಾರಿಯಾಗಿವೆ. ಹೇಗೆ ಡ್ರೆಸ್ ಮಾಡಿಕೊಳ್ಳಬೇಕು, ಯಾವ ರೀತಿ ಇರಬೇಕು ಎಂಬುದನ್ನ ಕಲಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.ಇತ್ತೀಚೆಗಷ್ಟೇ ಅಪ್ಲೋಡ್ ಮಾಡಿದ ನಾಲ್ಕು ವರ್ಷದ ಹಳೆ ವೀಡಿಯೋ ಸಕತ್ ವೈರಲ್ ಆಗಿದೆ. ನಾಲ್ಕು ವರ್ಷದ ಹಿಂದೆ ನಿವೇದಿತಾ ಗೌಡ ಹೀಗಿದ್ದರೆ ಎನ್ನೊ ಪ್ರಶ್ನೆ ಎಲ್ಲರಲ್ಲೂ ಕಾಡಿದೆ.

Join Nadunudi News WhatsApp Group

ಅನುಶ್ರೀ ನಾಯಕಿ ನಟಿಯಾಗಿ ಮಿಂಚಿದ್ದ ಬೆಂಕಿಪೊಟ್ನ ಸಿನೆಮಾದ ಫೇಮಸ್ ಹಾಡು ಬೊಗಸೆಯಲ್ಲಿ ಮಳೆ ಸುರಿದಂತೆ ಹಾಡಿಗೆ ಮಕ್ಕಳಂತೆ ಹೆಜ್ಜೆ ಹಾಕಿದ್ದಾರೆ. ಮನೆಯಲ್ಲಿ ತೆಗೆದ ಈ ವೀಡಿಯೋದಲ್ಲಿ ನಿವಿ ಪ್ಯಾರೋಟ್ ಫ್ಲವರ್ ಗ್ರೀನ್ ಮತ್ತು ಕಪ್ಪು ಬಣ್ಣದ ಕ್ರಾಪ್ ಟಾಪ್ ಅನ್ನು ನಿವೇದಿತಾ ಧರಿಸಿದ್ದು ಅವರ ಮನೆಯ ಬ್ಯಾಗ್ರೌಂಡ್ ಇರುವುದನ್ನು ಕಾಣಬಹುದು. ಒಟ್ಟಾರೆಯಾಗಿ ನಿವಿಗೆ ಈ ರೀತಿ ರೀಲ್ಸ್ ಮಾಡುವುದು ಅಭಿಮಾನಿಗಳನ್ನು ಖುಷಿಪಡಿಸುವುದು ಸಾಮಾನ್ಯವಾಗಿದ್ದು ಈ ವೀಡಿಯೋ ಈಗ ಎಲ್ಲೆಡೆ ಲೈಕ್ಸ್ ಮತ್ತು ಕಮೆಂಟ್ಸ್ ಅನ್ನು ಪಡೆಯುತ್ತಲೇ ಇದೆ. ನೀವು ಈ ವೀಡಿಯೋ ನೋಡಲು ಕೆಳಗಿನ ಲಿಂಕ್ ಬಳಸಿ.

Join Nadunudi News WhatsApp Group