SRH v/s LSG: ಸೋತ ಬೆನ್ನಲ್ಲೇ KL ರಾಹುಲ್ ಜೊತೆ ಜಗಳ ಮಾಡಿದ ಲಕ್ನೋ ತಂಡದ ಮಾಲೀಕ, ವಿಡಿಯೋ ವೈರಲ್.

KL ರಾಹುಲ್ ಜೊತೆ ಜಗಳವಾಡಿದ LSK ಮಾಲೀಕ, ವಿಡಿಯೋ ವೈರಲ್

Sanjiv Goenka And KL Rahul: ಪ್ರಸ್ತುತ IPL 2024 ರ ಪಂದ್ಯಗಳು ನಡೆಯುತ್ತಿದೆ. ಈ ಪಂದ್ಯದಲ್ಲಿ ಮೇ 8 ರಂದು SRH v/s LSG ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ LSG ವಿರುದ್ಧ SRH ತಂಡ ಭರ್ಜರಿ ಜಯ ಸಾಧಿಸಿದೆ. ಇನ್ನು ಮೈದಾನದಲ್ಲಿಯೇ ಲಕ್ನೋ ತಂಡ ಸೋಲಿನ ಹತಾಶೆಯನ್ನು ಹೊರಹಾಕಿದೆ.

ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡ ಲಕ್ನೋ ಸೂಪರ್‌ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಕೋಪಗೊಂಡಿದ್ದಾರೆ. ನಾಯಕ ಕೆಎಲ್ ರಾಹುಲ್ ಜೊತೆ ಸಿಟ್ಟಿನಿಂದ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

Sanjiv Goenka And KL Rahul
Image Credit: News 18

ಸೋತ ಬೆನ್ನಲ್ಲೇ KL ರಾಹುಲ್ ಜೊತೆ ಜಗಳ ಮಾಡಿದ ಲಕ್ನೋ ತಂಡದ ಮಾಲೀಕ
ಹೈದರಾಬಾದ್‌ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ಬೌಲರ್‌ ಗಳನ್ನು ಸಂಪೂರ್ಣವಾಗಿ ದಂಡಿಸಿದ ಎಸ್‌ಆರ್‌ಎಚ್ ಕೇವಲ 9.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 167 ರನ್ ಗಳಿಸಿತು. ಈ ಗೆಲುವು ಪ್ಯಾಟ್ ಕಮಿನ್ಸ್ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆದರೆ ರಾಹುಲ್ ತಂಡದ ಪ್ಲೇ ಆಫ್ ಕನಸು ಮತ್ತಷ್ಟು ದೂರವಾಗಿದೆ. ಈ ಆಘಾತದ ನಡುವೆ ಪಂದ್ಯ ಮುಗಿದ ಬಳಿಕ ವಿಶೇಷ ಘಟನೆಯೊಂದು ನಡೆದಿದೆ.

ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೊಯೆಂಕಾ ಹೀನಾಯ ಸೋಲಿನ ನಂತರ ಬೇಸರಗೊಂಡಿದ್ದಾರೆ. ತಂಡದ ಪ್ರದರ್ಶನದಿಂದ ಅಸಮಾಧಾನಗೊಂಡಿರುವುದು ಕಂಡುಬಂದಿದೆ. ಸಂಜೀವ್ ನಾಯಕ ಕೆಎಲ್ ರಾಹುಲ್ ಜೊತೆ ಕೋಪದಿಂದ ಮಾತನಾಡುತ್ತಿರುವುದು ಕಂಡುಬಂತು. ಇಬ್ಬರ ನಡುವಿನ ಸಂಭಾಷಣೆ ಏನು ಎಂಬುದು ಸ್ಪಷ್ಟವಾಗಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಗಮನಿಸಿದ ನೆಟ್ಟಿಗರು ಇಬ್ಬರೂ ಜಗಳವಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group