ಯಾವ ನಟಿಗೂ ಕಮ್ಮಿ ಇರದ ರೀತಿ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ತಾಯಿ, ವಿಡಿಯೋ ವೈರಲ್

ಟಿಕ್ ಟಾಕ್ ನಲ್ಲಿ ಬಹಳ ಫೇಮಸ್ ಆಗಿದ್ದ ನಿವೇದಿತಾ ಗೌಡ, ಬಿಗ್ ಬಾಸ್ ನಂತರ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ವಿವಿಧ ಬಂಗಿಯಲ್ಲಿ ಫೋಟೋಶೂಟ್ ಗಳನ್ನು ಮಾಡಿಸಿ ತಮ್ಮ ಅಭಿಮಾನಿಗಳಿಗಾಗಿ ಪೋಸ್ಟ್ ಮಾಡುತ್ತಾರೆ ನಿವೇದಿತಾ ಗೌಡ. ಇದೀಗ ಇವರಂತೆ ಕಾಣುವ ಇನ್ನೋರ್ವರು ಯಾರೆಂಬ ಪ್ರಶ್ನೆಗೆ ಈಗ ತೆರೆ ಬಿದ್ದಿದೆ ಈಕೆ ಇನ್ಯಾರು ಅಲ್ಲ ನಿವೇದಿತಾ ಅವರ ತಾಯಿ ಹೇಮ. ಇವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ವ್ಯಕ್ತಿ. ಇವರಿಬ್ಬರ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಇವರು ನಿವಿ ತಾಯಿಯೇ ಅಥವಾ ಅಕ್ಕನೇ ಎಂಬ ಮಟ್ಟಿಗೆ ಫೇಮಸ್ ಆಗಿದ್ದಾರೆ.

ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬ ಮಾತಿದೆ. ಇದು ಇವರಿಬ್ಬರು ನೋಡಿ ಇಟ್ಟಿರಬೇಕು ಅನ್ನುವಷ್ಟು ತದ್ರೂಪಿ ಇವರಿದ್ದಾರೆ. ಅಮ್ಮ ಮಗಳಿಗಿಂತ ಹೆಚ್ಚಾಗಿ ಅಕ್ಕ ತಂಗಿಯಂತೆ ಕಾಣುತ್ತಾರೆ ಇವರು. ಅವರ ತಾಯಿ ಹೇಮ ಬಿಗ್ ಬಾಸ್ ಸೇರಿದಂತೆ ಇನ್ನಿತರ ಕಾರ್ಯಕ್ರಮಕ್ಕೆ ತೆರಳಿದ್ದರು ಒಂದೇ ರೂಪದ ಪಡಿಯಚ್ಚಿನಂತಿರುವ ಅಮ್ಮ-ಮಗಳು ಹಲವು ಕಾರ್ಯಕ್ರಮ ವೇದಿಕೆಗಳಲ್ಲಿಯೂ ಮೆಚ್ಚುಗೆ ಪಡೆದಿದ್ದಾರೆ. ಹೇಮಾ ರಮೇಶ್​ ಕೂಡ ಈಗ ಮಗಳ ಅಲಂಕಾರ, ಡ್ರೆಸ್ಸಿಂಗ್​ ಸ್ಟೈಲ್​ ಅನ್ನು ಕಾಪಿ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ.

ನಿವೇದಿತಾ ಗೌಡ ಹಾಗೂ ಅವರ ತಾಯಿ ಸಾಕಷ್ಟು ವಿಡಿಯೋಗಳನ್ನು ಮಾಡಿ ರೀಲ್ಗಳಲ್ಲಿ ಹರಿಬಿಡುತ್ತಾರೆ. ಇವರಿಬ್ಬರನ್ನ ನೋಡಿದ್ರೆ ಜನ ಬೆಕ್ಕಸ ಬೆರಗಾಗುತ್ತಾರೆ ಯಾಕೆಂದರೆ ಇವರಿಬ್ಬರೂ ಅಮ್ಮ ಮಗಳು ಎನ್ನುವುದಕ್ಕಿಂತ ಅಕ್ಕ ತಂಗಿ ಎನ್ನುವಂತೆ ಕಾಣಿಸುತ್ತಾರೆ. ನಿವೇದಿತಾ ಗೌಡ ತಾಯಿ ಹೇಮಾ ರಮೇಶ್​ ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಮೂಲಕ ತಾಯಿ ಮತ್ತು ಮಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಮೂಲಕ ಮಗಳೊಂದಿಗೆ ಹೇಮ ಅವರು ಮಾರೆ ಟಂ ಟಂ, ನ್ಯಾನ್ಸಿ ನ್ಯಾನ್ಸಿ ಗೆಟ್ ದೊ, ಆಯ್ ಮೇರಿ ಪರಮಸುಂದರಿ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಅದರಲ್ಲೂ ಪರಮಸುಂದರಿ ಹಾಡಿಗೆ ಇಬ್ಬರ ನೃತ್ಯ ಮನಮೆಚ್ಚುವಂತಹದ್ದು ಎನ್ನಬಹುದು. ಈ ಮೂಲಕ ಹೇಮಾ ಅವರು ಕಪ್ಪು ಬಣ್ಣದ ಝಿಬ್ರಾ ವಿನ್ಯಾಸದ ಬಟ್ಟೆ ಧರಿಸಿದ್ದರೆ ನಿವೇದಿತಾ ಅವರು ಪ್ಯಾರೋಟ್ ಹಸಿರು ಬಟ್ಟೆಯಲ್ಲಿ ಮಿಂಚಿದ್ದಾರೆ. ಈ‌ಮೂಲಕ ಯಾರು ಮಗಳು ಯಾರು ಅಮ್ಮ ಎಂಬ ವ್ಯತ್ಯಾಸ ಗುರುತಿಸುವುದು ಕಷ್ಟ ಎಂಬಂತಿದೆ. ಹೇಗಿದೆ ಅಮ್ಮ ಮಗಳ ಡ್ಯಾನ್ಸ್ ಎಂದು ಕ್ಯಾಪ್ಶನ್ ಕೂಡ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Join Nadunudi News WhatsApp Group

Join Nadunudi News WhatsApp Group