NPCI Link: ಈ ಒಂದು ಕಾರಣಕ್ಕೆ ಈ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಗೃಹಲಕ್ಷ್ಮಿ 6 ಮತ್ತು 7 ನೇ ಕಂತಿನ ಹಣ.

ಗೃಹಲಕ್ಷ್ಮಿ 6 ಮತ್ತು 7 ನೇ ಕಂತಿನ ಹಣ ಜಮಾ ಆಗಬೇಕಿದ್ದರೆ ತಕ್ಷಣ ಈ ಕೆಲಸ ಮಾಡಿ.

NPCI Link Mandatory For Gruha Lakshmi Scheme: ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ 1.10 ಕೋಟಿ ಅರ್ಹ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಕೇವಲ 90% ಅರ್ಹರಿಗೆ ಹಣ ಜಮಾ ಆಗಿದೆ ಎನ್ನಬಹುದು. ಇನ್ನುಳಿದ 10% ಮಹಿಳೆಯರು ಇನ್ನು ಕೂಡ ಒಂದು ಕಂತಿನ ಹಣ ಖಾತೆಗೆ ಜಮಾ ಆಗಿಲ್ಲ. ಎಲ್ಲ ಅರ್ಹರ ಖಾತೆಗೆ ಹಣ ಜಮಾ ಮಾಡುವ ಕಾರ್ಯದಲ್ಲಿ ಸರ್ಕಾರ ಹೊಸ ಹೊಸ ಕ್ರಮ ಕೈಗೊಳ್ಳುತ್ತಿದೆ.

ಸದ್ಯ ರಾಜ್ಯ ಸರ್ಕಾರ 6 ಮತ್ತು 7 ನೇ ಕಂತಿನ ಹಣ ಬಿಡುಗಡೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಅರ್ಹರು ಮುಂದಿನ ಕಂತುಗಳ ಹಣವನ್ನು ಯಾವುದೇ ತೊಂದರೆಯಿಲ್ಲದೆ ಪಡೆಯಬೇಕಿದ್ದರೆ ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವುದು ಬಾಕಿ ಇದೆ. 6 ಮತ್ತು 7 ನೇ ಕಂತಿನ ಹಣ ಬಿಡುಗಡೆಯಾದರೂ ಕೂಡ ಈ ಒಂದು ಕಾರಣಕ್ಕಾಗಿ ಯೋಜನೆಯ ಹಣ ಅರ್ಹರ ಖಾತೆಗೆ ತಲುಪುತ್ತಿಲ್ಲ ಎನ್ನಬಹುದು.

NPCI Link Mandatory For Gruha Lakshmi Scheme
Image Credit: News Guru Kannada

ಈ ಒಂದು ಕಾರಣಕ್ಕೆ ಈ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಗೃಹಲಕ್ಷ್ಮಿ 6 ಮತ್ತು 7 ನೇ ಕಂತಿನ ಹಣ
ಗೃಹ ಲಕ್ಷ್ಮಿ ಯೋಜನೆಯಡಿ ಹಣ ಜಮಾ ಆಗದೆ ಇದ್ದರೆ, ಮೊದಲು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಎಲ್ಲವನ್ನು ಕೊಟ್ಟು ನಿಮ್ಮ ಖಾತೆಗೆ ಹಣ ಯಾಕೆ ಬಂದಿಲ್ಲ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಮುಖ್ಯವಾಗಿ ಗೃಹ ಲಕ್ಷ್ಮಿ ಅರ್ಜಿದಾರರು KYC , Aadhar Link  ಹಾಗೂ NPCI Link ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ಬ್ಯಾಂಕ್ ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ.

KYC Update ಹಾಗೂ ಆಧಾರ್ ಲಿಂಕ್ ಈಗಾಗಲೇ ಎಲ್ಲ ಅರ್ಹ ಫಲಾನುಭವಿಗಳು ಪೂರ್ಣಗೊಳಿಸಿಕೊಂಡಿದ್ದಾರೆ. ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ 6 ಮತ್ತು 7 ನೇ ಕಂತಿನ ಹಣ ಜಮಾ ಆಗದಿರಲು ಮುಖ್ಯ ಕಾರಣವೆಂದರೆ NPCI Link ಆಗದೆ ಇರುವುದು. ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಇಂದೇ NPCI Link ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ನೀವು NPCI Link ಮಾಡದೆ ಇದ್ದರೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಯಾವುದೇ ಕಂತಿನ ಹಣ ನಿಮ್ಮ ಖಾತೆಗೆ ತಲುಪುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.

NPCI Link Mandatory
Image Credit: Paytm

ಹಣ ಜಮಾ ಆಗಿದೆಯೇ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ
•ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಲು ಮೊದಲು DBT Karnataka App ಅನ್ನು Download ಮಾಡಿಕೊಳ್ಳಬೇಕು.

Join Nadunudi News WhatsApp Group

•ಅಪ್ಲಿಕೇಶನ್ Download ಮಾಡಿದ ನಂತರ, ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಯ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಈ ಅಪ್ಲಿಕೇಶನ್‌ ಗೆ ಹಾಕಿ Login ಮಾಡಲು 4-ಅಂಕಿಯ Password ರಚಿಸಿ ಮತ್ತು ಲಾಗಿನ್ ಬಟನ್ ಕ್ಲಿಕ್ ಮಾಡಿ.

•ಲಾಗಿನ್ ಆದ ನಂತರ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು “ಗೃಹ ಲಕ್ಷ್ಮಿ” ಹೆಸರಿನ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಫೆಬ್ರವರಿ-2024 ರ ಗೃಹಲಕ್ಷ್ಮಿ ಹಣವು ಯಾವ ದಿನದಂದು ನಿಮಗೆ ಜಮಾ ಆಗಿದೆ ಹಾಗೆಯೆ UTR ಸಂಖ್ಯೆ ಇತರ ಸಂಪೂರ್ಣ ವಿವರಗಳನ್ನು ತೋರಿಸುತ್ತದೆ.

Join Nadunudi News WhatsApp Group