Odysse Electric: ಈಗ ಫ್ಲಿಪ್ಕಾರ್ಟ್ ನಲ್ಲೂ ಖರೀದಿ ಮಾಡಬಹುದು ಸ್ಕೂಟರ್, ಶೋ ರೂಮ್ ಗಿಂತ ಕಡಿಮೆ ಬೆಲೆಗೆ.

ಒಡಿಸ್ಸೆ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಫ್ಲಿಪ್ ಕಾರ್ಟ್ ನಲ್ಲಿ ಬಂಪರ್ ರಿಯಾಯಿತಿ.

Odysse Electric Scooter Flipkart Offer: ಮಾರುಕಟ್ಟೆಯಲ್ಲಿ ದಿನೇ ದಿನೇ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಪೆಟ್ರೋಲ್ ಡೀಸೆಲ್ ಗಳ ಬೆಲೆ ಏರಿಕೆಯಿಂದಾಗಿ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಫ್ಲಿಪ್ ಕಾರ್ಟ್ ನಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಬಂಪರ್ ರಿಯಾಯಿತಿಗಳು ಘೋಷಣೆ ಆಗುತ್ತಿದೆ. 

ಇದೀಗ ಒಡಿಸ್ಸೆ ಎಲೆಕ್ಟ್ರಿಕ್ ಕಂಪನಿ ತನ್ನ ಇವಿ ವಾಹನಗಳನ್ನು ಫ್ಲಿಪ್ ಕಾರ್ಟ್ ನಲ್ಲಿ ಬಂಪರ್ ರಿಯಾಯಿತಿಯಲ್ಲಿ ಘೋಷಣೆ ಮಾಡಿದೆ. ಈ ಕಂಪನಿಯು ವಾಡಾರ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್, ಹಕ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್, ರೆಸಾರ್ ಲೈಟ್ ವಿ 2 ಎಲೆಕ್ಟ್ರಿಕ್ ಸ್ಕೂಟರ್ ಗಳು ಇವೋಕಿಸ್ ಇ ಬೈಕ್ ಅನ್ನು ಮಾರಾಟ ಮಾಡುತ್ತಿದೆ.

Odysse Electric Scooter Flipkart Offer
Image Credit: Bikewale

ಒಡಿಸ್ಸೆ ಮೋಟಾರ್ ಸೈಕಲ್ ವಾಡೆರ್ ಎಲೆಕ್ಟ್ರಿಕ್ ಸ್ಕೂಟರ್
ಒಡಿಸ್ಸೆ ಕಂಪನಿಯ ಈ ಎಲ್ಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಂಪರ್ ರಿಯಾಯಿತಿಯಲ್ಲಿ ಖರೀದಿ ಮಾಡಬಹುದು. ಒಡಿಸ್ಸೆ ಕಂಪನಿಯು ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ವಾಡೆರ್ ಅನ್ನು ಇದೆ ವರ್ಷದ ಮಾರ್ಚ್ ನಲ್ಲಿ 1,09,999 ರೂಪಾಯಿಗೆ ಬಿಡುಗಡೆ ಮಾಡಿತ್ತು. ಈ ಸ್ಕೂಟರ್ 3 .7 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಬೈಕ್ ಇಕೋ, ಡ್ರೈವ್ ಹಾಗು ಸ್ಪೋರ್ಟ್ಸ್ ಎಂಬ ಮೂರೂ ರೈಡಿಂಗ್ ಮೋಡ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜ್ ನಲ್ಲಿ 125 km ರೇಂಜ್ ನೀಡಲಿದೆ. ಇದರ ಬ್ಯಾಟರಿ ಪ್ಯಾಕ್ 0 -100 % ಚಾರ್ಜ್ ಆಗಲು 4 ಗಂಟೆ ಬೇಕು.

Odysse Electric Scooter Flipkart Offer
Image Credit: Bikes4sale

ಒಡಿಸ್ಸೆ ಹಾಕ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್
ಒಡಿಸ್ಸೆ ಕಂಪನಿಯ ಹಾಕ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ 1 .18 ಲಕ್ಷ ಆಗಿದೆ. ಈ ಸ್ಕೂಟರ್ ನಲ್ಲಿ 2 .96 KW ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದೆ. ಇದು ಸಂಪೂರ್ಣ ಚಾರ್ಜ್ ನಲ್ಲಿ 170 KM ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Join Nadunudi News WhatsApp Group

Odysse Electric Scooter Flipkart Offer
Image Credit: Navbharattimes

ಒಡಿಸ್ಸೆ ಲೈಟ್ ವಿ 2 ಎಲೆಕ್ಟ್ರಿಕ್  ಸ್ಕೂಟರ್
ರೇಸರ್ ಲೈಟ್ ವಿ 2 ಸ್ಕೂಟರ್ ನ ಬೆಲೆ 77250 ರೂಪಾಯಿ ಆಗಿದೆ. ಈ ಸ್ಕೂಟರ್ 1.3 kw ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ. ಈ ಸ್ಕೂಟರ್ ಫುಲ್ ಚಾರ್ಜ್ ನಲ್ಲಿ 75 km ರೇಂಜ್ ನೀಡುತ್ತದೆ. ಇದರ ಬ್ಯಾಟರಿ ಕೇವಲ 3 .5 ಗಂಟೆಯಲ್ಲಿ ಫುಲ್ ಚಾರ್ಜ್ ಆಗುತ್ತದೆ.

Join Nadunudi News WhatsApp Group