Om Prakash Rao: ದರ್ಶನ್‌ ಜೊತೆ ಈ ಸ್ಟಾರ್‌ ನಟಿಗೂ ಇತ್ತಾ ಸಂಬಂಧ…? ದರ್ಶನ್ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ಓಂ ಪ್ರಕಾಶ್.

ದರ್ಶನ್‌ ಜೊತೆ ಈ ಸ್ಟಾರ್‌ ನಟಿಗೂ ಇತ್ತಾ ಸಂಬಂಧ...?

Om Prakash Rao About Darshan And Nikita Thukral Relationship:  ಸದ್ಯ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಜೈಲಿನಲ್ಲಿ ಕಂಬಿ ಹಿಂದಿದ್ದಾರೆ. ನಟ Darshan ಬಂಧನ ಇಡೀ ರಾಜ್ಯಕ್ಕೆ ಶಾಕ್ ನೀಡಿದೆ. ಹೆಸರಾಂತ ನಟ ಹೀಗೆ ಕೃತ್ಯ ಎಸಗಿ ಜೈಲು ಪಾಲಾಗಿರುವ ಬಗ್ಗೆ ಸಾಕಷ್ಟು ವಿರೋಧ ಹಾಗೂ ಟೀಕೆ ವ್ಯಕ್ತವಾಗುತ್ತಿದೆ. ಇನ್ನು ನಟ ದರ್ಶನ್ ಬಗ್ಗೆ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ದ್ವನಿಯೆತ್ತುತ್ತಿದ್ದರೆ. ಹಾಗೆಯೆ ದರ್ಶನ್ ಬಗ್ಗೆ ಪಾಸಿಟಿವ್ ನೆಗೆಟಿವ್ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ನಿರ್ಮಾಪಕರಾದ Om Prakash Rao ಅವರ ಬಗ್ಗೆ ನಿಮಗೆ ತಿಳಿದಿರಬಹುದು.

ದರ್ಶನ್ ಮತ್ತು ಓಂಪ್ರಕಾಶ್ ರಾವ್ 2004 ರಿಂದ 2011 ರ ವರೆಗೆ ಸ್ನೇಹಿತರಾಗಿದ್ದರು. ದರ್ಶನ್ ಅಭಿನಯದ ಕಲಾಸಿಪಾಳ್ಯ, ಅಣ್ಣಾವ್ರು, ಅಯ್ಯ, ಮಂಡ್ಯ, ಯೋಧ ಮತ್ತು ರಾಜಕುಮಾರ ಮುಂತಾದ ಹಲವು ಚಿತ್ರಗಳನ್ನು ಓಂಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ. ಓಂಪ್ರಕಾಶ್ ರಾವ್ ನಿರ್ದೇಶನದ ಯೋಧ ಮತ್ತು ರಾಜಕುಮಾರ ಚಿತ್ರದಲ್ಲಿ ದರ್ಶನ್ ಜೊತೆಗೆ ನಟಿ Nikita Thukral ನಟಿಸಿದ್ದಾರೆ. ಸದ್ಯ ದರ್ಶನ ಜೈಲು ಸೇರಿದ ಬೆನ್ನಲ್ಲೇ ಓಂ ಪ್ರಕಾಶ್ ರಾವ್ ನಿಖಿತಾ-ದರ್ಶನ್ ಬಗ್ಗೆ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

Om Prakash Rao About Darshan
Image Credit: Times Now News

ದರ್ಶನ್‌ ಜೊತೆ ಈ ಸ್ಟಾರ್‌ ನಟಿಗೂ ಇತ್ತಾ ಸಂಬಂಧ…?
ದರ್ಶನ್ ಬಂಧನದ ಬಗ್ಗೆ ಮಾತನಾಡಿದ ನಿರ್ದೇಶಕ ಓಂಪ್ರಕಾಶ್ ರಾವ್, ಇಂತಹ ಕೃತ್ಯ ನಡೆಯಬಾರದಿತ್ತು. ದರ್ಶನ್ ತುಂಬಾ ಒಳ್ಳೆಯ ವ್ಯಕ್ತಿ. ಅವರೊಬ್ಬ ಜಂಟಲ್ ಮ್ಯಾನ್. ಯಾವ ವಿಚಾರವನ್ನೂ ಅಷ್ಟು ಬೇಗ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ನಾನು ದರ್ಶನ್ ಜೊತೆ ತುಂಬಾ ಆತ್ಮೀಯನಾಗಿದ್ದೆ. ದರ್ಶನ್ ಏಕ್ ಮಾರ್ ದೋ ತುಕುಡ ಅನ್ನೋ ಕ್ಯಾರೆಕ್ಟರ್. ದರ್ಶನ್ ಜೊತೆಗಿನ ನನ್ನ ಸ್ನೇಹ 2011ರಲ್ಲಿ ಕೊನೆಗೊಂಡಿತು. ದರ್ಶನ್ ನನ್ನ ಜೊತೆಯಲ್ಲಿದ್ದಾಗ ಹೆಚ್ಚು ಕುಡಿಯುತ್ತಿರಲಿಲ್ಲ. ದರ್ಶನ್ ಜೊತೆ ಎರಡು ಮೂರು ಬಾರಿ ಕುಡಿದಿದ್ದೇನೆ ಅಷ್ಟೇ. ದರ್ಶನ್ ಅವರನ್ನು ಸುತ್ತಮುತ್ತಲಿನವರು ತಿದ್ದಬಹುದಿತ್ತು. ನಾನಿದ್ದರೆ ಇಂದು ದರ್ಶನ್ ಗೆ ಈ ಸ್ಥಿತಿ ಬರುತ್ತಿರಲಿಲ್ಲ.

ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಬಿಚ್ಚಿಟ್ರು ಆ ಗುಟ್ಟು !
ದರ್ಶನ್ ಮತ್ತು ನಾನು ಆತ್ಮೀಯರಾಗಿದ್ದೆವು. ನಟಿ ನಿಖಿತಾ ದರ್ಶನ್ ಜೊತೆ ಉತ್ತಮ ಸ್ನೇಹ ಹೊಂದಿದ್ದರು. ನಾನು ಇದನ್ನು ಹಲವು ಬಾರಿ ವಿರೋಧಿಸಿದ್ದೇನೆ. ಈ ವಿಚಾರದಲ್ಲಿ ಬುದ್ದಿ ಹೇಳಿದ್ದೇನೆ. ಆದರೆ ಅವರು ದರ್ಶನ್ ಬಳಿ ಹೋಗಿ ನನ್ನ ಮೇಲೆ ದೂರು ನೀಡಿದ್ದಾರೆ. ಆ ನಂತರ ನನ್ನ ದರ್ಶನ್ ನಡುವೆ ಸ್ನೇಹ ಹಾಳಾಯಿತು. ಈ ವಿಚಾರದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆಗ ಇಡೀ ಚಿತ್ರರಂಗವೇ ನಿಖಿತಾ-ದರ್ಶನ್ ಬಗ್ಗೆ ಮಾತನಾಡುತ್ತಿತ್ತು ಎಂದಿದ್ದಾರೆ ನಿರ್ಮಾಪಕ ಓಂ ಪ್ರಕಾಶ್ ರಾವ್.

Om Prakash Rao About Darshan And Nikita Thukral Relationship
Image Credit: Zee News

Join Nadunudi News WhatsApp Group

Join Nadunudi News WhatsApp Group