Sim Card: ಒಂದು ಆಧಾರ್ ಕಾರ್ಡಿನಿಂದ ಎಷ್ಟು ಸಿಮ್ ಕಾರ್ಡ್ ಖರೀದಿ ಮಾಡಬಹುದು, ಕೇಂದ್ರದ ಷರತ್ತುಗಳು.

Sim Card: ಆಧಾರ್ ಕಾರ್ಡ್ (Aadhar Card) ಸದ್ಯ ದೇಶದ ಪ್ರತಿಯೊಬ್ಬ ಜನರು ಬಳಸುತ್ತಿರುವ ಒಂದು ಗುರುತಿಯ ಚೀಟಿಯಾಗಿದೆ (Identity Card). ಆಧಾರ್ ಕಾರ್ಡ್ ಇಲ್ಲದ ಭಾರತದ ಪ್ರಜೆಯನ್ನ ಹುಡುಕುವುದು ಬಹಳ ಕಷ್ಟವಾಗಿದೆ. ಸದ್ಯ ದೇಶದಲ್ಲಿ ಈಗ ಹುಟ್ಟಿದ ಮಗುವಿಗೂ ಕೂಡ ಆಧಾರ್ ನೀಡಲಾಗುತ್ತಿದ್ದು ದೇಶದಲ್ಲಿ ಬಹುತೇಕ ಎಲ್ಲಾ ಕೆಲಸಗಳಿಗೆ ಆಧಾರ್ ಕಾರ್ಡ್ ಬಹಳ ಅವಶ್ಯಕ ಎಂದು ಹೇಳಿದರೆ ತಪ್ಪಾಗಲ್ಲ.

ಸದ್ಯ ಆಧಾರ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳು ಜಾರಿಯಲ್ಲಿ ಇದ್ದು ಜನರು ಆ ನಿಯಮಗಳ ಬಗ್ಗೆ ಗಮನ ಇಲ್ಲದೆ ಅಪಾಯಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಸಿಮ್ ಕಾರ್ಡ್ (Sim Card) ತೆಗೆದುಕೊಳ್ಳಲು ಆಧಾರ್ ಕಾರ್ಡ್ ಬಹಳ ಅವಶ್ಯಕವಾಗಿದೆ ಮತ್ತು ಆಧಾರ್ ಕಾರ್ಡ್ ನಂಬರ್ ಇಲ್ಲದೆ ಸಿಮ್ ಕಾರ್ಡ್ ಖರೀದಿ ಮಾಡಲು ಸಾಧ್ಯವಿಲ್ಲ.

ಅದೇ ರೀತಿಯಲ್ಲಿ ಜನರು ಜನರು ಒಂದು ಕಾರ್ಡ್ ನಲ್ಲಿ ಎಷ್ಟು ಸಿಮ್ ಖರೀದಿ ಮಾಡಬಹುದು ಅನ್ನುವುದರ ಬಗ್ಗೆ ಗಮನವನ್ನ ಇಟ್ಟುಕೊಳ್ಳುವುದು ಅತ್ಯವಶ್ಯಕವಾಗಿದೆ.

One Aadhaar card can buy 18 SIMs
Image Credit: moneycontrol

ಸಿಮ್ ಕಾರ್ಡ್ ಖರೀದಿ ಮಾಡಲು ಆಧಾರ್ ಕಾರ್ಡ್ ಅವಶ್ಯಕ
ಕೆಲವು ವರ್ಷಗಳ ಹಿಂದೆ ರೇಷನ್ ಕಾರ್ಡ್ (Ration Card) ಮತ್ತು ಒಂದು ಫೋಟೋ ನೀಡುವುದರ ಮೂಲಕ ಆಧಾರ್ ಕಾರ್ಡ್ ಖರೀದಿ ಮಾಡಬಹುದಿತ್ತು, ಆದರೆ ಈಗ ಸುರಕ್ಷತೆಯ ಉದ್ದೇಶದಿಂದ ಕೆಲವು ನಿಯಮಗಳನ್ನ ಜಾರಿಗೆ ತರಲಗಿದೆ.

ಸದ್ಯದ ದಿನಗಳಲ್ಲಿ ಆಧಾರ್ ಮೂಲಕ ಸಿಮ್ ಖರೀದಿ ಮಾಡಬೇಕು. ಸಿಮ್ ಖರೀದಿ ಮಾಡುವ ಸಮಯದಲ್ಲಿ ಆಧಾರ್ ಕಾರ್ಡ್ ನಂಬರ್ ತೆಗೆದುಕೊಳ್ಳಲಾಗುತ್ತದೆ ಮತ್ತು ಆಧಾರ್ ಕಾರ್ಡ್ ಸ್ಕ್ಯಾನ್ ಮಾಡುವುದರ ಮೂಲಕ ಜನರು ಸಿಮ್ ಖರೀದಿ ಮಾಡಬಹುದು.

Join Nadunudi News WhatsApp Group

ಒಂದು ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಖರೀದಿ ಮಾಡಬಹುದು
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಸಿಮ್ ಖರೀದಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನ ಜಾರಿಗೆ ತಂದಿದ್ದು ಒಂದು ಆಧಾರ್ ಕಾರ್ಡ್ ನಲ್ಲಿ ಹಲವು ಸಿಮ್ ಖರೀದಿ ಮಾಡಿದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.

How many sims can be purchased through Aadhaar card
Image Credit: asiatimes

ಸದ್ಯ ಜಾರಿಯಲ್ಲಿ ಇರುವ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯ ಆಧಾರ್ ಕಾರ್ಡಿನಲ್ಲಿ 18 ಸಿಮ್ ಖರೀದಿ ಮಾಡಬಹುದು. ಹಿಂದೆ ಒಂದು ಆಧಾರ್ ಕಾರ್ಡ್ ನಿಂದ 9 ಸಿಮ್ ಕಾರ್ಡ್ ಖರೀದಿ ಮಾಡಲು ಅವಕಾಶಗಳನ್ನ ನೀಡಲಾಗುತ್ತಿತ್ತು, ಆದರೆ ಈಗ ವ್ಯಾಪಾರ ವ್ಯವಹಾರದ ಉದ್ದೇಶಗಳಿಂದ ನಿಯಮಗಳಲ್ಲಿ ಬದಲಾವಣೆಗಳನ್ನ ಮಾಡಲಿದೆ.

ಒಂದು ಆಧಾರ್ ಕಾರ್ಡ್ ನಿಂದ 18 ಸಿಮ್ ಖರೀದಿ
ಒಬ್ಬ ವ್ಯಕ್ತಿಯ ಆಧಾರ್ ಕಾರ್ಡಿನಿಂದ 18 ಸಿಮ್ ಖರೀದಿ ಮಾಡಬಹುದು ಮತ್ತು ಅದಕ್ಕೂ ಹೆಚ್ಚು ಸಿಮ್ ಖರೀದಿ ಮಾಡಲು ಸಾಧ್ಯವಿಲ್ಲ. ಆಧಾರ್ ಕಾರ್ಡಿನಿಂದ ಸಿಮ್ ಖರೀದಿ ಮಾಡಿದರೆ TRAI ಆಧಾರ್ ಕಾರ್ಡ್ ನಂಬರ್ ಮೂಲಕ ನಮ್ಮ ಸಿಮ್ ಕಾರ್ಡಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನ ಪಡೆದುಕೊಳ್ಳುತ್ತದೆ.

It is mandatory to follow TRAI rules while purchasing SIM through Aadhaar card
Image Credit: commons

ಹೆಚ್ಚು ಸಿಮ್ ಖರೀದಿ ಮಾಡಿದರೆ ಕಾನೂನಿನ ಪ್ರಕಾರ ಅಪರಾಧ
ವ್ಯವಹಾರದ ಉದ್ದೆಹಗಳಿಂದ ಹೊರತುಪಡಿಸಿ ಬೇರೆಬೇರೆ ಉದ್ದೇಶಗಳಿಂದ ಹೆಚ್ಚುಹೆಚ್ಚು ಸಿಮ್ ಕಾರ್ಡುಗಳನ್ನ ಖರೀದಿ ಮಾಡಿದರೆ ಕಾನೂನಿನ ಪ್ರಕಾರ ಶಿಕ್ಷೆಯನ್ನ ಕೂಡ ಅನುಭವಿಸಬೇಕಾಗುವ ನಿಯಮಗಳು ಇದ್ದು ಸಿಮ್ ಖರೀದಿ ಮಾಡುವ ಮುನ್ನ ಜನರು ಎಚ್ಚರಿಕೆಯಿಂದ ಇರಬೇಕು.

ಒಬ್ಬ ವ್ಯಕ್ತಿ ಬೇರೆಬೇರೆ ಸಿಮ್ ಕಾರ್ಡುಗಳನ್ನ ಪದೇಪದೇ ಖರೀದಿ ಮಾಡಿದರೆ ಅವರ ಮೇಲೆ TRAI ನಿಗಾ ಇಡುತ್ತದೆ ಅನ್ನುವುದರ ಬಗ್ಗೆ ತಿಳಿದುಕೊಂಡಿರಬೇಕು.

Join Nadunudi News WhatsApp Group