One India-One Ticket: ಜಾರಿಗೆ ಬಂತು ಒಂದು ಭಾರತ ಒಂದು ಟಿಕೆಟ್, ಕೇಂದ್ರದ ಹೊಸ ಯೋಜನೆಯ ವೈಶಿಷ್ಟ್ಯ ಏನು ನೋಡಿ

ಇನ್ನುಮುಂದೆ ಒಂದು ಭಾರತ- ಒಂದು ಟಿಕೆಟ್ ಪ್ರಾರಂಭ...!

One India- One Ticket Facility: ದೇಶದಲ್ಲಿ ಜನರು ಸಾರಿಗೆ ವ್ಯವಸ್ಥೆಯಲ್ಲಿ ಹೆಚ್ಚಾಗಿ ರೈಲು ಸಂಚಾರವನ್ನು ಆರಿಸಿಕೊಳ್ಳುತ್ತಾರೆ. ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಅಗ್ಗೈ ಹಲವಾರು ವೈಶಿಷ್ಟ್ಯಗಳನ್ನು ಕೂಡ ಪರಿಚಯಿಸಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಕೂಡ ಎಲ್ಲ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ.

ಸದ್ಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗಾಗಿ ವಿಶೇಷ ಸೌಲಭ್ಯವನ್ನು ನೀಡಲು ಹೊರಟಿದೆ. ಭಾರತೀಯ ರೈಲ್ವೆ ಪರಿಚಯಿಸಿರುವ ಆ ವಿಶೇಷ ಸೌಲಭ್ಯ ಯಾವುದು…? ಈ ಸೌಲಭ್ಯದ ಪ್ರಯೋಜನವೇನು…? ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

One India- One Ticket Facility
Image Credit: Business-standard

ಇನ್ನುಮುಂದೆ ಒಂದು ಭಾರತ- ಒಂದು ಟಿಕೆಟ್ ಪ್ರಾರಂಭ…!
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ದೆಹಲಿ ಮೆಟ್ರೋ ರೈಲು ನಿಗಮ (DMRC) ಮತ್ತು ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) ಜೊತೆಗೆ ‘ಒಂದು ಭಾರತ – ಒಂದು ಟಿಕೆಟ್’ ಉಪಕ್ರಮವನ್ನು ಪರಿಚಯಿಸಲು ಪಾಲುದಾರಿಕೆ ಹೊಂದಿದೆ. ಈ ಹೊಸ ಯೋಜನೆಯು ದೆಹಲಿ/ಎನ್‌ಸಿಆರ್ ಪ್ರದೇಶದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಅನುಕೂಲಕರವಾಗಿಸುವ ಗುರಿಯನ್ನು ಹೊಂದಿದೆ. ಇನ್ನು One India- One Ticket ಸೌಲಭ್ಯದಿಂದ ಪ್ರಯಾಣಿಕರು ಸಾಕಷ್ಟು ಸೌಲಭ್ಯವನ್ನು ಪಡೆಯಬಹುದು. ಈ ಯೋಜನೆ ಪ್ರಯಾಣಿಕರಿಗೆ ಏನೆಲ್ಲಾ ಅಂಕ್ಕ್ಲಾ ಮಾಡಿಕೊಡಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

One India- One Ticket ನ ವೈಶಿಷ್ಟ್ಯಗಳೇನು…?
•ಮುಂಗಡ ಬುಕಿಂಗ್
ಭಾರತೀಯ ರೈಲ್ವೇ ಬುಕಿಂಗ್ ಅವಧಿಯಂತೆಯೇ ಪ್ರಯಾಣಿಕರು ಈಗ ದೆಹಲಿ ಮೆಟ್ರೋ ಟಿಕೆಟ್‌ ಗಳನ್ನು 120 ದಿನಗಳ ಮುಂಚಿತವಾಗಿ ಬುಕ್ ಮಾಡಬಹುದು.

•ವಿಸ್ತೃತ ವ್ಯಾಲಿಡಿಟಿ
ಮೆಟ್ರೋ ಟಿಕೆಟ್‌ ಗಳು ನಾಲ್ಕು ದಿನಗಳವರೆಗೆ ಮಾನ್ಯವಾಗಿರುತ್ತವೆ, ಪ್ರಯಾಣಿಕರಿಗೆ ಹೆಚ್ಚಿನ ನವೀಕರಣಗಳನ್ನು ನೀಡುತ್ತವೆ.

Join Nadunudi News WhatsApp Group

•ತಡೆರಹಿತ ಪ್ರಯಾಣ
ರೈಲ್ವೆ ಪ್ರಯಾಣಿಕರು ತಮ್ಮ ರೈಲು ಟಿಕೆಟ್‌ಗಳೊಂದಿಗೆ ದೆಹಲಿ/ಎನ್‌ಸಿಆರ್‌ನಲ್ಲಿರುವ ಮೂಲ ಅಥವಾ ಗಮ್ಯಸ್ಥಾನ ನಿಲ್ದಾಣದಲ್ಲಿ ದೆಹಲಿ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

•ರದ್ದತಿಗಳು
ಸಿಸ್ಟಮ್ ಸುಲಭ ರದ್ದತಿಗೆ ಅನುಮತಿಸುತ್ತದೆ. ಬಳಕೆದಾರರಿಗೆ ಅನುಕೂಲವನ್ನು ಹೆಚ್ಚಿಸುತ್ತದೆ.

One India- One Ticket
Image Credit: Times Of India

Join Nadunudi News WhatsApp Group