Pathan Movie Songs: ಇನ್ನೊಂದು ವಿವಾದದಲ್ಲಿ ಸಿಲುಕಿಕೊಳ್ಳುವ ಭೀತಿಯಲ್ಲಿ ದೀಪಿಕಾ, ಮತ್ತೆ ಟ್ರೊಲ್ ಆಗುವ ಭೀತಿ.

Pathan Movie Songs: ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಹಾಡೊಂದು ಬಾರಿ ವಿವಾದಕ್ಕೆ ಗುರಿಯಾಗಿತ್ತು. ಈ ವಿವಾದದ ನಡುವೆ ಪಠಾಣ್ ಚಿತ್ರ ಇನ್ನೊಂದು ಹಾಡು ಕೂಡ ನಾಳೆ ರಿಲೀಸ್ ಆಗಲಿದೆ.

ಬೇಷ ರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ ಕೇಸರಿ ಬಿಕಿನಿ ಬಾರಿ ವಿವಾದವನ್ನು ಹುಟ್ಟುಹಾಕಿತ್ತು. ಆ ಹಾಡಿನಲ್ಲಿನ ಸಾಹಿತ್ಯವು ಕೇಸರಿ ಬಣ್ಣಕ್ಕೆ ಅವಮಾನವಾಗುವ ರೀತಿ ಇದೆ ಎಂದು ಹಿಂದೂ ಪರ ಹೋರಾಟಗಾರರು ಕಿಡಿಕಾರಿದ್ದರು. ಇದೀಗ ಪಠಾಣ್ ಚಿತ್ರ ಇನ್ನೊಂದು ಹಾಡು ರಿಲೀಸ್ ಆಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ.

deepika padukone controversy
Image Credit: India Today

ಜೂಮೇ ಜೋ ಪಠಾಣ್ (Jhoome Joo Pathan) 
ಪಠಾಣ್ ಸಿನಿಮಾದ ಎರಡನೇ ಹಾಡಾದ ಜೂಮೇ ಜೋ ಪಠಾಣ್ ನಾಳೆ ರಿಲೀಸ್ ಮಾಡುತ್ತಿರುವ ಕುರಿತು ನಿರ್ಮಾಣ ಸಂಸ್ಥೆಯು ವಿಷಯವನ್ನು ಹಂಚಿಕೊಂಡಿದ್ದು, ಈ ಹಾಡು ಕೂಡ ಸಕತ್ ಆಗಿಯೇ ಚರ್ಚೆ ಆಗಲಿದೆ. ಎಂದು ಮೊದಲೇ ಹೇಳಿಕೊಂಡಿದೆ. ಹಾಗಾಗಿ ಮತ್ತೇನಾದರೂ ವಿವಾದಕ್ಕೆ ಕಾರಣವಾಗಿರುವ ಅಂಶಗಳು ಇರಬಹುದಾ ಎನ್ನುವ ಚರ್ಚೆ ಕೂಡ ನಡೆದಿದೆ.

ಎರಡನೇ ಹಾಡಿನಲ್ಲೂ ಹಾಟ್ ಆಗಿ ಕಾಣಿಸಿಕೊಂಡ ನಟಿ
ಈಗಾಗಲೇ ಬೇಷ ರಂ ರಂಗ್ ಹಾಡಿನಲ್ಲಿ ವಿವಾದಕ್ಕೆ ಸಿಕ್ಕಿಕೊಂಡಿರುವ ನಟಿಯ ಎರಡನೇ ಹಾಡು ಜೂಮೇ ಜೋ ಪಠಾಣ್ ಕೂಡ ನಾಳೆ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಹಾಗೆಯೆ ಈ ಹಾಡಿನ ಒಂದು ಫೋಟೋ ಮಾತ್ರ ರಿಲೀಸ್ ಆಗಿದೆ.

deepika padukone controversy
Image Credit: India Today

ಈ ಹಾಡಿನಲ್ಲೂ ದೀಪಿಕಾ ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲೂ ಗ್ಲಾಮೆರ್ ಗೆ ಕೊರೆತೆಯಿಲ್ಲ. ಇನ್ನೇನು ನಾಳೆ ರಿಲೀಸ್ ಆಗಲಿರುವ ಈ ಹಾಡು ಹೇಗೆ ಇರಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲೂ ಇದೆ.

Join Nadunudi News WhatsApp Group

ಶಾರುಖ್ ಖಾನ್ ಅವರ ಅಪರೂಪದ ಸಾಧನೆ
ಇವೆಲ್ಲ ವಿವಾದಗಳ ನಡುವೆ ಶಾರುಖ್ ಖಾನ್ ಮತ್ತೊಂದು ಹೊಸ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ. ಮ್ಯಾಗಜಿನ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನಟ ಶಾರುಖ್ ಖಾನ್ ಆಗಿದ್ದಾರೆ.

ಪ್ರತಿಷ್ಠಿತ ಎಂಪಾಯರ್ ಮ್ಯಾಗಜಿನ್ (Empire Magazine), ಸಾರ್ವಕಾಲಿಕ 50 ಶ್ರೇಷ್ಠ ನಟರ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ 50 ಶ್ರೇಷ್ಠ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಕೂಡ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ. ಇನ್ನು ಶಾರುಖ್ ಖಾನ್ ಅವರ ಈ ವಿಶೇಷ ಸಾಧನೆ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Join Nadunudi News WhatsApp Group